Font Problem

       
 
 
 

ಸಂತ  ತುಕಾರಾಮರ ಸಂಕ್ಷಿಪ್ತ ಚರಿತ್ರೆ

 
 
 

ಸಂತ  ತುಕಾರಾಮರ ಸಂಕ್ಷಿಪ್ತ ಚರಿತ್ರೆ

- ಹರಿಭಕ್ತ ಪರಾಯಣ (ಹ. ಭ. ಪ.) ಶ್ರೀಧರ ದೇಹೂಕರ

 

            ಕನ್ನಡಾನುವಾದ: ವಿರೂಪಾಕ್ಷ ಕುಲಕರ್ಣಿ

                ೧೦೯೮/೧೧-ಬಿ, ಪಾರ್ಥ ಹೆರಿಟೇಜ,

                ಮಾಡೆಲ್ ಕಾಲನಿ, ಪುಣೆ - ೧೬.

                ದೂರವಾಣಿ : ೦೨೦-೨೫೬೫೯೦೬೩

ಯೇ ತು ಧರ್ಮ್ಯಾಮೃತಮಿದಮ್" - ಗೀತೆ, ೧೨.೨೦

ತೇ ಹೇ ಗೋಷ್ಟೀ ರಮ್ಯ| ಅಮೃತಧಾರಾಧರ್ಮ್ಯ| ಕರಿತೀ ಪ್ರತೀತಿ ಗಮ್ಯ| ಐಕೋನಿ ಜೇ||"- eನದೇವಿ, ೧೨.೨೩೦

ದೇವರ ಚರಿತ್ರೆಯನ್ನು ಪರಮಾಮೃತ ಎಂದೂ ಭಕ್ತನ ಚರಿತ್ರೆಯನ್ನು ಧರ್ಮ್ಯಾಮೃತ ಎಂದೂ ಅನ್ನಲಾಗಿದೆ. ಸಂತರು ದೇವರ ಚರಿತ್ರೆಗಳನ್ನು ಹಾಡಿ ಹೊಗಳಿ ಹೇಳಿರುವರು. ಆದರೆ ಸಂತರ ಚರಿತ್ರೆಗಳನ್ನು ಕುರಿತು ಹೇಳುವುದು ನಮಗೆ ಬಲು ಕಷ್ಟದ್ದು. ಇದಕ್ಕೆ ಕಾರಣವೆಂದರೆ, ಸಂತರು ತಾವಿದ್ದ ಹಾಗೆ ಕಾಣರು, ಕಾಣುವಂತೆ ಇರರು.  ಇದಲ್ಲದೆ ನಮ್ಮ ಶಬ್ದಸೃಷ್ಟಿಗೆ ತನ್ನದೇ ಆದ ಒಂದು ಮಿತಿಯಿದೆ.

ಆಮುತೇ ಕರಾವಯಾ ಗೋಠೀ| ತೇ ಝಾಲೀಚ ನಾಹೀ ವಾಗ್‌ಸೃಷ್ಟಿ | ಆಮ್ಹಾಲಾಗೀ ದಿಠೀ| ತೇ ದಿಠೀಚ ನೋಹೇ || (ಅಮೃತಾನುಭವ)

ನೀವು ಅವರನ್ನು , ನೀವ್ಯಾರು? ಎಲ್ಲಿಯವರು? ಎಲ್ಲಿಂದ ಬಂದಿರಿ? ಎಲ್ಲಿಗೆ ಹೋಗಲಿರುವಿರಿ? ನಿಮ್ಮ ಹೆಸರೇನು? ನಿಮ್ಮ ರೂಪ ಎಂಥದು? - ಎಂದು ಕೇಳಿದಿರಾದರೆ ಅವರು, ಏನೂ ಇಲ್ಲ - ಅಂದಾರು.

 

ಕಾಂಹೀಚ ಮೀ ನವ್ಹೇ ಕೋಣಿಯೇ ಗಾಂವೀಚಾ | ಯೇಕಟು ಠಾಯೀಚ್ಯಾ ಠಾಯೀ ಏಕು ||||

ನಾಹೀ ಜಾತ ಕೋಠೇ ಯೇತ ಫಿರೋನಿಯಾ | ಅವಘೇಚಿ ವಾಯಾವೀಣ ಬೋಲಿ ||||

ತುಕಾ ಮ್ಹಣೇ ನಾವ ರೂಪ ನಾಹೀ ಆಮ್ಹಾ | ವೇಗಳಾ ತ್ಯಾ ಕರ್ಮಾ ಅಕರ್ಮಾಶೀ ||||

 

ಪರಿಸ್ಥಿತಿಯು ಹೀಗಿರುವಲ್ಲಿ , ನಾವು ಸಂತಶ್ರೇಷ್ಠರಾದ ಶ್ರೀ ತುಕಾರಾಮ ಮಹಾರಾಜರ ಮಹಾನ್ ಚರಿತ್ರೆಯ ಕೊಂಚ ಭಾಗವನ್ನು ನೀಡಲು ಯತ್ನಿಸಲಿರುವೆವು.

ಹುಟ್ಟು ಮತ್ತು ಪೂರ್ವಜರು

ಧನ್ಯ ದೇಹುಗಾವ ಪುಣ್ಯಭೂಮೀ ಠಾವ | ತೇಥೇ ನಾಂದೇ ದೇವ ಪಾಂಡುರಂಗ ||||

ಸಂತ  ತುಕಾರಾಮರ ಜನ್ಮಭೂಮಿ, ಕರ್ಮಭೂಮಿ ಎನ್ನಿಸಿದ ದೇಹೂ ಊರು ಒಂದು ಪುಣ್ಯಭೂಮಿ. ದೇಹೂ ಊರಿಗೆ ಧನ್ಯತ್ವ , ಪುಣ್ಯತ್ವಗಳು ಒದಗಿದುದು ಅಲ್ಲಿ ನೆಲೆಸಿದ ಪಾಂಡುರಂಗ    ದೇವತೆಯಿಂದಾಗಿ. ಇದೊಂದು ಜಾಗೃತ ಸ್ಥಾನ.

ಇಂದ್ರಾಯಣಿ ಹೊಳೆಯ ಅಂದದ ದಡದಲ್ಲಿ ಪಾಂಡುರಂಗ ದೇವನ ದೇವಾಲಯವಿದೆ. ಮರದಡಿಯ ಕಟ್ಟೆಯ ಮೇಲೆ ಗರುಡನು ಕೈ ಜೋಡಿಸಿ ನಿಂತಿರುವನು. ಬಾಗಿಲಲ್ಲಿ ವಿಘ್ನರಾಜ. ಹೊರಬದಿಗೆ ಭೈರವ ಮತ್ತು       ಹನುಮಂತರು. ದಕ್ಷಿಣಕ್ಕೆ ಈಶ್ವರನ ದೇಗುಲ. ಪಕ್ಕದಲ್ಲಿಯೇ ಬಲ್ಲಾಳ ವನ. ಅಲ್ಲಿ ಸಿದ್ಧೇಶ್ವರನ ಅಷ್ಠಾನವಿದೆ.  ಕ್ಷೇತ್ರವಾಸಿಗಳು ಧನ್ಯರಾಗಿದ್ದರು. ಅವರೆಲ್ಲ ಸುದೈವಿಗಳು. ಮಾತಿನಿಂದ ದೇವರ ನಾಮವನ್ನು ಘೋಷಿಸು ತ್ತಿರುವರು. ಸಂತ  ತುಕಾರಾಮರ ಕಾಲದ ದೇಹೂ ಊರಿನ ಬಣ್ಣನೆ ಇದು.

ಸಂತ ತುಕಾರಾಮರಿಗಿಂತ ಸುಮಾರು ೩೦೦ ವರ್ಷಗಳಷ್ಟು ಹಿಂದೆ ಅವರ ಪೂರ್ವಜರಾದ ವಿಶ್ವಂಭರ(ಪ್ಪ )ಬಾಬಾ ಇವರು ದೇಹೂ ಊರಿನಲ್ಲಿ ವಾಸಿಸುತ್ತಿದ್ದರು. ಈ ಮನೆತನದ ಕುಲದೇವರೆಂದರೆ ವಿಠೋಬಾ. ವಿಶ್ವಂಭರಬಾಬಾರ ತಂದೆಯ ಕಾಲದಿಂದಲೇ ಅವರಲ್ಲಿ ಆಷಾಢ-ಕಾರ್ತಿಕಗಳ ವಾರಿ ನಡೆದುಕೊಂಡು ಬಂದಿತ್ತು. ಪಂಢರಪುರಕ್ಕೆ ಕಾಲ್ನಡಿಗೆಯಲ್ಲಿ , ಗುಂಪಾಗಿ ವರ್ಷಕ್ಕೆ ಎರಡು ಸಲ ಯಾತ್ರೆಗೆ ಹೋಗಿ ಬರುವುದು ವಾರಿ ಪದ್ಧತಿಯ ವಿಶೇಷ. ವಿಶ್ವಂಭರಬಾಬಾರ ತಾಯಿ ವಾರಿಗೆ ಹೆಚ್ಚಿನ ಒತ್ತು ನೀಡುತ್ತಿದ್ದರು.         ವಿಶ್ವಂಭರಬಾಬಾರ ಸೇವೆಯಿಂದ ಮೆಚ್ಚಿದ ದೇವನು ಪಂಢರಪುರದಿಂದ ಓಡೋಡುತ್ತ ದೇಹೂಕ್ಕೆ ಬಂದನು.  ಪುಂಡಲಿಕನ ಅನನ್ಯ ಸೇವೆಯಿಂದಾಗಿ ದೇವನು ಇದೇ ರೀತಿ ವೈಕುಂಠದಿಂದ  ಪಂಢರಪುರಕ್ಕೆ ಓಡೋಡಿ          ಬಂದಿದ್ದನು.

ಪುಂಡಲಿಕಾಚೇ ನಿಕಟ ಸೇವೇ | ಕೈಸಾ ಧಾವೇ ಬರಾಡೀ ||||

ಮೂಳ ಪುರುಷ ವಿಶ್ವಂಭರ | ವಿಠ್ಠಲಾಚಾ ಭಕ್ತ ಥೋರ ||||

ತ್ಯಾಚೇ ಭಕ್ತೀನೇ ಪಂಢರೀ | ಸಾಂಡೂನೀ ಆಲೇ ದೇಹೂ ಹರೀ ||||

ದೇವನು ಆಷಾಢ ಶುದ್ಧ ೧೦ನೆಯ ದಿನದಂದು ವಿಶ್ವಂಭರಬಾಬಾರ ಕನಸಿನಲ್ಲಿ ಕಂಡು ತಾನು ನಿಮ್ಮೂರಿಗೆ ಬಂದಿರುವೆನೆಂದು ಹೇಳಿ ................ ನಿದ್ರಿಸ್ತನಾದನು. ವಿಶ್ವಂಭರಬಾಬಾರು ಮುಂಜಾವಿನಲ್ಲಿ ಊರವರ ಜೊತೆಗೆ ಅಲ್ಲಿಗೆ ಹೋದರು. ಅಲ್ಲಿ ಅವರಿಗೆ ಶ್ರೀ ವಿಠ್ಠಲ, ರಖುಮಾಯಿಯ ಸ್ವಯಂಭೂ ವಿಗ್ರಹಗಳು ದೊರೆತವು. ಬಾಬಾರು ಆ ವಿಗ್ರಹಗಳನ್ನು ತಮ್ಮ ವಾಡೆಯ ದೇವರ ಮನೆಯಲ್ಲಿ ತಂದು ಸ್ಥಾಪಿಸಿದರು. ಸುತ್ತಲ ಹತ್ತು ಹರದಾರಿಗಳ ಊರವರು ದೇವರ ದರ್ಶನಕ್ಕಾಗಿ ಬರತೊಡಗಿದರು. ಪ್ರತಿವರ್ಷ ದೇವರ ಉತ್ಸವ ಜರುಗಹತ್ತಿತು. ಈ ಮಹೋತ್ಸವದ ವೆಚ್ಚಕ್ಕಾಗಿ ಇನಾಮಿನ ಹೊಲ ದೊರಕಿತು. ಶುದ್ಧ ಏಕಾದಶಿಯಂದು ವಾರಿ ಸೇರತೊಡಗಿತು. ವಿಶ್ವಂಭರಬಾಬಾರು ತೀರಿಕೊಂಡ ಬಳಿಕ ಅವರ ಮಕ್ಕಳಾದ ಹರಿ ಮತ್ತು ಮುಕುಂದರು ದೇವರ ಸೇವೆಯನ್ನು ಬಿಟ್ಟು ಮೊದಲಿನ ಕ್ಷಾತ್ರವೃತ್ತಿಯತ್ತ ಹೊರಳಿದರು. ತಮ್ಮ ಕುಟುಂಬದವರೊಂದಿಗೆ ರಾಜರ ಆಶ್ರಯಕ್ಕೆ ಹೋದರು. ಸೇನೆಯಲ್ಲಿ ಅವರಿಗೆ ತಕ್ಕ ಹುದ್ದೆಗಳು ದೊರೆತವು. ಆದರೆ ಅವರ ಈ ಕೃತ್ಯ ತಾಯಿ ಆಮಾಬಾಯಿಗೆ ಇಷ್ಟವಾಗಲಿಲ್ಲ. ದೇವನಿಗೂ ಅದು ಇಷ್ಟವಾಗಲಿಲ್ಲ. ದೇವನು ಆಮಾಬಾಯಿಯ ಕನಸಿನಲ್ಲಿ ಕಾಣಿಸಿಕೊಂಡು, ನಾನು ನಿಮಗಾಗಿ ಪಂಢರಪುರವನ್ನು ತೊರೆದು ದೇಹೂಕ್ಕೆ ಬಂದೆ. ಆದರೆ ನೀವು ಮಾತ್ರ ನನ್ನನ್ನು ತೊರೆದು ರಾಜನ ಆಶ್ರಯಕ್ಕೆ  ಹೋದಿರಿ. ಇದು ಒಳ್ಳೆಯದಲ್ಲ. ಹಿಂತಿರುಗಿ ದೇಹೂಕ್ಕೆ ನಡೆಯಿರಿ, ಎಂದನು. ಆಮಾಬಾಯಿ ಈ ಸಂಗತಿಯನ್ನು ತನ್ನ ಮಕ್ಕಳಿಗೆ ಹೇಳಿದಳು. ದೇಹೂ ಊರಿಗೆ ಹಿಂತಿರುಗುವ ಬಗೆಗೆ ಪರಿಪರಿಯಾಗಿ ಹೇಳಿದಳು. ಆದರೆ ಆ ಮಕ್ಕಳು ಅವಳ ಹೇಳಿಕೆಯನ್ನು ಕಡೆಗಣಿಸಿದರು. ಮುಂದೆ ಕೆಲವೇ ದಿನಗಳಲ್ಲಿ ಆ ರಾಜ್ಯ ಪರಸತ್ತೆಯ ದಾಳಿಗೆ  ಈಡಾಯಿತು. ಸೋದರರಿಬ್ಬರೂ ರಣರಂಗದಲ್ಲಿ ಹಗೆಗಳೊಡನೆ ಕಾದುತ್ತ ವೀರಮರಣವನ್ನು ಅಪ್ಪಿದರು. ಮುಕುಂದನ        ಮಡದಿಯು ಸತಿ ಹೋದಳು. ಹರಿಯ ಹೆಂಡತಿ ಬಸುರಿಯಾಗಿದ್ದಳು. ಅವಳನ್ನು ಕರೆದುಕೊಂಡು ಆಮಾಬಾಯಿ ದೇಹೂಕ್ಕೆ ಹಿಂತಿರುಗಿ ಬಂದಳು. ಸೊಸೆಯನ್ನು ಬಾಣಂತಿತನಕ್ಕಾಗಿ ಅವಳ ತವರಿಗೆ ಕಳಿಸಿದಳು. ತಾನು ದೇವರ ಸೇವೆಗೆ ತೊಡಗಿದಳು. ಹರಿಯ ಹೆಂಡತಿ ಗಂಡು ಮಗುವನ್ನು   ಹೆತ್ತಳು. ಮಗುವಿಗೆ ವಿಠ್ಠಲ ಎಂದು                ಹೆಸರಿಡಲಾಯಿತು. ವಿಠ್ಠಲನ ಮಗ ಕಾನ್ಹೋಬಾ ಹಾಗೂ ಕಾನ್ಹೋಬಾನ ಮಗನೆಂದರೆ ಬೋಲ್ಹೋಬಾ ಈತ. ಬೋಲ್ಹೋಬರಿಗೆ ಮೂವರು ಗಂಡು ಮಕ್ಕಳು. ಹಿರಿಯವ ಸಾವಜಿ, ನಡುವಿನವ ತುಕಾರಾಮ ಮತ್ತು ಕಿರಿಯವ ಕಾನ್ಹೋಬರಾಯ.

ಶ್ರೀ ತುಕಾರಾಮರು ಹುಟ್ಟಿ ಬಂದ ಕುಲ ಪವಿತ್ರವಾದುದು.

ಪವಿತ್ರ ತೇ ಕುಳ ಪಾವನ ತೋ ದೇಶ | ಜೇಥೇ ಹರೀಚೇ ದಾಸ ಜನ್ಮ ಘೇತೀ ||||

ಅದು ಕ್ಷತ್ರಿಯರ ಕುಲವಾಗಿತ್ತು. ಪೂರ್ವಜರು ಶತ್ರುಗಳೊಡನೆ ಕಾದಾಡುವಾಗ ರಣರಂಗದಲ್ಲಿ ದೇಹವಿಟ್ಟವರು.  ಸುಸಂಸ್ಕೃತವಾದ ಮನೆತನ. ಧಾರ್ಮಿಕತೆಯಿಂದ ಕೂಡಿದುದು. ಮನೆಯಲ್ಲಿ ಹಲವು ತಲೆಮಾರುಗ ಳಿಂದ ಶ್ರೀ ವಿಠ್ಠಲನ ಉಪಾಸನೆ ಸಾಗುತ್ತ ಬಂದಿತ್ತು. ಪಂಢರಿಯ ವಾರಿ ಸಾಗಿತ್ತು. ಮಹಾಜನ ಪದದ ಉಂಬಳಿ ಯಿತ್ತು. ಹೊಲಗದ್ದೆ , ವಾಡೆಗಳಿದ್ದವು. ಸಾಹುಕಾರ ವೃತ್ತಿ ವ್ಯಾಪಾರ ವಹಿವಾಟುಗಳಿದ್ದವು. ಎರಡು ವಾಡೆಗಳಿದ್ದವು. ಒಂದು ವಾಸಕ್ಕಾಗಿ, ಇನ್ನೊಂದು ಮಾರುಕಟ್ಟೆಯ ಮಹಾಜನ ಪದದ ವಹಿವಾಟಿಗಾಗಿ. ಊರಲ್ಲಿ ಒಳ್ಳೆಯ          ಮರ್ಯಾದೆ-ಮನ್ನಣೆಗಳಿದ್ದವು.  ಸುತ್ತಲ ನಾಡಿನಲ್ಲೆಲ್ಲ ಪ್ರತಿಷ್ಠೆಯಿತ್ತು. ಅವರು ಬೇಸಾಯವನ್ನು ಕೈಕೊಂಡ ಕಾರಣ ಒಕ್ಕಲಿಗ, ಬೇಸಾಯಗಾರ ಎನ್ನಿಸಿದ್ದರು. ಅವರ ವ್ಯಾಪಾರ-ವಹಿವಾಟುಗಳಿಂದಾಗಿ ಅವರನ್ನು (ವಾಣೀ)         ವ್ಯಾಪಾರಿಗಳು ಎಂದೆನ್ನಲಾಗುತ್ತಿತ್ತು. ಸಂತ   ತುಕಾರಾಮರು    ಇವೆರಡನ್ನೂ ಕಡೆಗಣಿಸಿದರೆಂದು     ಅವರನ್ನು ಗೋಸಾವಿ ಎಂದು ಕರೆಯಲಾಯಿತು.

ಗೋಸಾವಿ ಎನ್ನುವುದು ಈ ಕುಲದ ಅಡ್ಡ ಹೆಸರೇನೂ ಅಲ್ಲ. ಇವರ ಅಡ್ಡ ಹೆಸರು, ಮೋರೇ. ಗೋಸಾವಿ ಒಂದು ಪದವಿ ಅಷ್ಟೆ . (ಇಂದ್ರಿಯಾಚೇ ಧನೀ ಆಮ್ಹೀ ಗೋಸಾವೀ - ಇಂದ್ರಿಯದ ಒಡೆಯರಾದುದರಿಂದ ನಾವು ಗೋಸಾವಿಗಳು) (ಭಗವತ್) ಗೀತೆಯ ಕಾಲಕ್ಕೆ ವೈಶ್ಯರನ್ನು ಶೂದ್ರರೆಂದು ಪರಿಗಣಿಸುವ ಪರಿಪಾಠ ಬಂದಿತು.

ಸ್ತ್ರಿಯೋ ವೈಶ್ಯಾಸ್ತಥಾ ಶೂದ್ರಾಸ್ತೇಪಿ ಯಾಂತಿ - ಪರಾಂ ಗತಿಮ್ || - ಗೀತೆ, ೯.೩೨

ಸಂತ  ಜ್ನಾನದೇವರ ಕಾಲದಲ್ಲಿ ಕ್ಷತ್ರಿಯರನ್ನು ಕೂಡ ಶೂದ್ರರೆಂದು ಪರಿಗಣಿಸಲು  ಶುರುವಾಯಿತು.

ತೈಸೇ ಕ್ಷತ್ರೀ ವೈಶ್ಯ ಸ್ತ್ರಿಯಾ | ಕಾ ಶೂದ್ರ ಅಂತ್ಯಜಾದಿ ಇಯಾ || - eನೇದೇವೀ, ೯.೪೬೦

 ಎರಡೇ ಎರಡು ವರ್ಣಗಳು ಉಳಿದುಕೊಂಡಿದ್ದವು. ಬ್ರಾಹ್ಮಣ ಮತ್ತು ಶೂದ್ರ. ಹೀಗಾಗಿ ರನ್ನು ಶೂದ್ರ ಎಂದೆನ್ನಲಾಗುತ್ತಿತ್ತು.

ರಾಜಕೀಯ, ಧಾರ್ಮಿಕ ಮತ್ತು ಸಾಮಾಜಿಕ ಸ್ಥಿತಿಗಳು

ಆ ಕಾಲಕ್ಕೆ ದಕ್ಷಿಣ ಭಾರತದಲ್ಲಿ ಮುಸಲ್ಮಾನರ ಆಳ್ವಿಕೆ ಇತ್ತು. ಗೋವೆಯಲ್ಲಿ ಪೋರ್ತುಗೀಜರಿದ್ದರು. ವಿಜಾಪೂರದ ಆದಿಲಶಾಹಿ, ಅಹಮ್ಮದನಗರದ ನಿಜಾಮಶಾಹಿ, ಗೋವಳಕೊಂಡದ ಕುತುಬಶಾಹಿಗಳು ತಮ್ಮ     ತಮ್ಮಲ್ಲಿ ಕಾದಾಡುತ್ತಿದ್ದವು. ಊರುಗಳು ಸುಟ್ಟು ಬೂದಿಯಾಗುತ್ತಿದ್ದವು. ಸುಲಿಗೆ ಸಾಗಿತ್ತು. ರಾಜರುಗಳು ವಿಲಾಸಗಳಲ್ಲಿ ಮೈಮರೆತಿದ್ದರು. ಅವರು ಪ್ರಜೆಗಳನ್ನು ಪೀಡಿಸುತ್ತಿದ್ದರು. ಬ್ರಾಹ್ಮಣರು ತಮ್ಮ ಆಚಾರಗಳನ್ನು ತೊರೆದಿದ್ದರು. ಕ್ಷತ್ರಿಯರು ವೈಶ್ಯರನ್ನು ತೊಂದರೆಗೀಡು ಮಾಡುತ್ತಿದ್ದರು. ಬಲವಂತದ ಮತಾಂತರ ಸಾಗಿತ್ತು."

ಮಹಾರಾಜರು ಹೀಗೆಂದರು :

ಸಾಂಡಿಲೇ ಆಚಾರ | ದ್ವಿಜ ಚಾಹಾಡ ಝಾಲೇ ಚೋರ ||

ರಾಜಾ ಪ್ರಜಾ ಪಿಡೀ | ಕ್ಷತ್ರೀ ವೈಶ್ಯ ಯಾಶೀ ನಾಡೀ ||

ವೈಶ್ಯ ಹಾಗೂ ಶೂದ್ರರ ನಡುವಣ ಸಂಬಂಧಗಳನ್ನು ಕುರಿತಂತೂ ಹೇಳಲೇಬೇಕಿಲ್ಲ. ಧರ್ಮ ಲೋಪ ಹೊಂದಿತ್ತು.  ಅಧರ್ಮ ಸೊಕ್ಕೇರಿತ್ತು.

ಐಸೇ ಅಧರ್ಮಾಚೇ ಬಳ | ಧರ್ಮ ಲೋಪಲಾ ಸಕಳ ||||

ಜನರು ಅಧರ್ಮವನ್ನೇ ಧರ್ಮ ಎಂದೆನ್ನತೊಡಗಿದರು. ಸಂತರಿಗೆ ಮರ್ಯಾದೆ ಸಲ್ಲದಂತಾಯಿತು.

ಸಂತಾನಾಹೀ ಮಾನ | ದೇವ ಮಾನೀ ಮುಸಲ್ಮಾನ ||||

ಹಲವರು ದೇವತೆಗಳನ್ನು ಹಿಂಬಾಲಿಸುತ್ತ ಸಮಾಜ ಹರಕು ಮುರುಕಾಗಿತ್ತು. ಧರ್ಮದ ಬಗೆಗೆ ಆಕರ್ಷಣೆ ಎನ್ನುವುದು ಉಳಿದಿರಲಿಲ್ಲ. ಅಜ್ನಾನದ ಕತ್ತಲು ಕವಿದಿತ್ತು. ಜನ ಬೆಳಕು ಬೀರುವ ಸೂರ್ಯನಿಗಾಗಿ ಕಾದಿದ್ದರು. ಅವಸ್ಥೆ ಹೀಗಿರುವಾಗ ಚಿತ್ ಸೂರ್ಯನೊಬ್ಬನು ದೇಹೂ ಊರಿನಲ್ಲಿ ಉದಯಿಸಿದನು.

ಸಂತಗೃಹೀ ಮೇಳೀ | ಜಗತ್ ಅಂಧ್ಯಾ ಗಿಳೀ | ಪೈಲ ಉದಯಾಚಳೀ | ಭಾನು ತುಕಾ ||||  (ರಾಮೇಶ್ವರ ಭಟ್ಟ ಅಭಂಗ)

ದೊಡ್ಡ ಭಕ್ತರಾದ ಬೋಲ್ಹೋಬಾ ಹಾಗೂ ಮಾತೆ ಕನಕಾಯಿ ಇವರ ಹೊಟ್ಟೆಯಲ್ಲಿ ಶಕೆ ೧೫೩೦ರಲ್ಲಿ         ಸಂತ  ತುಕಾರಾಮರ ಜನ್ಮವಾಯಿತು. ಸಿರಿವಂತರ ಮನೆತನ. ಹೀಗಾಗಿ ಅವರ ಬಾಲ್ಯವೆಲ್ಲ ಅಕ್ಕರೆ ಹಾಗೂ ಆಟಪಾಟಗಳಲ್ಲಿ ಕಳೆಯಿತು. ಪಂತೋಜಿಯಿಂದ ಪ್ರಾಥಮಿಕ ಶಿಕ್ಷಣ. ಅವರು ಕೈಯಲ್ಲಿ ಕಲ್ಲು-           ಪಾಟಿಯನ್ನು ಹಿಡಿದುಕೊಂಡು ಮಕ್ಕಳ ಕೈ ಹಿಡಿದು ಅವರಿಗೆ ಓದು-ಬರಹಗಳನ್ನು ಕಲಿಸುತ್ತಿದ್ದರು.

ಅರ್ಭಕಾಚೇ ಸಾಠೀ | ಪಂತೇ ಹಾತೇ ಧರಿಲೀ ಪಾಟೀ ||||

ಮಕ್ಕಳು ಕಲ್ಲು ಹರಳುಗಳಿಂದ ಅಕ್ಷರಗಳನ್ನು ರಚಿಸುತ್ತಿದ್ದರು.

ಓನಾಮ್ಯಾಚ್ಯಾ ಕಾಳೇ | ಖಡೇ ಮಾಂಡಿಯೇಲೇ ಬಾಳೇ |||

ತಂದೆ ಬೋಲ್ಹೋಬಾರಿಂದ  ತುಕಾರಾಮರಿಗೆ ವ್ಯವಹಾರ ಮತ್ತು ಪರಮಾರ್ಥಗಳ ಶಿಕ್ಷಣ ದೊರಕಿತು.     ಹಿರಿಯ ಮಗ ಸಾವಜೀ ಇವನು ವಾಣಿಜ್ಯೋದ್ಯಮಗಳತ್ತ ಗಮನ ಹರಿಸಲು ನಿರಾಕರಿಸಿದ್ದರಿಂದ ತಂದೆಯು   ತುಕಾರಾಮರಿಗೆ ವೃತ್ತಿ , ವ್ಯಾಪಾರ ಹಾಗೂ ಸಾಹುಕಾರಿಕೆಗಳತ್ತ ಗಮನ ನೀಡಲು ಹೇಳಿದರು. ಮಾರುಕಟ್ಟೆಯ ಪೇಟೆಯಲ್ಲಿದ್ದ ಮಹಾಜನಪದದ ವಾಡೆಯಲ್ಲಿ ತಂದೆಯ ಕೈಕೆಳಗೆ ದುಡಿಯುತ್ತ  ತುಕಾರಾಮರಿಗೆ ವ್ಯಾಪಾರ  ವಹಿವಾಟಿನ ಅರಿವು ಆಗತೊಡಗಿತು. ೧೩ನೆಯ ವಯಸ್ಸಿನವರಾದಾಗಲೆ ಸಂಸಾರ ಅವರ ಕೊರಳಿಗೆ ಬಂದು ಬಿದ್ದಿತು.  ತುಕಾರಾಮರು ಬಲು ಬೇಗ ವ್ಯವಹಾರಗಳನ್ನು ತಾವೇ ನೋಡಿಕೊಳ್ಳಹತ್ತಿದರು.   ಅವರು ವ್ಯಾಪಾರೋದ್ಯಮ ಹಾಗೂ ಸಾಹುಕಾರಿಕೆಗಳಲ್ಲಿ ಚೆನ್ನಾಗಿ ನೆಲೆಯೂರಿದರು. ಜನ ಅವರನ್ನು ಮೆಚ್ಚಿಕೊಳ್ಳಹತ್ತಿದರು. ತುಕಾರಾಮರು ತಮ್ಮ ಮನೆಯ ಶುದ್ಧ ಸಾತ್ವಿಕವಾದ ಆಚರಣೆಯನ್ನು ಪೇಟೆಯ ತಮ್ಮ ಮನೆ-        ವ್ಯಾಪಾರಗಳಲ್ಲೂ ತಂದರು. ಮೂರೂ ಜನ ಸೋದರರ ಮದುವೆಗಳು ನೆರವೇರಿದವು. ತುಕಾರಾಮರ ಮೊದಲ ಹೆಂಡತಿಗೆ ದಮ್ಮಿನ ತೊಂದರೆಯಿತ್ತು. ಹೀಗಾಗಿ  ಅವರು ಪುಣೆಯ ಹೆಸರಾದ ಸಾಹುಕಾರ ಅಪ್ಪಾಜೀ ಗುಳವೇ   ಅವರ ಮಗಳಾದ ಸೌ. ಜಿಜಾಬಾಯಿ ಅಲಿಯಾಸ ಆವಲಿ ಇವರನ್ನು ಮದುವೆಯಾದರು. ಒಂದು ಸಿರಿವಂತ ಮನೆತನದ ಮದುವೆ ಇನ್ನೊಂದು ಸಿರಿವಂತ ಮನೆತದೊಡನೆ ನಡೆದಂತಾಯಿತು. ಐಹಿಕ ಸಂಪತ್ತು ತನ್ನ ಪರಮೋಚ್ಚ ಬಿಂದುವಿನಲ್ಲಿತ್ತು. ಮನೆ ಕಾಳು-ಕಡಿಗಳಿಂದ ತುಂಬಿತ್ತು. ಪ್ರೀತಿಯನ್ನು ಮಳೆಗರೆಯುವ ತಾಯಿತಂದೆಗಳು,        ಸಜ್ಜನರಾದ ಸೋದರರು, ಆರೋಗ್ಯದಿಂದ ತುಂಬಿದ ಮೈಕಟ್ಟು ಯಾವುದೇ ಬಗೆಯ ಕೊರತೆಗಳಿರಲಿಲ್ಲ.

ಮಾತಾ ಪಿತಾ ಬಂಧು ಸಜ್ಜನ | ಘರೀ ಉದಂಡ ಧನ ಧಾನ್ಯ |

ಶರಿರೀ ಆರೋಗ್ಯ ಲೋಕಾತ ಮಾನ | ಏಕಹಿ ಉಣೇ ಅಸೇನಾ ||||  - (ಮಹಿಪತಿಬಾಬಾ ಚರಿತ್ರೆ)

ಸುಖ-ಸಮಾಧಾನ, ಐಶ್ವರ್ಯಗಳ ಈ ದಿನಗಳು ಯಾವಾಗ ಕಳೆದವೋ, ಎಲ್ಲಿ ಹೋದವೋ-ಎಂಬುದು ಎಳ್ಳಷ್ಟೂ  ಕೂಡ ಗಮನಕ್ಕೆ ಬರಲಿಲ್ಲ. ಯಾ ನಂತರ ಸುಖಾಪುಢೇ ಯೇತಸೇ ದುಃಖ | (ಸುಖದ ತರುವಾಯ ದುಃಖ) ಎಂಬ ಬಗೆಯಲ್ಲಿ ಮುಂದಿನ ಕಾಲ ಶುರುವಾಗಿತ್ತು.

ಮಮತೆಯ ಹೆತ್ತವರ ವಿಯೋಗ

ಕರ್ತೃತ್ವವಂತರಾದ ತಂದೆ ಬೋಲ್ಹೋಬಾ ಇವರು ತುಕೋಬಾ ಹದಿನೇಳು ವಯಸ್ಸಿನವರಾದಾಗ ತೀರಿಕೊಂಡರು. ತುಕೋಬಾರನ್ನು ದೇವರ ಸೇವೆ ಮತ್ತು ಮಹಾಜನಪದಗಳ (ಮಿರಾಶೀ) ಒಡೆಯರನ್ನಾಗಿ ಮಾಡಿದವರು ಇವರೇ.

ಬಾಪ ಕರೋ ಜೋಡೀ ಲೇಕರಾಚೇ ಓಢೀ | ಆಪಲೀ ಕರವಂಡೀ ವಾಳವೋನೀ ||||

ಏಕಾಏಕೀ ಕೇಲಾ ಮಿರಾಶೀಚಾ ಧನೀ | ಕಡೀಯೇ ವಾಹುನಿ ಭಾರ ಖಾಂದೀ ||||

ಮಿರಾಶೀ-ಮಹಾಜನಪದ ಮತ್ತು ದೇವರ ಸೇವೆ. ಸಂಸಾರದ ತಾಪತ್ರಯಗಳ ಬಿಸಿ ತಟ್ಟದಂತೆ            ನೋಡಿಕೊಳ್ಳುವ ಹೆತ್ತ ತಂದೆಯ ಆಸರೆಯೇ ಇಲ್ಲದಂತಾಯಿತು.

ಬಾಪ ಮೇಲಾ ನ ಕಳತಾ | ನವ್ಹತೀ ಸಂಸಾರಾಚೀ ಚಿಂತಾ ||||

 (ನ ಕಳತಾ ಎಂದರೆ ನಾನಿಲ್ಲದಾಗ ಒಂಟಿಯಾಗಿ) ತುಕಾರಾಮರಿಗೆ  ಸಹಿಸಲಾಗದ ದುಃಖವಾಯಿತು. ಈ ದುಃಖ ಇಳಿಮುಖ ಆಗುವಾಗ ಮರುವರ್ಷವೇ ಪ್ರೀತಿಯ ತಾಯಿ ಕನಕಾಯೀ ಅವರು ತುಕಾರಾಮರ ಕಣ್ಣೆದುರೇ ತೀರಿಕೊಂಡರು.

ಮಾತಾ ಮೇಲೀ ಮಜ ದೇಖತಾ ||||

ದುಃಖದ ಒಂದು ಬೆಟ್ಟವೇ ತುಕಾರಾಮರ ತಲೆಯ ಮೇಲೆ ಕುಸಿದಂತಾಯಿತು. ಅಮ್ಮನು                  ತುಕಾರಾಮರಿಗಾಗಿ ಏನೆಲ್ಲವನ್ನು ಮಾಡಿದ್ದಳು.

ಕಾಯ ನಾಹೀ ಮಾತಾ ಗೌರವೀತ ಬಾಳಾ | ಕಾಯ ನಾಹೀ ಲಳಾ ಪಾಳೀತ ತೀ ||||

ಕಾಯ ನಾಹೀ ತ್ಯಾಚೀ ಕರೀತೇ ಸೇವಾ | ಕಾಯ ನಾಹೀ ಜೀವಾ ಗೋಮಟೇತೇ ||||

ಅಮಂಗಳಪಣೇ ಕಂಟಾಳಾ ನ ಧರೀ | ಉಚಲೋನಿ ಕರೀ ಧರೀ ಕಂಠೀ ||||

ಮುಂದೆ, ಹಿರಿಯಣ್ಣ ಸಾವಜಿಯ ಹೆಂಡತಿ ತನ್ನ ೧೮ ನೆಯ ವರ್ಷದಲ್ಲಿ ಸಾವನ್ನಪ್ಪಿದಳು. ಸಾವಜಿಯ ಗಮನ ಮೊದಲೇ ಸಂಸಾರದತ್ತ ಇರಲಿಲ್ಲ. ಅದರಲ್ಲಿ ಹೆಂಡತಿಯ ಈ ಸಾವು ಬೇರೆ. ಮನೆಮಾರುಗಳನ್ನೆಲ್ಲ ತೊರೆದು ಅವರು  ತೀರ್ಥಯಾತ್ರೆಗೆಂದು ಹೋದವರು ಹಿಂತಿರುಗಿ ಬರಲೇ ಇಲ್ಲ. ಕುಟುಂಬದ ನಾಲ್ಕು ಜನ ಅಗಲಿದರು. ಯಾವುದೇ ಕೊರತೆಯಿಲ್ಲದ ಆ ಸಂಸಾರದಲ್ಲಿ ಈಗ ಒಂದೊಂದಾಗಿ ಕೊರತೆ ಕಂಡುಬರಹತ್ತಿತು. ತುಕಾರಾಮರು ಧೈರ್ಯಗೆಡಲಿಲ್ಲ. ಉದಾಸೀನತೆಯನ್ನು ಮೆಟ್ಟಿ ತಮ್ಮ ೨೦ ನೆಯ ವಯಸ್ಸಿನಲ್ಲೇ ಸಂಸಾರವನ್ನು ನೀಟಾಗಿ ಸಾಗಿಸುವ ಹಂಬಲವನ್ನು ಇರಿಸಿಕೊಂಡರು. ಆದರೆ ಅಯ್ಯೋ ! ಇಪ್ಪತ್ತೊಂದನೆಯ ವರ್ಷದವರಾದಾಗ ಒಂದು        ಘೋರವಾದ ಕಾಲವು ಬಂದೊದಗಿತು. ದಕ್ಷಿಣದಲ್ಲೆಲ್ಲ ಬರ ಬಿದ್ದಿತು.  ಅದೊಂದು ಬಲು ಭೀಕರವಾದ         ಬರವಾಗಿತ್ತು. ಇ. ಸ. ೧೬೨೯ ನೆಯ ವರ್ಷ (ಶಕೆ ೧೫೫೦-೫೧) ತಡವಾಗಿ ಮಳೆ ಬಂದಿತು. ಮುಂದೆ ಹೆಚ್ಚಿನ     ಮಳೆಗಾಲದಿಂದಾಗಿ ಬೆಳೆಗಳೆಲ್ಲ ನಾಶ ಹೊಂದಿದವು. ಆದರೂ ಜನ ಆಸೆ ಹಿಡಿದುಕೊಂಡಿದ್ದರು. ೧೬೩೦ ನೆಯ   ಇಸವಿಯಲ್ಲಿ ಮಳೆ ಬೀಳಲೇ ಇಲ್ಲ. ಎಲ್ಲೆಡೆ ಹಾಹಾಕಾರ ಉಂಟಾಯಿತು. ಕಾಳು ಕಡಿಗಳ ಬೆಲೆ ದುಬಾರಿಯಾದವು. ಮೇವಿಲ್ಲದೆ ಸಾವಿರಾರು ದನಕರುಗಳು ಜೀವ ಬಿಟ್ಟವು. ಹೊಟ್ಟೆಗಿಲ್ಲದೆ ನೂರಾರು ಜನ ಸಾವನ್ನಪ್ಪಿದರು. ಹಣವಂತ ಕುಟುಂಬಗಳು ಮಣ್ಣುಪಾಲಾದವು. ಈಗಲೂ ದುರ್ದೆಶೆ ಮುಗಿದಿರಲಿಲ್ಲ. ೧೬೩೧ ರಲ್ಲಿ ಈ ದೈವೀ ಪ್ರಕೋಪವು ತನ್ನ ಚರಮ ಸೀಮೆಯನ್ನು ತಲುಪಿತು. ಅತಿವೃಷ್ಟಿಯಿಂದಾಗಿ ಬೆಳೆಗಳು ಹಾಳಾದವು. ನೆರೆಹಾವಳಿಯಿಂದ ಮೇರೆಮೀರಿದ ನಷ್ಟ ಸಂಭವಿಸಿತು. ಬರಗಾಲ ಹಾಗೂ ದೈವೀ ಪ್ರಕೋಪಗಳು ಮೂರು ವರ್ಷಗಳ ಕಾಲ ಸಾಗಿದವು. ಮಹೀಪತಿಬಾಬಾ ಇವರು ಈ  ಬರವನ್ನು ಕುರಿತು ಹೀಗೆಂದಿದ್ದಾರೆ :

ತೀ ಪುಢೇ ಬರಗ ಪಡಲೇ ಕಠೀಣ | ದೋ ಪಾಯಲ್ಯಾಚೀ ಝಾಲೀ ಧಾರಣ |

ಪರ್ಜನ್ಯ ನಿಃಶೇಷ ಗೇಲಾ ತೇಣೇ | ಚಾರ್‍ಯಾವೀಣ ಬೈಲ ಮೇಲೇ ||||

 

ಮುಂದೆ ಬರಗಾಲ ಇನ್ನಷ್ಟು ಭೀಕರವಾಯಿತು.

ಮಹಾಕಾಳ ಪಡೀಲಾ ಪೂರ್ಣ | ಜಾಹಾಲೀ ಧಾರಣ ಶೇರಾಚೀ |

ತೇ ಹೀ ನ ಮಿಳೇ ಕೋಣಾ ಪ್ರತೀ | ಪ್ರಾಣೀ ಮೃತ್ಯೂಸದನೀ ಜಾತೀ ||||

ಪಾಯಲಿಯಷ್ಟು (ಅಳತೆ) ರತ್ನಗಳಿಗೆ ಒಂದು ಪಾಯಲಿ ಧಾನ್ಯ ದೊರಕದಂತಾಯಿತು.

- ದುಷ್ಕಾಳೇ ಆಟಿಲೇ ದ್ರವ್ಯ ನೇಲಾ ಮಾನ |

ಈ ಬರದಿಂದಾಗಿ ತುಕಾರಾಮರ ಪ್ರಪಂಚ ತುಂಬ ನಷ್ಟಕ್ಕೀಡಾಯಿತು. ದನಕರುಗಳು ಸಾವಿಗೀಡಾದವು. ಸಾಹುಕಾರಿಕೆ ಮುಳುಗಿತು. ವ್ಯಾಪಾರ ವಹಿವಾಟು ನಿಂತಿತು. ಜನರಲ್ಲಿರುವ ಮಾನ ಮರ್ಯಾದೆ ಇಲ್ಲವಾಯಿತು. ಮೊದಲ ಹೆಂಡತಿ ರಖುಮಾಬಾಯಿ ಹಾಗೂ ಒಬ್ಬನೇ ಒಬ್ಬ ಅಕ್ಕರೆಯ ಮಗ ಸಂತೋಬಾ ಬರಗಾಲಕ್ಕೆ ಬಲಿಯಾದರು. ಸಾಹುಕಾರ ಹಾಗೂ ವ್ಯಾಪಾರಿಗಳಿಗೆ ಬರಗಾಲವೆಂದರೆ ಒಂದು ಹೊನ್ನಾವಕಾಶ. ಕೃತಕವಾದ ಕೊರತೆಯನ್ನು ಹುಟ್ಟು ಹಾಕಿ ನೂರಾರು ರೂಪಾಯಿಗಳ ಲಾಭವನ್ನೆತ್ತುತ್ತಾರೆ. ಇಂದಿಗೂ ಅಂಥ  ಹಲವರನ್ನು ಕಾಣುತ್ತೇವೆ. ಆದರೆ ತುಕಾರಾಮರು ಬರಗಾಲದಲ್ಲೂ ಜನರಿಂದ ಬಲವಂತದಿಂದ ವಸೂಲು ಮಾಡುವವರಾಗಿರಲಿಲ್ಲ. ಬದಲು ತಮ್ಮ ದುರ್ದೆಸೆ, ಆಪತ್ತು ಹಾಗೂ ದುಃಖಗಳನ್ನು ಬದಿಗೊತ್ತಿ ಅವರು ಬರಗಾಲದ ಬವಣೆಗೀಡಾದ ಜನರಿಗೆ ಕೊಡುಗೈಯಿಂದ ನೆರವಾದರು.

ಸಹಜ ಸರಲೇ ಹೋತೇ ಕಾಹೀ | ದ್ರವ್ಯ ಥೋಡೇಬಹು ತೇಹೀ | ....... ದಿಲೇ ದ್ವಿಜಾ ಯಾಚಕಾ ||||

ಕೆಲಮಟ್ಟಿಗಿನ ಸಂಪತ್ತು ಸಹಜವಾಗಿಯೇ ಮುಗಿದುಬಿಟ್ಟಿತ್ತು. ಉಳಿದುದನ್ನು ಬ್ರಾಹ್ಮಣರು, ಬಿಕ್ಕೆ           ಬೇಡುವವರು, ಅಗತ್ಯವಿದ್ದವರಿಗೆಲ್ಲ ಕೈ ಸಡಿಲು ಬಿಟ್ಟು ಕೊಡಲಾಯಿತು. (ಹೀಗಾಗಿ ತುಕಾರಾಮರು ದಿವಾಳಿಯಾಗಿದ್ದರೆಂಬ ಮಾತನ್ನು ಅಕ್ಷರಶಃ ಅರ್ಥೈಸಕೂಡದು.)

ಸಂಸಾರಾಚ್ಯಾ ನಾವೇ ಘಾಲೋನಿಯಾ ಶೂನ್ಯ | ವಾಢತಾ ಹಾ ಪುಣ್ಯಧರ್ಮ ಕೇಲಾ ||||

ಹೆತ್ತವರು, ಮಗ, ಮಡದಿಯಂತಹ ಮನೆಯವರ ಸಾವು, ಬರಗಾಲದಿಂದಾಗಿ ಪ್ರಪಂಚಕ್ಕೆ ಬಂದೊದಗಿದ ವಿಪತ್ತು , ಜನರಲ್ಲಾದ ದುರ್ದೆಸೆ, ನೆಂಟರಿಷ್ಟರಿಂದ ನಡೆದ ಟೀಕೆ ಟಿಪ್ಪಣಿಗಳು. ತುಕಾರಾಮರು ಇವೆಲ್ಲವುಗಳನ್ನು ಧೈರ್ಯವಾಗಿ ಎದುರಿಸಿದರು. ಅವರು ದುರ್ದೆಸೆ ಹಾಗೂ ಆಪತ್ತುಗಳಿಗೆ ಮುಖಾಮುಖಿಯಾದರು. ಓಟ ಕೀಳಲಿಲ್ಲ. ಅವರು ಪಲಾಯನವಾದಿಗಳಾಗಿರಲಿಲ್ಲ. ಅವರಿಗೆ ಸಂಸಾರವನ್ನು ಗೆದ್ದುಕೊಳ್ಳುವುದಿತ್ತು.   ಈ   ರಣರಂಗದಿಂದ   ಕಾಲ್ತೆಗೆಯಬೇಕಿರಲಿಲ್ಲ ಹಿಂಜರಿಯಬೇಕಿರಲಿಲ್ಲ.  ಈ  ಸಾರದಿಂದ ಸಾರವನ್ನು ಹೊರತರುವುದಿತ್ತು. ಬರ, ದೈವಿ ಆಪತ್ತುಗಳಿಂದಾಗಿ ಮಾನವನ ದೇಹ, ದೇಹ ಸಂಬಂಗಳಾದ ತಾಯಿ, ತಂದೆ, ಮಗ ಹಾಗೂ ಸಂಪತ್ತಿನ ಮೌಲ್ಯಮಾಪನ ನಡೆದಿತ್ತು. ಅಶಾಶ್ವತೆ ಮನದಟ್ಟಾಗಿತ್ತು. ಅವರು ಶಾಶ್ವತವಾದ ಮೌಲ್ಯಗಳನ್ನು ಶೋಸತೊಡಗಿದರು. ಉದ್ವೇಗದಿಂದ  ಪಾರಾಗುವುದು ಹೇಗೆ? ಆಚೆಯ ದಡವನ್ನು  ತಲುಪುವುದು ಹೇಗೆ? - ಎಂಬುದನ್ನು ಕುರಿತು  ಯೋಚಿಸತೊಡಗಿದರು.

ವಿಚಾರಲೇ ಆ ಆಪುಲೇ ಮಾನಸೀ | ವಾಚೋ ಯೇಥೇ ಕೈಸೀ ಕೋಣ್ಯಾಪರೀ ||||

ಅವರು ಸತ್ಯವನ್ನು ಕಂಡುಕೊಳ್ಳಲೆಂದು ಹೊರಟರು. ಈ ನಿರ್ಧಾರದಿಂದಲೇ ಭಾಮನಾಥರ ಬೆಟ್ಟವನ್ನೇರಿ ಹೋದರು. ಚಿರಂತನವಾದ ಸತ್ಯದ ಸಾಕ್ಷಾತ್ಕಾರ ನಡೆದರೆ ಮಾತ್ರ ಹಿಂತಿರುಗಿ ಬರುವುದು, ಇಲ್ಲವಾದರೆ ಇಲ್ಲ. ಅದು ಅವರ ಕೊನೆಯಂಚಿನ ತೀರ್ಮಾನವಾಗಿತ್ತು. ತುಕಾರಾಮರ ಮೈಮೇಲೆಲ್ಲ ಇರುವೆಗಳು, ಚೇಳುಗಳು, ಹಾವುಗಳು ಓಡಾಡಿದವು. ಅಷ್ಟೇ ಅಲ್ಲದೆ ಕಚ್ಚಿ ಪೀಡಿಸುತ್ತಿದ್ದವು. ಹುಲಿ ಮೇಲೆರಗಿ ಬಂದಿತು. ಆದರೂ ಮಹಾರಾಜರ ನಿರ್ಧಾರ ಕಿಂಚಿತ್ತೂ ಕದಲಲಿಲ್ಲ. ಹದಿನೈದನೆಯ ದಿನ ಅವರಿಗೆ ಸತ್ಯದ ಸಾಕ್ಷಾತ್ಕಾರವಾಯಿತು.

ಭಾಮಗಿರೀ ಪಾಠಾರೀ ವಸ್ತೀ ಜಾಣ ಕೇಲೀ | ವೃತ್ತೀ ಸ್ಥಿರಾವಲೀ ಪರಬ್ರಹ್ಮೀ ||||

ಸರ್ಪ ವಿಂಚೂ ವ್ಯಾಘ್ರ ಅಂಗಾಶೀ ಝೋಂಬಲೇ | ಪಿಡೂ ಜೇ ಲಾಗಲೇ ಸಕಳೀಕ ||||

ಪಂಢರಾ ದಿವಸಾಮಾಜೀ ಸಾಕ್ಷಾತ್ಕಾರ ಝಾಲಾ | ವಿಠೋಬಾ ಭೇಟಲಾ ನಿರಾಕಾರ ||||

ನಿರಾಕಾರನಾದ ಪರಮಾತ್ಮ ಭೆಟ್ಟಿಯಾದನು. ದೇವನು ಭಕ್ತನನ್ನು ಚಿರಂಜೀವ ಭವ ಎಂದು ಆಶೀರ್ವದಿಸಿದನು, ಭರವಸೆಯನ್ನಿತ್ತನು.

ತವ ಸಾಹ್ಯ ಝಾಲಾ ಹೃದಯ ನಿವಾಸೀ | ಬುದ್ಧಿ ದಿಲೀ ಐಶೀ ನಾಶ ನಾಹೀ ||||

ತುಕಾರಾಮರು ಮನೆಬಿಟ್ಟು ಹೋದಾಗಿನಿಂದ ಅವರ ತಮ್ಮ ಕಾನ್ಹೋಬಾ ಇವರು ಅಣ್ಣನನ್ನು ಹುಡುಕಲೆಂದು ದೇಹೂ ಊರಿನ ಸುತ್ತಲ ಕಾಡುಮೇಡು, ಬೆಟ್ಟ ಕಣಿವೆಗಳಲ್ಲಿ ಅಲೆಯುತ್ತಿದ್ದರು. ಹುಡುಕುತ್ತ ಹುಡುಕುತ್ತ ಅವರು ಭಾವನಾಥ ಬೆಟ್ಟದ ಮೇಲಿನ ಗುಹೆಗೆ ಬಂದು ತಲುಪಿದರು. ಅಲ್ಲಿಯ ನೋಟವನ್ನು ಕಂಡು ಅವರು ನಿಬ್ಬೆರಗಾದರು. ತುಕೋಬಾರಾಯರ ಮೈಮೇಲೆ ಕಟ್ಟಿರುವೆಗಳು, ಹಾವುಗಳು, ಚೇಳುಗಳು ಅಂಟಿಕೊಂಡಿವೆ. ಹುಲಿಯು ಬಂದೆರಗಿದೆ. ಪರಮಾತ್ಮ ಪ್ರಕಟನಾಗಿದ್ದಾನೆ. ಬಂಗಾರದ ದಿನ ಅದಾಗಿತ್ತು. ಕಾನ್ಹೋಬರು ಸಂತೋಷದಿಂದ ನಲಿದಾಡಿದರು. ಹುಟ್ಟು ಸಾರ್ಥಕವಾಯಿತು. ಒಡಹುಟ್ಟಿದವರು ಭೆಟ್ಟಿಯಾದರು. ದೇವನು ತುಕೋಬಾರಾಯರಿಗೆ ಭೆಟ್ಟಿಯಾದ ಸ್ಥಳದ ಪಾವಿತ್ರ್ಯ ಹಾಗೂ ಸ್ಮೃತಿ ಅಖಂಡವಾಗಿ ಉಳಿಯಲೆಂದು ಕಾನ್ಹೋಬಾರು ಅಲ್ಲಿ ಕೆಲವು ಕಲ್ಲುಗಳನ್ನು ರಚಿಸಿಟ್ಟರು. ಸೋದರರಿಬ್ಬರೂ ಪವಿತ್ರವಾದ ಆ ಭೂಮಿಯನ್ನು   ವಂದಿಸಿ, ಹೊರಟು ಇಂದ್ರಾಯಣಿ ಹೊಳೆಯ ಸಂಗಮಕ್ಕೆ ಬಂದರು. ಸಂಗಮದಲ್ಲಿ ಮಿಂದು ಹದಿನೈದು ದಿನಗಳ ಉಪವಾಸದ ಪಾರಣೆಯನ್ನು ಮಾಡಿದರು. ತುಕಾರಾಮರು ಕಾನ್ಹೋಬರ ಕೈಲಿ ಸಾಲಪತ್ರಗಳನ್ನು ತರಿಸಿಕೊಂಡರು. ಜನರಿಂದ ಬರಬೇಕಿದ್ದ ದುಡ್ಡಿನ ಮೊತ್ತಗಳನ್ನು ನಮೂದಿಸಲಾದ ಪತ್ರಗಳವು. ಅವುಗಳಲ್ಲಿ ಪಾಲು ಮಾಡಿ ಅರ್ಧದಷ್ಟನ್ನು ಕಾನ್ಹೋಬರಿಗಿತ್ತು. ತಮ್ಮ ಪಾಲಿನವುಗಳನ್ನು ಮಹಾರಾಜರು ಇಂದ್ರಾಯಣಿಯ ಮಡುವಿನಲ್ಲಿ ಮುಳುಗಿಸಿಬಿಟ್ಟರು. ಈ ಸಾಹುಕಾರ ಬರಗಾಲದ ತರುವಾಯದಲ್ಲಿ ಸಾಲಗಾರರಿಂದ ತನಗೆ         ಸಲ್ಲಬೇಕಿದ್ದ ಹಣವನ್ನು ವಸೂಲು ಮಾಡಿ ತನ್ನ ಸಂಸಾರವನ್ನು ಗಟ್ಟಿಗೊಳಿಸಿಕೊಳ್ಳುವ ಬದಲು ಸಾಲಪತ್ರಗಳನ್ನು ಗಂಗಾರ್ಪಣೆ ಮಾಡಿ ಸಾಲಿಗರನ್ನು ಸಾಲಗಳಿಂದ ಬಿಡುಗಡೆ ಮಾಡಿದನು. ಅಲ್ಲದೆ ತಾನು ಸಾಹುಕಾರಿಕೆಯತ್ತ ಬೆನ್ನು ತಿರುವಿದುದನ್ನು ತೋರಿಸಿಕೊಟ್ಟನು. ಇದನ್ನೇ ನಿಜವಾದ ಸಮಾಜವಾದ ಎಂದೆನ್ನುವುದು !

ದೇವಾಚೇ ದೇಊಳ ಹೋತೇ ಜೇ ಭಂಗಲೇ | ಚಿತ್ತೀ ತೇ ಆಲೇ ಕರಾವೇ ತೇ ||||

ಸಾಲಪತ್ರಗಳನ್ನು ಇಂದ್ರಾಯಣಿಯ ಮಡುವಿನಲ್ಲಿ ಮುಳುಗಿಸಿ ತಾವು ಸಾಹುಕಾರಿಕೆಯತ್ತ ಬೆನ್ನು ತಿರುಗಿಸಿದುದನ್ನು ಅದ್ಭುತವಾದ ಬಗೆಯಲ್ಲಿ ತೋರಿಸಿದ ಹಾಗೆಯೇ ತುಕಾರಾಮರು ಬರಗಾಲದ ತರುವಾಯ ಒಡೆದ ಸಂಸಾರವನ್ನು ಕಟ್ಟುವ ಬದಲು ದೇವರ ಒಡೆದು ಬಿದ್ದ ದೇವಾಲಯವನ್ನು ಜೀರ್ಣೋದ್ಧಾರಗೊಳಿಸುವ ಮೂಲಕ ತಾವು ಪರಮಾರ್ಥದತ್ತ ಮೋರೆ ಮಾಡಿದವರೆಂಬುದನ್ನು ಜಗಜ್ಜಾಹೀರು ಪಡಿಸಿದರು. ತಂದೆ ಬೋಲ್ಹೋಬಾ ಇವರ ಕಾಲದಲ್ಲಿ ಬೆಳೆಯುತ್ತಿದ್ದ ಯಾತ್ರೆಗೆ ದೇವರ ಮನೆ ಸಾಲದಂತಾಗಿ ಅವರು ದೇವರಿಗಾಗಿ ಇಂದ್ರಾಯಣಿಯ ರಮ್ಯವಾದ ದಡದ ಮೇಲೆ ಒಂದು ದೇವಾಲಯವನ್ನು ಕಟ್ಟಿಸಿ ಮನೆಯ ಗರ್ಭಗುಡಿಯ ದೇವರನ್ನು ತಂದು ಇಲ್ಲಿ ಪ್ರತಿಷ್ಠಾಪಿಸಿದ್ದರು. ತುಕೋಬಾರಾಯರ ಕಾಲಕ್ಕೆ ದೇವಾಲಯ ಬಿರುಕು ಬಿಟ್ಟಿತ್ತು. ಹೀಗಾಗಿ ಅವರು ಬರಗಾಲದ ತರುವಾಯ ಎಲ್ಲಕ್ಕೂ ಮೊದಲು ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದರು.

ಶ್ರೀ ಮೂರ್ತೀಚೇ ಹೋತೇ ದೇವಾಲಯ ಭಂಗಲೇ | ಪಾಹಾತಾ ಸುರಲೇ ಚಿತ್ತೀ ಐಸೇ ||||

ಮ್ಹಣೇ ಹೇ ದೇವಾಲಯ ಕರಾವಯಾಚೇ ಆತಾ | ಕರಾವಯಾ ಕಥಾ ಜಾಗರಣ ||||

ದೇವಾಲಯವನ್ನು ಜೀರ್ಣೋದ್ಧಾರಗೊಳಿಸಿದುದು ಪುಣ್ಯ ಪ್ರಾಪ್ತಿಗಾಗಿಯಲ್ಲ ; ಭಜನೆ, ಕೀರ್ತನೆ, ಕಥೆ, ಜಾಗರಣೆಗಳಿಗಾಗಿ.  ಹರಿಜಾಗರಣೆ, ಶ್ರವಣ, ಕೀರ್ತನೆ, ಮನನ, ಸಹಜ ಸಾಕ್ಷಾತ್ಕಾರ ಹಾಗೂ ತರುವಾಯದಲ್ಲಿ ಪಾಂಡುರಂಗನ ಕೃಪೆ. ದೇವಾಲಯದಿಂದಾಗಿ ಇವೆಲ್ಲ ಸಂಗತಿಗಳು ಸಹಜವಾಗಿ ಸಾಧ್ಯವಾದವು.

ಕಾಹೀ ಪಾಠ ಕೇಲೀ ಸಂತಾಂಚೀ ಉತ್ತರೇ | ವಿಶ್ವಾಸೇ ಆದರೇ ಕರೋನಿಯಾ ||||

ಕೀರ್ತನೆಯನ್ನು ಮಾಡಲು ನಿಂತುಕೊಳ್ಳಲೆಂದು ದೇವಾಲಯವನ್ನು ಕಟ್ಟಿಸಲಾಯಿತು. ಕೀರ್ತನೆಗಾಗಿ ಆವಶ್ಯಕವಿದ್ದ ಬಾಯಿಪಾಠಗಳಿಗಾಗಿ ತುಕಾರಾಮರು ದಿನಾಲು ಭಂಡಾರಾ ಗುಡ್ಡದ ಏಕಾಂತದಲ್ಲಿ ಕುಳಿತು ಅಧ್ಯಯನವನ್ನು ಕೈಕೊಂಡರು. ಮುಂಜಾವಿನಲ್ಲೆದ್ದು ಸ್ನಾನ ಮಾಡಿ ಕುಲ ದೇವತೆಯಾದ ಶ್ರೀ ರಖುಮಾಯಿಯನ್ನು ತಮ್ಮ ಕೈಯಿಂದಲೇ ಪೂಜಿಸಿ ಭಂಡಾರಾ ಗುಡ್ಡದತ್ತ ತೆರಳುವುದು ಅವರ ವಾಡಿಕೆಯಾಗಿತ್ತು.

ಕೀರ್ತನ ಸಂಪೂರ್ಣ ಯಾವಯಾಸೀ ಹಾತಾ | ಅಭ್ಯಾಸ ಕರಿತಾ ಝಾಲಾ ತುಕಾ ||||

ಅಭ್ಯಾಸ ತುಕಯಾ ಕರೀತಸೇ ಐಸಾ | ಸರಿತಾಸೀ ಜೈಸಾ ಪಾತ್ರ ಸಿಂಧು ||||

ತೈಸೇ ಜೇ ಐಕೇ ತೇ ರಾಹೇ ಅಂತರೀ | ಗ್ರಂಥ ಯಾಹೀವರೀ ವಾಚೀಯೇಲೇ ||||

ತುಕಾರಾಮರು ಜ್ನಾನದೇವರ ಜ್ನಾನದೇವೀ, ಅಮೃತಾನುಭವ, ಏಕನಾಥರ ಭಗವದ್ಗೀತೆಯನ್ನು ಕುರಿತಾದ ಟೀಕೆ, ಭಾವಾರ್ಥ ರಾಮಾಯಣ, ಸ್ವಾತ್ಮಾನುಭವ, ನಾಮದೇವರಾಯರ ಅಭಂಗಗಳು, ಕಬೀರನ ಪದಗಳನ್ನು ಪರಿಶೀಲಿಸಿದರು. ಅವರು ಜ್ನಾನದೇವ, ನಾಥ, ನಾಮದೇವರಾಯ ಹಾಗೂ ಕಬೀರರಂತಹ ಭಕ್ತಿಮಾರ್ಗದ ಶ್ರೇಷ್ಠ ಸಂತರ ಕೆಲವು ವಚನಗಳನ್ನು ಬಾಯಿಪಾಠ ಮಾಡಿಕೊಂಡರು.

ಕರೂ ತೈಸೇ ಪಾಠಾಂತರ | ಕರುಣಾಕಾರ ಭಾಷಣ ||||

ಜಿಹೀ ಕೇಲಾ ಮೂರ್ತಿಮಂತ | ಐಸಾ ಸಂತಪ್ರಸಾದ ||||

ಅವರು ನಿರ್ಗುಣ, ನಿರಾಕಾರನಾದ ಪರಮಾತ್ಮನನ್ನು ಸಗುಣ, ಸಾಕಾರಗೊಳಿಸಿದ, ಅಮೂರ್ತವನ್ನು ಮೂರ್ತಗೊಳಿಸಿದ ಈ ಸಂತರ ಪ್ರಸಾದವನ್ನು ಸೇವಿಸಿದರು. ತುಕಾರಾಮರು ಪುರಾಣಗಳನ್ನು ಅವಲೋಕಿಸಿದರು, ಶಾಸ್ತ್ರಗಳನ್ನು ಅನ್ವೇಷಿಸಿದರು.

ಪಾಹಿಲೀ ಪುರಾಣೇ | ಧಾಂಡೋಳಿಲೀ ದರುಷಣೇ ||||

ಪುರಾಣೀಚಾ ಇತಿಹಾಸ | ಗೋಡ ರಸ ಸೇವಿಲಾ ||||

ತುಕಾರಾಮರಿಗೆ ಈ ಏಕಾಂತವಾಸ ತುಂಬ ಇಷ್ಟವಾಯಿತು. ಇಂಥ ಏಕಾಂತದಲ್ಲೂ ನೆಂಟರಿಷ್ಟರು ಅವರ ಜೊತೆಗಿದ್ದರು. ಆದರೆ ಅವರು ಬೇರೆ ತೆರನಾದ ಸಂಗಡಿಗರು. ಯಾರವರು? ಮರಗಳು, ಬಳ್ಳಿಗಳು ! ಕಾಡು ಪ್ರಾಣಿಗಳು ! ಪಕ್ಷಿರಾಜರು ಇಂಪಾಗಿ ಉಲಿಯುತ್ತಿದ್ದರು. ಅವೆಲ್ಲ ದೇವರನ್ನು ಪ್ರಾರ್ಥಿಸುತ್ತಿದ್ದವು.

ವೃಕ್ಷವಲ್ಲೀ ಆಮ್ಹಾ ಸೋಯರೇ ವನಚರೇ | ಪಕ್ಷೀಯೇ ಸುಸ್ವರೇ ಆಳವಿತೀ ||||

ಯೇಣೇ ಸುಖೇ ರುಚೇ ಏಕಾಂತಾಚಾ ವಾಸ | ನಾಹೀ ಗುಣ ದೋಷ ಅಂಗಾ ಯೇತ ||||

ಆಕಾಶ ಮಂಡಪ ಪೃಥಿವೀ ಆಸನ | ರಮೇ ತೇಥೇ ಮನ ಕ್ರೀಡಾ ಕರೂ ||||

ತುಕಾರಾಮರ ಮಡದಿ ಸೌ. ಜಿಜಾಬಾಯಿ ದಿನಾಲು ಮನೆಗೆಲಸಗಳನ್ನು ಪೂರೈಸಿ, ಅಡಿಗೆ ಮಾಡಿಟ್ಟು ಮಹಾರಾಜರ ಊಟವನ್ನು ತೆಗೆದುಕೊಂಡು ಭಂಡಾರಾ ಗುಡ್ಡಕ್ಕೆ ಹೋಗುತ್ತಿದ್ದರು. ಮಹಾರಾಜರಿಗೆ            ಉಣಬಡಿಸಿದ ತರುವಾಯ ತಾವು ಉಣ್ಣುತ್ತಿದ್ದರು. ತುಕಾರಾಮರು ಪರಮಾರ್ಥದ ಸಾಧನೆಯಲ್ಲಿ ಮೈಮರೆತಾಗ, ವಿದೇಹ      ಸ್ಥಿತಿಯಲ್ಲಿ ಇರುವಾಗ ಸೌ. ಜಿಜಾಬಾಯಿಯವರು ಅವರ ಬಗೆಗೆ ಎಲ್ಲ ಬಗೆಯ ಎಚ್ಚರಿಕೆಯನ್ನು   ವಹಿಸುತ್ತಿದ್ದರು.    ತುಕಾರಾಮರ ಪರಮಾರ್ಥದಲ್ಲಿ ಜಿಜಾಬಾಯಿಯವರದು ಬಲು ದೊಡ್ಡ ಪಾಲು. ದೇಹದ ದುಡಿಮೆಯಿಂದ ಪರೋಪಕಾರ, ಸಂತರ ವಚನಗಳ ಪಾಠ-ಪಾಠಾಂತರಗಳ ಅಧ್ಯಯನ, ವಿಠ್ಠಲನ ಸಾಧನೆ ಒಂದೇ ಸವನೆ ಸಾಗಿರುವಾಗ ಶ್ರೀ ಪಂಢರೀರಾಯರು ಜೊತೆಗೆ ನಾಮದೇವರಾಯರನ್ನು ಕರೆದುಕೊಂಡು        ಮಹಾರಾಜರ ಕನಸಿನಲ್ಲಿ ಬಂದರು. ಅವರು ಶ್ರೀ ತುಕಾರಾಮ ತುಕಾರಾಮರನ್ನು ಎಚ್ಚರಗೊಳಿಸಿ ಜಗತ್ತಿನ    ಉದ್ಧಾರಕ್ಕಾಗಿ ಕವಿತ್ವವನ್ನು     ಮಾಡಲು ಹೇಳಿದರು.

ನಾಮದೇವೇ ಕೇಲೇ ಸ್ವಪ್ನಾಮಾಜೀ ಜಾಗೇ | ಸವೇ ಪಾಂಡುರಂಗೇ ಯೇಉನಿಯಾ ||||

ಸಾಂಗಿತಲೇ ಕಾಮ ಕರಾವೇ ಕವಿತ್ವ | ವಾಉಗೇ ನಿಮಿತ್ಯ ಬೋಲೋ ನಕೋ || ||

ಮಾಪ ಟಾಕೀ ಸಳ ಧರಿಲೀ ವಿಠ್ಠಲೇ | ಥಾಪಟೋನಿ ಕೇಲೇ ಸಾವಧಾನ ||||

ಪ್ರಮಾಣಾಚೀ ಸಂಖ್ಯಾ ಸಾಂಗೇ ಶತ ಕೋಟೀ | ಉರಲೇ ಶೇವಟೀ ಲಾವೀ ತುಕಾ ||||

ದ್ಯಾಲ ಠಾವ ತರಿ ರಾಹೇನ ಸಂಗತೀ | ಸಂತಾಂಚೇ ಪಂಗತೀ ಪಾಯಾಂಪಾಶೀ ||||

ಆವಡೀಚಾ ಠಾವ ಆಲೋಸೇ ಟಾಕೂನ | ಆತಾ ಉದಾಸೀನ ನ ಧರಾವೇ || ||

ಸೇವಟೀಲ ಸ್ಥಳ ನಿಚ ಮಾಝೀ ವೃತ್ತಿ | ಆಧಾರೇ ವಿಶ್ರಾಂತೀ ಪಾವಈನ ||||

ನಾಮದೇವಾಪಾಯೀ ತುಕ್ಯಾ ಸ್ವಪ್ನೀ ಭೇಟೀ | ಪ್ರಸಾದ ಹಾ ಪೋಟೀ ರಾಹಿಲಾಸೇ ||||

ತುಕಾರಾಮರ ಸ್ವಂತದ ಉದ್ಧಾರವಾಗಿತ್ತು. ಇನ್ನು ಅವರಿಗೆ ಲೋಕೋದ್ಧಾರವನ್ನು ಮಾಡುವುದಿತ್ತು. ತಮಗೆ ದೊರೆತ ಪ್ರಸಾದವನ್ನು ಜನರಿಗೆ ಹಂಚುವುದಿತ್ತು. ಅವರು ಪರಮಾತ್ಮನ ಸಂದೇಶವನ್ನು , ವಾರ್ತೆಯನ್ನು ಮನೆ    ಮನೆಗೆ ತಲುಪಿಸುವವರಿದ್ದರು.

ತುಕಾ ಮ್ಹಣೇ ಮಜ ಧಾಡಿಲೇ ನಿರೋಪಾ | ಮಾರಗ ಹಾ ಸೋಪಾ ಸುಖರೂಪ |

 

ಮಹಾರಾಜರಲ್ಲಿ ಕವಿತ್ವ ಸುರಿಸಿತು.

ಯಾವರ ಝಾಲೀ ಕವಿತ್ವಾಚೀ ಸೂರ್ತಿ | ಪಾಯ ಧರಿಲೇ ಚಿತ್ತೀ ವಿಠೋಬಾಚೇ |

- ಹೀಗೆ ತುಕಾರಾಮರ ಬಾಯಿಯಿಂದ ಅಭಂಗ ಗಂಗೆ ಹರಿಯತೊಡಗಿದಳು. ಭಾಗ್ಯವಂತರಾದ     ಶ್ರೋತೃಗಳು ಆಲಿಸತೊಡಗಿದರು.

ಬೋಲಾವೇ ಮ್ಹಣೂನ ಬೋಲತೋ ಉಪಾಯ | ಪ್ರವಾಹೇಚಿ ಜಾಯೇ ಗಂಗಾಜಳ ||||

ಭಾಗ್ಯ ಯೋಗೇ ಕೋಣಾ ಘಡೇಲ ಶ್ರವಣ | ಕೈಚೇ ತೇಥೇ ಜನ ಅಕಾರೀ ||||

ತುಕಾರಾಮರ ಅಭಂಗದ ಮೂಲಕ ಶ್ರುತಿ ಶಾಸ್ತ್ರಗಳ ಮತಿತಾರ್ಥವು ಮಹಾಕಾವ್ಯದ ಫಲವಾಗಿ ಹೊರ-ಹೊಮ್ಮತೊಡಗಿತು. ಶ್ರೀ ತುಕಾರಾಮ ಮಹಾರಾಜರು ಆಳಂದಿಯಲ್ಲಿ ಶ್ರೀ ಜ್ನಾನದೇವರ ಮಹಾದ್ವಾರದಲ್ಲಿ ಕೀರ್ತನೆಯನ್ನು ಮಾಡುತ್ತಿರುವಾಗ ಅವರ ಈ ಪ್ರಾಸಾದಿಕವಾದ ಅಭಂಗವಾಣಿಯು ಮಹಾಪಂಡಿತ ರಾಮೇಶ್ವರ ಭಟ್ಟಜೀ ಅವರ ಕಿವಿಯ ಮೇಲೆ ಅಪ್ಪಳಿಸಿತು. ಅವರಿಗೆ ಬಲು ದೊಡ್ಡ ಆಘಾತವಾಯಿತು. ಹೀ ಗೀತಾಚೀ ಕಿ ಮೂರ್ತಿಮಂತ, ಕಿ ನೇಣೋ ಶ್ರೀಮತ್ ಭಾಗವತ || - ಪ್ರತ್ಯಕ್ಷವಾದ ಈ ವೇದವಾಣಿಯೇ ತುಕೋಬಾನ ಬಾಯಿಂದ ಪ್ರಾಕೃತ ನುಡಿಯಲ್ಲಿ ಹೊರಬರಬೇಕೆ !

ತುಕಯಾಚೇ ಕವಿತ್ವ ಐಕೂನ ಕಾನೀ | ಅರ್ಥ ಶೋಧೂನಿ ಪಾಹತಾ ಮನೀ |

ಮ್ಹಣೇ ಪ್ರತ್ಯಕ್ಷ ಹೇ ವೇದವಾಣೀ | ತ್ಯಾಚೇ ಮುಖೇ ಕಾನೀ ನ ಐಕಾವೀ ||

ತರೀ ಯಾಸೀ ನಿಷೇಧಾವೇ | ಸರ್ವಥಾ ಭಯ ನ ಧರಾವೇ ||

ರಾಮೇಶ್ವರಶಾಸ್ತ್ರಿಗಳು ನಿಷೇಸಿದರು. ಅವರು ನೀವು ಶೂದ್ರರೇ? ನಿಮ್ಮ ಅಭಂಗವಾಣಿಯಿಂದ      ವೇದಾರ್ಥ ಪ್ರಕಟಗೊಳ್ಳುತ್ತಿದೆ. ಅದು ನಿಮ್ಮ ಅಕಾರವಲ್ಲ. ನಿಮ್ಮ ಬಾಯಿಯಿಂದ ಅದನ್ನು ಕೇಳುವುದು        ಅಧರ್ಮ. ನಿಮಗೆ ಈ ಉಪದ್ವ್ಯಾಪವನ್ನು ಹೇಳಿದವರಾರು?" ಎಂದರು. ಅದಕ್ಕೆ ತುಕಾರಾಮರು, ಇದು ನನ್ನ  ವಾಣಿಯಲ್ಲ, ದೇವವಾಣಿ" ಎಂದು ಉತ್ತರಿಸಿದರು.

ಕರಿತೋ ಕವಿತ್ವ  ಮ್ಹಣಾಲ ಹೇ ಕೋಣೀ | ನವ್ಹೇ ಮಾಝೀ ವಾಣೀ ಪದರೀಚಿ ||||

ಮಾಝಿಯೇ ಯುಕ್ತೀಚಾ ನವ್ಹೇ ಹಾ ಪ್ರಕಾರ | ಮಜ ವಿಶ್ವಂಭರ ಬೋಲವಿತೋ ||||

 

ನೇಣೇ ಅರ್ಥ ಕಾಹೀ ನವ್ಹತೀ ಮಾಝೇ ಬೋಲ | ವಿನವಿತೋ ಕೋಪಾಲ ಸಂತ ಝಣೀ ||||

ನವ್ಹತೀ ಮಾಝೇ ಬೋಲ, ಬೋಲೇ ಪಾಂಡುರಂಗ | ಅಸೇ ಅಂಗ ಸಂಗ ವ್ಯಾಪುನಿಯಾ ||||

ನಾಮದೇವರಾಯ ಮತ್ತು ಪಂಢರಿರಾಯರು ಕನಸಿನಲ್ಲಿ ಬಂದು ಕವಿತ್ವವನ್ನು ಮಾಡೆಂದು ಅಪ್ಪಣೆ ಮಾಡಿದರು.

ವಿಪ್ರ ಮ್ಹಣೇ ಆe ಕಾರಣ | ಶ್ರೀಚೀ ಕೈಸೇ ಜಾಣೇಲ ಜನ |

ಯಾಲಾಗೀ ಕವಿತ್ವ ಬುಡವೂನ | ಟಾಕೀ ನೇಊನ ಉದಕಾತ ||||

ತೇಥೇ ಸಾಕ್ಷಾತ್ ನಾರಾಯಣ | ಆಪೇ ರಕ್ಷೀಲ ಜರೀ ಆಪಣ |

ತರೀ ಸಹಜಚಿ ವೇದಾಹೂನ | ಮಾನ್ಯ ಹೋಈಲ ಸರ್ವಾಶೀ ||೧೬||

ನಿಮ್ಮ ಕವಿತ್ವವನ್ನು ಮುಳುಗಿಸಿ ಬಿಡಿ. ಅದು ದೇವವಾಣಿಯಾಗಿದ್ದರೆ ದೇವನು ಅದನ್ನು ನೀರಲ್ಲಿಯೂ

ಕಾಪಾಡುವನು. ರಾಮೇಶ್ವರ ಶಾಸ್ತ್ರಿಗಳು ಊರಿನ ಗೌಡನಿಗೆ ತುಕೋಬಾನ ಈ ಅಧರ್ಮದ ಬಗೆಗೆ ತಿಳಿಸಿದರು. ಗೌಡ ಕೆರಳಿದನು. ಜನ ರೊಚ್ಚಿಗೆದ್ದರು.

ಕೋಪಲಾ ಪಾಟೀಲ ಗಾವೀಚೇ ಹೇ ಲೋಕ ||||

ಕಾಯ ಖಾವೇ ಆತಾ ಕೋಣೀಕಡೇ ಜಾವೇ | ಗಾವಾತ ರಾಹಾವೇ ಕೋಣ್ಯಾ ಬಳೇ ||||

ತುಕಾರಾಮರು ಅಭಂಗದ ಕೈಬರಹದ ಪುಸ್ತಕಗಳನ್ನೆಲ್ಲ ತೆಗೆದುಕೊಂಡು, ಕಲ್ಲು ಕಟ್ಟಿ ಇಂದ್ರಾಯಣಿಯ ಮಡುವಿನಲ್ಲಿ ತಮ್ಮ ಕೈಯಿಂದಲೇ ಮುಳುಗಿಸಿದರು. ಹಿಂದೆ ಸಾಲಪತ್ರ, ಪ್ರಪಂಚಗಳನ್ನು ಮುಳುಗಿಸಿದ್ದರು. ಇಂದು ಅಭಂಗದ ಪುಸ್ತಕ-ಪರಮಾರ್ಥಗಳನ್ನು ಮುಳುಗಿಸಿಬಿಟ್ಟರು.

ಬುಡವಿಲ್ಯಾ ವಹ್ಯಾ ಬೈಸಿಲೋ ಧರಣೆ ||

ತುಕಾರಾಮರಿಗೆ ತುಂಬ ದುಃಖವಾಯಿತು. ಜನರು ನಿಂದಿಸತೊಡಗಿದರು. ಎಂಥ ದೃಷ್ಟಾಂತ, ಎಂಥ ಪ್ರಸಾದ ! ಎಲ್ಲ ಬೂಟಾಟಿಕೆ. ಎಂಥ ದೇವ, ಎಂಥ ಧರ್ಮ ! ತುಕಾರಾಮರು ಮಹಾದ್ವಾರದೆದುರಿನ ಬಂಡೆಯ ಮೇಲೆ ಧರಣಿ ಕುಳಿತರು. ಪ್ರಾಣವನ್ನು ಪಣಕ್ಕೊಡ್ಡಿದರು. ನಿರ್ವಾಣಕ್ಕೆ ಸಿದ್ಧರಾದರು. ಹದಿಮೂರು ದಿನಗಳು ಕಳೆದವು. ದೇವನಂತೂ ಪ್ರಸನ್ನನಾಗಲೊಲ್ಲ.

ತೇರಾ ದಿವಸ ಝಾಲೇ ನಿಶ್ಚಕ್ರ ಕರಿತಾ | ನ ಪವಸೀ ಅನಂತಾ ಮಾಯಬಾಪಾ ||

ತುಜವರೀ ಆತಾ ಪ್ರಾಣ ಮೀ ತ್ಯಜೀನ | ಹತ್ಯಾ ಮೀ ಘಾಲೀನ ಪಾಂಡುರಂಗಾ ||

ತುಕಾ ಮ್ಹಣೇ ಆತಾ ಮಾಂಡಿಲೇ ನಿರ್ವಾಣ | ಪ್ರಾಣ ಹಾ ಸಾಂಡೀನ ತುಜ ವರೀ ||

ತುಕಾರಾಮರನ್ನು ನಿಷೇಸಿದ ರಾಮೇಶ್ವರ ಶಾಸ್ತ್ರಿಗಳು ಇತ್ತ ಆಳಂದಿಯಿಂದ ಹೊರಟು ನಾಗಝರಿಯ ಉಗಮದ ಹತ್ತಿರದಲ್ಲಿರುವ ಪಂಚವಟಿಗೆ ಬಂದರು. ಅವರು ಸ್ನಾನಕ್ಕೆಂದು ಅಲ್ಲಿಯ ಸರೋವರದಲ್ಲಿ ಇಳಿದರು. ಅವರ ಸ್ನಾನ ನಡೆದಾಗ ಆ ಸರೋವರದ ನೀರನ್ನು ಒಯ್ಯಲು ಅಲ್ಲಿಗೊಬ್ಬ           ಪವಿತ್ರನಾದ ಸಿದ್ಧ ಫಕೀರನು ಬಂದನು. ಯಾರು ನೀವು? ಎಲ್ಲಿಂದ ಬಂದಿರಿ?" ಎಂದು ಕೇಳಿದನು. ಅವನನ್ನು ಕಂಡವರೇ ಶಾಸ್ತ್ರಿಗಳು ಕಿವಿಗೆ ಬೆರಳುಗಳನ್ನು ತುರುಕಿಕೊಂಡು ನೀರಿನಲ್ಲಿ ಮುಳುಗಿದರು (ಯವನರ ಭಾಷೆಯನ್ನು ಕೇಳಬಾರದೆಂದು.) ಅವರ ಈ ಕೃತ್ಯದಿಂದ ಆ ಸಿದ್ಧನಿಗೆ ಕೋಪ ಬಂದು ಅವರಿಗೆ ಶಾಪವಿತ್ತನು. ರಾಮೇಶ್ವರ ಶಾಸ್ತ್ರಿಗಳು ನೀರಿನಿಂದ ಹೊರಬರುತ್ತಲೇ ಅವರ ಮೈಯೆಲ್ಲ ಉರಿತವನ್ನು ಅನುಭವಿಸಹತ್ತಿತು. ಅವರು ಮೈಗೆ ಒದ್ದೆ ಬಟ್ಟೆಯನ್ನು ಸುತ್ತಿಕೊಂಡು ಶಾಪದಿಂದ ಬಿಡುಗಡೆ ಹೊಂದಲೆಂದು ತಮ್ಮ ಶಿಷ್ಯರೊಡನೆ ಆಳಂದಿಗೆ               ಹಿಂತಿರುಗಿದರು. ಆಳಂದಿಗೆ ಬಂದು ಅಜಾನ ವೃಕ್ಷದಡಿ ಅನುಷ್ಠಾನಕ್ಕೆ ಕುಳಿತರು.

ಇದಾದಾಗ ಇತ್ತ ಹದಿಮೂರನೆಯ ದಿನ ರಾತ್ರಿ ಹೊತ್ತು ಭಗವಂತನು ಸಗುಣನಾಗಿ ಮಗುವಿನ ರೂಪವನ್ನು ಧರಿಸಿ ಶ್ರೀ ತುಕೋಬಾರನ್ನು ಭೆಟ್ಟಿಯಾದನು. ಅವನು ಅವರಿಗೆ, ನಿಮ್ಮ ಕೈಬರಹದ ಪುಸ್ತಕಗಳನ್ನು ಹದಿಮೂರು ಹಗಲಿರುಳು ನೀರಲ್ಲಿ ನಿಂತು ಕಾಪಾಡಿರುವೆನು. ನಾಳೆ ಅವು ನೀರ ಮೇಲೆದ್ದು ತೇಲಿ ಬರಲಿವೆ" ಎಂದನು. ದೇಹೂ ಊರಿನ ಭಾವಿಕರೆಲ್ಲರಿಗೂ ಇದೇ ಬಗೆಯ ದೃಷ್ಟಾಂತವಾಯಿತು. ಅದರಂತೆ ಭಕ್ತರೆಲ್ಲ ಇಂದ್ರಾಯಣಿಯ       ಮಡುವಿನ  ಬಳಿಗೆ ಹೋದರು. ಅವರ ಕಣ್ಣೆದುರೇ ಆ ಹೊತ್ತಿಗೆಗಳೆಲ್ಲ ನೀರ ಮೇಲೆ ತೇಲಾಡಹತ್ತಿದವು.       ಈಜುಗಾರರು ನೀರಿಗೆ ಧುಮುಕಿ ಅವುಗಳನ್ನು ಈಚೆಯ ದಡಕ್ಕೆ ತಂದರು. ಒಂದು ನೀರ ಹನಿ ಕೂಡ ಅವುಗಳನ್ನು ಸ್ಪರ್ಶಿಸಿರಲಿಲ್ಲ. ಎಲ್ಲರೂ ಜಯಜಯಕಾರವನ್ನು ಮಾಡಿದರು. ದೇವನಿಗೆ ತೊಂದರೆ ಕೊಟ್ಟುದಕ್ಕಾಗಿ ತುಕಾರಾಮ ಮಹಾರಾಜರಿಗೆ ತುಂಬ ದುಃಖವಾಯಿತು.

ಥೋರ ಅನ್ಯಾಯ ಝಾಲಾ | ತುಝಾ ಅಂತ ಮ್ಯಾ ಪಾಹಿಲಾ |

ಜನಾಚಿಯಾ ಬೋಲಾಸಾಠೀ | ಚಿತ್ತ  ಕ್ಷೆಭವಿಲೇ ||||

ಉದಕೀ ರಾಖೀಲೇ ಕಾಗದ | ಚುಕವಿಲಾ ಜನವಾದ |

ತುಕಾ ಮ್ಹಣೇ ಬ್ರೀದ | ಸಾಚೇ ಕೇಲೇ ಆಪುಲೇ ||

ಅತ್ತ ಆಳಂದಿಯಲ್ಲಿ ಜ್ನಾನದೇವ ಮಹಾರಾಜರು ರಾಮೇಶ್ವರ ಶಾಸ್ತ್ರಿಗಳಿಗೆ, ನೀವು ತುಕೋಬರನ್ನು ಹೀಯಾಳಿಸಿದುದರ ಫಲವಿದು. ಈಗ ಇದಕ್ಕಿರುವುದು ಒಂದೇ ಒಂದು ಉಪಾಯ. ಅದೆಂದರೆ, ದೇಹೂಕ್ಕೆ ಹೋಗಿ ಶ್ರೀ ತುಕೋಬಾರನ್ನು ಕಾಣುವುದು" ಎಂದು ಹೇಳಿದರು. ರಾಮೇಶ್ವರ ಶಾಸ್ತ್ರಿಗಳು ದೇಹೂದತ್ತ         ಹೊರಟುದು ತುಕೋಬಾರಿಗೆ ತಿಳಿಯಿತು. ಅವರು ತಮ್ಮ ಶಿಷ್ಯನ ಕೈಲಿ ಒಂದು ಅಭಂಗವನ್ನು ಶಾಸ್ತ್ರಿಗಳಿಗಾಗಿ      ಆಳಂದಿಗೆ ಕಳಿಸಿಕೊಟ್ಟರು. ಅದನ್ನೋದುತ್ತಲೇ ರಾಮೇಶ್ವರ ಶಾಸ್ತ್ರಿಗಳ ಮೈಯುರಿತ ಇಲ್ಲವಾಯಿತು.

ಚಿತ್ತ  ಶುದ್ಧ  ತರೋ ಶತ್ರು ಮಿತ್ರ ಹೋತೀ | ವ್ಯಾಘ್ರ  ಹೇ ನ ಖಾತೀ ಸರ್ಪ ತಯಾ ||

ದುಃಖ ತೇ ದೇಈಲ ಸರ್ವ ಸುಖಫಳ | ಹೋತೀಲ ಶಿತಳ ಅಗ್ನಿಜ್ವಾಳಾ ||

 

 

ರಾಮೇಶ್ವರ ಭಟ್ಟರು ಈ ಕುರಿತು ತಮ್ಮ ಅನುಭವವನ್ನು ಹೀಗೆ ಹೇಳಿದ್ದಾರೆ ಃ

ಕಾಹೀ ದ್ವೇಷ ತ್ಯಾಚಾ ಕರಿತಾ ಅಂತರೀ | ವ್ಯಥಾ ಹೇ ಶರೀರೀ ಬಹೂ ಝಾಲೀ ||

ಮ್ಹಣೇ ರಾಮೇಶ್ವರ ತ್ಯಾಚ್ಯಾ ಸಮಾಗಮೇ | ಝಾಲೇ ಹೇ ಆರಾಮ ದೇಹ ಮಾಝೇ ||

ರಾಮೇಶ್ವರ ಭಟ್ಟರು ತುಕಾರಾಮರ ದರ್ಶನ ಪಡೆಯಲೆಂದು ದೇಹೂಕ್ಕೆ ಬಂದು ಕಥೆ, ಕೀರ್ತನೆಗಳನ್ನು ಕೇಳಲೆಂದು ಅಲ್ಲಿಯೇ ಉಳಿದರು. ರಾಮೇಶ್ವರ ಭಟ್ಟರನ್ನು ಶಾಪಮುಕ್ತರನ್ನಾಗಿ ಮಾಡಿದ ವಾರ್ತೆ ಅನಗಡ ಫಕೀರ ಶಾಹನಿಗೆ ತಿಳಿದು ಅವನಿಗೆ ಕೆಡಕೆನ್ನಿಸಿತು. ಅವನು ತುಕಾರಾಮರನ್ನು ಪೀಡಿಸಲೆಂದು ದೇಹೂಕ್ಕೆ ಬಂದನು. ತುಕಾರಾಮರ ಮನೆಗೆ ಹೋದನು. ಒಂದು ಪಾತ್ರೆ ತುಂಬ ಭಿಕ್ಷೆ ಕೇಳಿದನು. ತುಕಾರಾಮರ ಮಗಳು ಅವನ ಪಾತ್ರೆಗೆ  ಒಂದು   ಚಿಮ್ಮಟಿ  ಹಿಟ್ಟು  ಹಾಕುತ್ತಲೇ  ಅದು ತುಂಬಿ  ಹೊರಚೆಲ್ಲಿತು.  ಆ  ಸಿದ್ಧನ  ಸಾಮರ್ಥ್ಯವು

ತುಕಾರಾಮರ ಬಾಗಿಲಲ್ಲಿ ನಾಶಹೊಂದಿತು. ಅನಗಡ ಶಾಹರು ಭಕ್ತಿ ಭಾವದಿಂದ ತುಕಾರಾಮ ತುಕಾರಾಮರನ್ನು ಕಂಡರು. ಭಜನೆ, ಕೀರ್ತನೆಗಳನ್ನು ಕಿವಿಯಿಂದ ಕೇಳಲೆಂದು ಅವರ ಬಳಿಯೇ ಉಳಿದರು. ದಾರ್ಶನಿಕ ಜ್ನಾನ, ಪಾಂಡಿತ್ಯ, ಋದ್ಧಿ ಮತ್ತು ಸಿದ್ಧಿಗಳು ಹರಿಭಕ್ತಿಗೆ ಶರಣು ಬಂದವು, ಇರಲಿ. ಹೊತ್ತಿಗೆಗಳು ತೇಲಿ ಉಳಿದು ಬಂದ ವಾರ್ತೆ ದೇಶ ದೇಶಗಳಲ್ಲೆಲ್ಲ ಹಬ್ಬಿತು. ಹೊತ್ತಿಗೆಗಳು ಉಳಿದುದರಿಂದ ಲೋಕಾಪವಾದ ತಪ್ಪಿತು. ಅಭಂಗವಾಣಿ ಅವಿನಾಶಿ ಎನ್ನಿಸಿತು. ಪರಮಾತ್ಮನ ಸಗುಣ ದರ್ಶನ ಆಯಿತು. ತುಕಾರಾಮರ ಕಥೆ ಕೀರ್ತನೆಯ ದಾರಿ ಸರಾಗವಾಯಿತು.

 ಸಂತ  ತುಕಾರಾಮರು ಮತ್ತು ಇಬ್ಬರು ಸಂನ್ಯಾಸಿಗಳು

 ಅವಘಾ ಝಾಲಾ ರಾಮರಾಮ | ಕೋಣೀ ಕರ್ಮ ಆಚರೇನ ||||

ತುಕಾರಾಮರು ಹೊಸ ಬಿರುಸು ಹಾಗೂ ಉತ್ಸಾಹಗಳಿಂದ ಕೀರ್ತನೆಗಳನ್ನು ಆರಂಭಿಸಿದರು.              ಲೋಕೋದ್ಧಾರ ಹಾಗೂ ಜನಜಾಗೃತಿಗಳಿಗಾಗಿ ತುಕಾರಾಮರ ಸಾಧನವೆಂದರೆ ಭಜನೆ, ಕೀರ್ತನೆ.

ತುಕಾ ಮ್ಹಣೇ ಕೇಲೀ ಸಾಧನಾ ಗಾಳಣೀ | ಸುಲಭ ಕೀರ್ತನೀ ಹೋಊನೀ ಠೇಲಾ ||||

ಗೋಕುಲದವರು ಭಗವಾನ ಶ್ರೀಕೃಷ್ಣನ ಹುಟ್ಟಿನಿಂದ ಮಥುರೆಯ ಪ್ರೇಮಸುಖವನ್ನು ಕೂಡ ಹೇರಳವಾಗಿ ಪಡೆದುಕೊಂಡರು. ತುಕಾರಾಮರು ಹುಟ್ಟಿದುದು ದೇಹೂ ಊರಲ್ಲಿ. ಆದರೆ ಲೋಹಗಾವದ ಜನ ಕೂಡ ಭಕ್ತಿ ಪ್ರೇಮದ   ಸುಖವನ್ನು   ಹೇರಳವಾಗಿ  ಪಡೆದರು.   ಲೋಹಗಾವವು  ತುಕಾರಾಮರ   ಅಜ್ಜನ  ಊರು.

ತುಕಾರಾಮ ರಾಜರ ಕೀರ್ತನೆಗಳು ಯಾವಾಗಲೂ ಲೋಹಗಾವದಲ್ಲಿ ಕೂಡ ಜರುಗುತ್ತಿದ್ದವು. ಒಂದು ಸಲ ಸನ್ಯಾಸಿಗಳಿಬ್ಬರು ಮಹಾರಾಜರ ಕೀರ್ತನೆಗೆ ಬಂದು ಕುಳಿತರು. ಅವರು ಹೆಂಗಸು-ಗಂಡಸರೆಲ್ಲ ಮೈಮರೆತು ಕೀರ್ತನೆಯನ್ನು ಆಲಿಸುತ್ತಿರುವುದನ್ನು ಕಂಡರು. ಹಿರಿ ಕಿರಿಯರು, ಬ್ರಾಹ್ಮಣರು, ಶೂದ್ರರೆಲ್ಲ ಪರಸ್ಪರರ ಪಾದಗಳಿಗೆ ತಲೆ ಬಾಗುತ್ತಿದ್ದಾರೆ. ಭೇದಭಾವ ಅಳಿಸಿಹೋಗಿದೆ. ಈ ನೋಟವನ್ನು ಕಂಡು ಅವರು ತುಕೋಬಾರನ್ನು ಜರಿದು, ಬ್ರಾಹ್ಮಣರನ್ನು ಹೀಯಾಳಿಸಿದರು. ನೀವು ಕರ್ಮಭ್ರಷ್ಟರಾದಿರಿ. ಕರ್ಮ ಮಾರ್ಗವನ್ನು ಬಿಟ್ಟು ರಾಮರಾಮ ಎನ್ನುತ್ತ ಕುಳಿತಿರುವಿರಿ. ಅವರು ಅಲ್ಲಿಂದ ಎದ್ದು ಹೊರಟರು. ತಮ್ಮ ಬಗಲಲ್ಲಿಯ ಕೃಷ್ಣಾಜಿನವನ್ನು ಸರಿಪಡಿಸಿಕೊಳ್ಳುತ್ತ ದೂರು ನೀಡಲೆಂದು, ನ್ಯಾಯ ಪಡೆಯಲೆಂದು ದಾದೋಜೀ ಕೊಂಡದೇವರ ಬಳಿಗೆ ಬಂದರು.

ಕಾಖೇ ಕಡಾಸನ ಆಡ ಪಡೇ | ಖಡಬಡ ಖಡಬಡ ಹುಸಕಲೇ ||||

ದಾದ ಕರಾ ದಾದ ಕರಾ | ಫಜೀತ ಖೋರಾ ಲಾಜ ನಾಹೀ ||||

ಅವಘಾ ಝಾಲಾ ರಾಮರಾಮ | ಕೋಣೀ ಕರ್ಮ ಆಚರೇನ ||||

ಅವರು ಹೀಗೆಂದು ದೂರಿಕೊಂಡರು : ಲೋಹಗಾವದ ಬ್ರಾಹ್ಮಣರು ಬ್ರಹ್ಮಕರ್ಮವನ್ನು ತೊರೆದು   ಬಿಟ್ಟಿದ್ದಾರೆ. ಅವರು ಶೂದ್ರನ ಪಾದಗಳಿಗೆ ಶರಣು ಹೋಗಿರುವರು. ಬರಿ ರಾಮರಾಮ ಎನ್ನುತ್ತ ಕುಳಿತಿರುತ್ತಾರೆ. ಅಧರ್ಮ ತಲೆಯೆತ್ತಿದೆ. ಹೀಗಾಗಿ ನೀವಿದನ್ನು ಸದೆಬಡೆಯಬೇಕು." ದಾದೋಜಿ ತಮ್ಮ ಸೈನಿಕರನ್ನು ಕಳಿಸಿ       ಬ್ರಾಹ್ಮಣರಿಗೆ ೧೦೦ ರೂಪಾಯಿಗಳ ದಂಡವನ್ನು ವಿಸಿದರು. ತುಕೋಬಾ ಹಾಗೂ ಲೋಹಗಾವದ ಜನರನ್ನು ಕರೆ ಕಳುಹಿಸಿದರು.  ತುಕಾರಾಮರು ಲೋಹಗಾವದ ಜನರೊಡನೆ ಪುಣೆಯ ಸಂಗಮದ ಬಳಿಗೆ ಬಂದರು. ಅಲ್ಲಿ    ಕೀರ್ತನೆಯನ್ನು ಆರಂಭಿಸಿದರು. ತುಕೋಬಾರು ಬಂದುದು ತಿಳಿಯುತ್ತಲೇ ಇಡಿಯ ಪುಣ್ಯನಗರಿ ಪುಣೆಯೇ ತುಕಾರಾಮರ ದರ್ಶನ ಹಾಗೂ ಕೀರ್ತನೆಗಾಗಿ ಅಲ್ಲಿಗೆ ಬಂದು ನೆರೆಯಿತು. ದಾದೋಜೀ ಕೂಡ ಹೊರಟರು. ಅವರು ಬಂದು ತುಕಾರಾಮರ ಕೀರ್ತನೆಯನ್ನು ಕೇಳುತ್ತ ಕುಳಿತರು. ಸನ್ಯಾಸಿಗಳಿಬ್ಬರೂ ಕೂಡ         ಕುಳಿತಿದ್ದರು. ಅವರಿಗೆ ತುಕೋಬಾರು ಪರಮಾತ್ಮನ ಸ್ವರೂಪರಾಗಿ ಕಾಣತೊಡಗಿದರು. ಅವರು ತುಂಬ ಪ್ರಭಾವಕ್ಕೊಳಗಾಗಿ ತುಕಾರಾಮರ ಪಾದಗಳಿಗೆ ಎರಗಿದರು. ದಾದೋಜಿಯವರು ಅವರನ್ನು ಆ ಕೃತ್ಯಕ್ಕಾಗಿ ವಿವರಣೆ ಕೇಳಿದರು. ಅವರು, ಬ್ರಾಹ್ಮಣರು ಶೂದ್ರರ ಪಾದಗಳಿಗೆ ತಲೆಬಾಗುತ್ತಾರೆ; ಅದರಿಂದ ಅಧರ್ಮ ಉಂಟಾಗುತ್ತದೆಂದು ದೂರುವಿರಿ. ಈಗ ನೋಡಿದರೆ ನೀವೇ ತುಕಾರಾಮರ ಕಾಲಿಗೆ ಬೀಳುವುದೆಂದರೇನು?" ಎಂದು ಕೇಳಿದರು. ಅದಕ್ಕೆ ಅವರಿಬ್ಬರೂ, ಕೀರ್ತನೆಯಲ್ಲಿ , ತುಕೋಬಾರಲ್ಲಿ ನಮಗೆ ನಾರಾಯಣನೇ            ಕಾಣುತ್ತಿರುವನು" ಎಂದು ಉತ್ತರಿಸಿದರು. ದಾದೋಜೀ ತಾವೇ ಮುಂದಾಗಿ ತುಕಾರಾಮರನ್ನು   ಸತ್ಕರಿಸಿದ ತರುವಾಯ ಸನ್ಯಾಸಿಗಳನ್ನು ನಗರದಿಂದ ಹೊರಹಾಕಿಸಿದರು.

ಧರಣಿ ಕುಳಿತವ

ಬೀಡ ಪರಗಣೆಯ ದೇಶಪಾಂಡೆ ತನ್ನ ಇಳಿವಯಸ್ಸಿನಲ್ಲಿ ತಾನು ಪಂಡಿತನಾಗಬೇಕೆಂದು ಬಯಸಿದನು. ಈ ವಯಸ್ಸಿನಲ್ಲಿ ಬಾಯಿಪಾಠ, ಅಧ್ಯಯನಗಳಿಂದ ಪಂಡಿತನಾಗುವುದು ಬಲು ಕಷ್ಟದ್ದು. ಹೀಗಾಗಿ ಅವನು ಆಳಂದಿಯಲ್ಲಿ ಜ್ನಾನೇಶ್ವರರೆದುರು ಧರಣಿ ಕುಳಿತನು. ಜ್ನಾನದೇವರು ಅವನಿಗೆ, ನೋಡಪ್ಪ , ನೀನು ದೇಹೂವಿನಲ್ಲಿ ಶ್ರೀ ತುಕೋಬಾರಲ್ಲಿಗೆ ಹೋಗು. ಸಧ್ಯಕ್ಕೆ ಕೋರ್ಟು ಅಲ್ಲಿದೆ" ಎಂದರು. ಆ ಬಗೆಯಾಗಿ ಅವನು ದೇಹೂಕ್ಕೆ ಬಂದನು. ಆ ಕಾಲಕ್ಕೆ ತುಕಾರಾಮ ಮಹಾರಾಜರು ಮೂವತ್ತೊಂದು ಅಭಂಗಗಳನ್ನು ಮಾಡಿದರು. ದೇವನನ್ನು ಮೊರೆ ಹೋಗುವ ಅಭಂಗಗಳು ಏಳು ಹಾಗೂ ಉಪದೇಶದ ಅಭಂಗಗಳು ಹನ್ನೊಂದು. ಈ ಅಭಂಗಗಳ ಗುಂಪುಗಳಲ್ಲಿ ತುಕಾರಾಮರ ಬೋಧನೆ, ವಿಚಾರ ಸರಣಿ, ಉಪದೇಶದ ವಿಧಾನ ಹಾಗೂ ತತ್ವ ವಿಚಾರಗಳು ಸೂಕ್ತವಾಗಿ ಕಂಡುಬರುತ್ತವೆ. ತುಕೋಬಾರು ಮೊದಲು ದೇವರನ್ನು ಮೊರೆ ಹೊಕ್ಕರು. ದೇವರೇ ಮನಸ್ಸಿನಲ್ಲಿದ್ದುನ್ನು ವ್ಯಕ್ತಪಡಿಸದೆಯೂ ನೀವದನ್ನು ಗುರುತಿಸಬಲ್ಲಿರಿ. ಹೀಗಾಗಿ ಅಭಯದಾನವನ್ನಿತ್ತು

ಹಟಹಿಡಿದವನನ್ನು ಸಮಾಧಾನಪಡಿಸಿ ನಿಮ್ಮ ಮಾನವನ್ನು ಕಾಯ್ದುಕೊಳ್ಳಿ.

ನ ಸಾಂಗತಾ ಕಳೇ ಅಂತರೀಚೇ ಗುಜ | ಆತಾ ತುಝೀ ಲಾಜ ತುಜ ದೇವಾ ||||

ಆಳೀಕರ ತ್ಯಾಂಚೇ ಕರೀ ಸಮಾಧಾನ | ಅಭಯಾಚೇ ದಾನ ದೇಉನೀ ||||

ಧರಣಿಯವನಿಗೆ ಉಪದೇಶ

ಧರ್ಮಗ್ರಂಥ, ಪರಾಯಣದ ಪುಸ್ತಕಗಳನ್ನು ಓದುತ್ತ ಕೂಡುವ ಗೋಜಿಗೆ ಇನ್ನು ಹೋಗಬೇಡ. ಈಗಿಂದೀಗ ನೀನು ಮಾಡಬೇಕಿದ್ದುದು ಒಂದೇ ಒಂದು ಸಂಗತಿ. ದೇವನಿಗಾಗಿ ದೇವನನ್ನು ಪ್ರಾರ್ಥಿಸು. ಮುಪ್ಪು ಬಂದಾಗಿದೆ. ಇನ್ನೆಷ್ಟು ತಡ ಮಾಡುವಿ?

ದೇವಾಚಿಯೇ ಚಾಡೇ ಆಳವಾವೇ ದೇವಾ | ವೋಸ ದೇಹಭಾವ ಪಾಡೋನಿಯಾ ||||

ನೀನು ನಿನ್ನ ಮನಸ್ಸಿಗೆ ಗೋವಿಂದನ ಹವ್ಯಾಸವನ್ನು ಅಂಟಿಸಿಕೋ. ಅಂದರೆ ನೀನೇ ಗೋವಿಂದನಾಗುವೆ.

ಗೋವಿಂದ ಗೋವಿಂದ | ಮನಾ ಲಾಗಲಿಯಾ ಛಂದ ||

ಮಗ ಗೋವಿಂದ ತೇ ಕಾಯಾ | ಭೇದ ನಾಹೀ ದೇವಾ ತಯಾ ||||

ಸುಖವಾಗಿ ಅನ್ನವನುಣ್ಣು ಹಾಗೂ ಪರಮಾತ್ಮನನ್ನು ಕುರಿತು ಚಿಂತಿಸು. ಹರಿಕಥೆಯೇ ಮಾತೆ ಎನ್ನಿಸಿದೆ.       ಅಲ್ಲದೆ ಸುಖದ ಸಮಾಯಾಗಿದೆ; ದಣಿದವನಿಗೆ ನೆರಳು, ವಿಶ್ರಾಂತಿಯ ಸ್ಥಾನವಾಗಿದೆ.

ಸುಖಾಚೀ ಸಮಾ ಹರೀಕಥಾ ಮಾಉಲೀ | ವಿಶ್ರಾಂತಿ ಸಾಉಲೀ ಶಿಣಲಯಾಂಚೀ ||||

ಉಳಿದವರು ಉಪವಾಸ ಮಾಡಬೇಕು. ವಿಠ್ಠಲನ ದಾಸನು ಚಿಂತೆಯನ್ನು ಬಿಸುಟಿ ಬಿಡಬೇಕು. ನಮ್ಮ ಮೈಯಲ್ಲಿ ಎಲ್ಲ ಸಾಮರ್ಥ್ಯ ಬಂದಿದೆ. ತುಕಾರಾಮರು ಧರಣಿ ಹಿಡಿದವನಿಗೆ ಈ ಉಪದೇಶವನ್ನು ಮಾಡಿದರು. ಆದರೆ    ಅವನು ಮೂರ್ಖತನದಿಂದ ಏನು ಮಾಡಿದನು?

ದೇವಾಚೇ ಉಚಿತ ಏಕಾದಶ ಅಭಂಗ | ಮಹಾಫಳ ತ್ಯಾಗ ಕರೋನೀ ಗೇಲಾ ||

ಛತ್ರಪತಿ ಶಿವಾಜಿ ಮತ್ತು  ಸಂತ   ತುಕಾರಾಮರು

ಶ್ರೀ ತುಕಾರಾಮರ ಕೀರ್ತಿಯು ಶಿವಾಜಿ ರಾಜರನ್ನು ತಲುಪಿತು. ಅವರು ದೀವಟಿಗೆ, ಛತ್ರದ ಕುದುರೆ ಹಾಗೂ ವಜ್ರ-ವೈಡೂರ್‍ಯಗಳನ್ನು ತುಕಾರಾಮರಿಗೆ ಕಳಿಸಿಕೊಟ್ಟರು. ಅವರು ದೇವರಿಗೆ ಹೀಗೆಂದರು,

ನಾವಡೇ ಜೇ ಚಿತ್ತಾ | ತೇ ತೂ ಹೋಶೀ ಪುರವಿತಾ ||||

ದೀವಟಿಗೆ, ಛತ್ರ, ಕುದುರೆಗಳು ನನಗೇನೂ ಲಾಭ ತರುವ ಸಂಗತಿಗಳಲ್ಲ. ದೇವನೇ, ನೀನೇಕೆ ನನ್ನನ್ನು ಇವುಗಳಲ್ಲಿ ತೊಡಗಿಸುವೆ? ತುಕಾರಾಮರ ಈ ನಿರಪೇಕ್ಷತೆಯನ್ನರಿತು ಶಿವಾಜಿ ರಾಜರಿಗೆ ಬೆರಗಾಯಿತು. ಅವರು ತಾವಾಗಿಯೇ ಬಟ್ಟೆಬರೆ, ಆಭೂಷಣಗಳು, ಅಲಂಕಾರ, ನಾಣ್ಯಗಳನ್ನು ತೆಗೆದುಕೊಂಡು ಸೇವಕರೊಡನೆ ಲೋಹಗಾವಕ್ಕೆ ಆಗಮಿಸಿದರು. ಆ ರಾಜದ್ರವ್ಯವನ್ನು ಕಂಡು ತುಕೋಬಾರು ಹೀಗೆಂದರು,

ಕಾಯ ದಿಲಾ ಠೇವಾ | ಆಮ್ಹಾ ವಿಠ್ಠಲಚಿ ಹ್ವಾವಾ ||||

ತುಮ್ಹೀ ಕಳಲೇ ತೀ ಉದಾರ | ಸಾಠೀ ಪರಿಸಾಚೀ ಗಾರ ||||

ತುಕಾ ಮ್ಹಣೇ ಧನ | ಆಮ್ಹಾ ಗೋಮಾಂಸಾ ಸಮಾನ ||||

ಒಂದು ಇರುವೆಯಾಗಲಿ, ಒಬ್ಬ ರಾಜನಾಗಲಿ ನಮಗೆ ಒಂದೇ. ಹಾಗೆಯೇ ಮಣ್ಣು , ಹೊನ್ನು ನಮಗೆ ಒಂದೇ ಆಗಿವೆ.

ಮುಂಗೀ ಆಣಿ ರಾವ | ಆಮ್ಹಾ ಸಮಾನಚಿ ಜೀವ ||||

ಸೋನೇ ಆಣಿ ಮಾತೀ | ಆಮ್ಹಾ ಸಮಾನಚಿ ಚಿತ್ತೀ ||||

ನಾವು ಈ ಸಂಗತಿಗಳಿಂದ ಸುಖಿಯಾಗಲಾರೆವು. ನೀವು ದೇವರ ಹೆಸರನ್ನು ಉಚ್ಚರಿಸಿ. ಶ್ರೀಹರಿಯ ಸೇವಕರೆನ್ನಿಸಿ.

ಆಮ್ಹೀ ತೇಣೇ ಸುಖೀ | ಮ್ಹಣಾ ವಿಠ್ಠಲ ವಿಠ್ಠಲ ಮುಖೀ ||||

ಮ್ಹಣವಾ ಹರಿಚೇ ದಾಸ | ತುಕಾ ಮ್ಹಣೇ ಮಜ ಹೇ ಆಸ ||||

ತುಕಾರಾಮರ ಉಪದೇಶದಿಂದ ಪ್ರಭಾವಿತರಾದ ರಾಜರು ರಾಜ್ಯವನ್ನು ಬಿಟ್ಟು ತುಕೋಬಾರ ಭಜನೆ ಕೀರ್ತನೆಗಳನ್ನು ಆಲಿಸತೊಡಗಿದರು. ಆಗ ತುಕೋಬಾರು ಅವರಿಗೆ ಹಾಗೂ ಸೇವಕರಿಗೆ ಕ್ಷಾತ್ರಧರ್ಮವನ್ನು ಹೇಳಿದರು.

ಆಮ್ಹೀ ಜಗಾಲಾ ಉಪದೇಶ ಕರಾವಾ | ಆಪಣ ಕ್ಷಾತ್ರಧರ್ಮ ಸಾಂಭಾಳಾವಾ ||

ಭಾಂಡಣ ಪಡಲೇ ಅಸತಾ ಸೇವಕಾನೀ ಸ್ವಾಮೀಚ್ಯಾ ಪುಢೇ ಹ್ವಾವೇ |

ಸ್ವಾಮೀಪುಢೇ ಹ್ವಾವೇ ಪಡತಾ ಭಾಂಡಣ ||

ಮದ್ದುಗುಂಡುಗಳು, ಬಾಣಗಳು ಸುರಿಯುತ್ತಿರುವಾಗ ಸೈನಿಕರು ಅದನ್ನು ಸಹಿಸಿಕೊಳ್ಳಬೇಕು. ತಮ್ಮನ್ನು ರಕ್ಷಿಸಿಕೊಳ್ಳುತ್ತ ಹಗೆಗಳನ್ನು ಸುತ್ತುಗಟ್ಟಬೇಕು, ಅವರದೆಲ್ಲವನ್ನು ಕಸಿದುಕೊಳ್ಳಬೇಕು. ಹಗೆಗಳಿಗೆ ತಮ್ಮ ಸುಳಿವು    ಸಿಗದ ಹಾಗೆ ನೋಡಿಕೊಳ್ಳಬೇಕು. ಒಡೆಯನಿಗಾಗಿ ಸೇವಕರು ತಮ್ಮ ಜೀವಗಳನ್ನು ಲೆಕ್ಕಿಸತಕ್ಕದ್ದಲ್ಲ. ಇಂಥ        ಸೈನಿಕರುಳ್ಳ ಸೇನೆಯನ್ನು ಹೊಂದಿದ ರಾಜನೇ ತ್ರೈಲೋಕ್ಯದಲ್ಲೆಲ್ಲ ಸಾಮರ್ಥ್ಯವಂತನೆನ್ನಿಸುವನು.

ತುಕಾರಾಮರು   ಶಿವಾಜಿ    ರಾಜರನ್ನು    ಆಶೀರ್ವದಿಸಿ    ಬೀಳ್ಕೊಟ್ಟರು.  ರಾಜರು ಹಾಗೂ ಸೇವಕರು

ತುಕಾರಾಮರ ಉಪದೇಶವನ್ನು ಗಮನದಲ್ಲಿರಿಸಿಕೊಂಡರು. ಅದನ್ನು ಕೃತಿಗಿಳಿಸಿದರು. ತುಕಾರಾಮರ ಆಶೀರ್ವಾದದಿಂದ ರಾಜರು ಸಾಮರ್ಥ್ಯ ಸಂಪನ್ನರಾದ ಮಹಾರಾಜರೆನ್ನಿಸಿದರು.

ಮಾಝ್ಯಾ ವಿಠೋಬಾಚಾ ಕೈಸಾ ಪ್ರೇಮ ಭಾವ | ಆಪಣಚಿ ದೇವ ಹೋಯ ಗುರು ||||

ಜ್ನಾನಮಾರ್ಗದಲ್ಲಿ ಗುರುವಿನ ಹಿರಿಮೆ ದೊಡ್ಡದು. ಭಕ್ತಿ ಮಾರ್ಗದಲ್ಲಿ ಅಷ್ಟೊಂದಲ್ಲ.

ಮೇಘವೃಷ್ಟೀನೇ ಕರಾವಾ ಉಪದೇಶ |

ಎನ್ನುವ ವಿಚಾರಸರಣಿ ತುಕಾರಾಮರದು. ಮಹಾರಾಜರಿಗೆ ಅದ್ವೈತಶಾಸ್ತ್ರ ಎಳ್ಳಷ್ಟೂ ಇಷ್ಟವಾಗುತ್ತಿರಲಿಲ್ಲ.

ಅದ್ವೈತಾಚೀ ವಾಣೀ | ನಾಹೀ ಐಕತ ಮೀ ಕಾನೀ ||||

ಮಹಾರಾಜರ ಪ್ರೀತಿ ಹೆಚ್ಚಾಗಿ ಸಗುಣದ ಬಗೆಗೆ. ಹೀಗಾಗಿ ತುಕಾರಾಮರು ಶ್ರೀಗುರುವಿಗೆ ಶರಣು ಹೋಗಲಿಲ್ಲ.

ಅದ್ವೈತಶಾಸ್ತ್ರ  ನಾವಡೇ ಯಾಸೀ | ಯಾಸ್ತವ ಶರಣ ನ ಜಾಯ ಸದ್ಗುರುಶೀ ||

ಪುಢೇ ವಾಟ ಪಡೇಲ ಐಸೀ | ಗುರು ಭಕ್ತೀಶೀ ಅವರೋಧ ||

ಏಕ ಶ್ರೇಷ್ಠ ಆಚರಲಾ ಜೈಸೇ | ಜನ ಪಾಹೋನಿ ವರ್ತತೀ ತೈಸೇ ||

ತರೀ ಆಪಣ ಧರೂನಿ ವಿಪ್ರವೇಶ | ದ್ಯಾವಾ ತುಕಯಾಸೀ ಅನುಗ್ರಹ ||

ತಮ್ಮ ಕನಸಿನಲ್ಲಿ ತುಕಾರಾಮರು ಇಂದ್ರಾಯಣಿಯಲ್ಲಿ ಮಿಂದು ದೇವಾಲಯಕ್ಕೆ ಹೋಗುತ್ತಿರುವಾಗ ಒಬ್ಬ ಬ್ರಾಹ್ಮಣನನ್ನು ಕಂಡು ಅವನನ್ನು ನಮಸ್ಕರಿಸಿರು. ಬ್ರಾಹ್ಮಣನು ಸಂತುಷ್ಟನಾಗಿ ತುಕಾರಾಮರ ತಲೆಯ ಮೇಲೆ ಕೈಯಿರಿಸಿ ರಾಮಕೃಷ್ಣ ಹರಿ ಮಂತ್ರವನ್ನಿತ್ತರು. ತಮ್ಮ ಪರಂಪರೆಯನ್ನು ಹೇಳಿದರು.  ಘಟನೆ ನಡೆದುದು ಮಾಘ ಶುದ್ಧ ದಶಮಿ, ಗುರುವಾರದಂದು.

ಸಾಪಡವಿಲೇ ವಾಟೇ ಜಾತ ಗಂಗಾಸ್ನಾನಾ | ಮಸ್ತಕೀ ತೋ ಜಾಣಾ ಠೇವಿಲಾ ಕರ ||||

ರಾಘವ ಚೈತನ್ಯ ಕೇಶವ ಚೈತನ್ಯ | ಸಾಂಗಿತಲೀ ಖುಣ ಮಾಲಿಕೇಚೀ ||||

ಬಾಬಾಜೀ ಆಪುಲೇ ಸಾಂಗಿತಲೇ ನಾಮ | ಮಂತ್ರ ದಿಲಾ ರಾಮಕೃಷ್ಣ ಹರಿ ||||

ಮಾಘ ಶುದ್ಧ ದಶಮೀ ಪಾಹೋನಿ ಗುರುವಾರ | ಕೇಲಾ ಅಂಗೀಕಾರ ತುಕಾ ಮ್ಹಣೇ ||||

 

ತುಕಾರಾಮರು ತಾವಾಗಿ ಯಾರ ಬಳಿಯೂ ಮಂತ್ರಕ್ಕಾಗಿ ಯಾಚಿಸಿರಲಿಲ್ಲ. ಅವರು ಹೀಗೆನ್ನುತ್ತಾರೆ,

ನಾಹೀ ಮ್ಯಾ ವಂಚಿಲಾ ಮಾತ್ರ ಕೋಣಾಪಾಶೀ | ರಾಹಿಲೋ ಜಿವಾಶೀ ಧರೋನಿಯಾ ||||

ತುಕಾರಾಮರು ಹೀಗೆನ್ನುತ್ತಾರೆ ಃ ಕಿವಿಯೂದುವುದು ನನಗೆ ಗೊತ್ತಿಲ್ಲ. ಏಕಾಂತದ eನ ನನ್ನಲ್ಲಿಲ್ಲ. ಆದರೆ ಕಣ್ಣಿಂದ ದೇವನನ್ನು ಕಾಣದವನಿಗೆ ನಾವು ಅವನನ್ನು ತೋರಿಸಬಲ್ಲೆವು.

ನೇಣೋ ಫುಂಕೋ ಕಾನ | ನಾಹೀ ಏಕಾಂತೀಚೇ e||||

ನಾಹೀ ದೇಖಿಲಾ ತೋ ಡೋಳಾ | ದೇವ ದಾಖವೂ ತೇ ಕಳಾ ||||

ಸಂತ  ತುಕಾರಾಮ ರ ಬೋಧನೆ, ಉಪದೇಶ, ಕಲಿಸುವಿಕೆಗಳು

ಪ್ರಪಂಚ (ಸಂಸಾರ)ದಲ್ಲಿ ಪ್ರಭುವಿನ ಅಷ್ಠಾನವಿಲ್ಲದೆ, ದೇವನನ್ನು ತಮ್ಮವನನ್ನಾಗಿ ಒಪ್ಪಿಕೊಳ್ಳದೆ         ಜೀವಿಗಳಿಗೆ ಸುಖ ದೊರಕದು.

ಆಪುಲಾ ತೋ ಏಕ ದೇವ ಕರೋನೀ ಘ್ಯಾವಾ | ತೇಣೇ ವಿನ ಜೀವಾ ಸುಖ ನೋಹೇ ||||

ನೀವು ನನ್ನ ಅನುಭವವನ್ನು ನೋಡಿ,

ಮಾಝಾ ಪಹಾ ಅನುಭವ | ಕೇಲಾ ದೇವ ಆಪುಲಾ ||||

ಬೋಲವಲೇ ತೇಚೀ ದ್ಯಾವೇ | ಉತ್ತರ ಹ್ವಾವೇ ತೇ ಕಾಳೀ ||||

ಇದು ಯಾವುದರ ಅನುಭವ ಎಂದಿರಾದರೆ -

ಹಾ ಘೇ ಮಾಝಾ ಅನುಭವ | ಭಕ್ತೀಭಾವ ಭಾಗ್ಯಾಚಾ ||||

ಋಣೀ ಕೇಲಾ ನಾರಾಯಣ | ನೋಹೇ ಕ್ಷಣ ವೇಗಳಾ ||||

ದೈವದ ಲೀಲೆಯು ತುಕಾರಾಮರ ಸಂಸಾರವನ್ನು ರಸಾತಳಕ್ಕೆ ತಳ್ಳಿತು. ದೇವರ ಲೀಲೆಯಿಂದಾಗಿ ಮಹಾರಾಜರು ಗೌರೀಶಂಕರ ಶಿಖರವನ್ನು ತಲುಪಿದರು. ದೈವ ಅನಿರ್ಬಂಧ. ಅದರ ಮೇಲಾವ ಬಂಧನವಿಲ್ಲ. ದೇವರ ಮೇಲಾವ ಬಗೆಯ ಬಂಧನ? ಅದೆಂದರೆ ಪ್ರೇಮದ್ದು.

ಪ್ರೇಮಸೂತ್ರ ದೋರೀ | ನೇತೋ ತಿಕಡೇ ಜಾತೋ ಹರೀ ||||

ಆ ಪ್ರಭುವಿನ ಪ್ರೇಮವು ಸ್ಮರಣೆಯಿಂದ ದೊರಕುತ್ತದೆ.

ಆಮ್ಹೀ ಘ್ಯಾವೇ ತುಝೇ ನಾಮ | ತುಮ್ಹೀ ಆಮ್ಹಾ  ದ್ಯಾವೇ ಪ್ರೇಮ ||

ಸಂತರ ಊರುಗಳಲ್ಲಿ ಕೂಡ ಪ್ರೇಮ ಸಾಕಷ್ಟಿರುತ್ತದೆ.

ಸಂತಾಂಚಿಯೇ ಗಾವೀ ಪ್ರೇಮಾಚಾ ಸುಕಾಳ | ನಾಹೀ ತಳಮಳ ದುಃಖ ಲೇಶ ||||

ಸಂತರ ವ್ಯಾಪಾರ, ಉಪದೇಶದ ಪೇಟೆಯಲ್ಲಿ ಪ್ರೇಮಸುಖದ ಕೊಡುಕೊಳ್ಳುವಿಕೆ ಸಾಗಿರುತ್ತದೆ.

ಸಂತಾಂಚಾ ವ್ಯಾಪಾರ ಉಪದೇಶಾಚೀ ಪೇಠ | ಪ್ರೇಮ ಸುಖಾಸಾಠೀ ದೇತೀ ಘೇತೀ ||

ಉಳಿದಂತೆ ಯಾವಾಗಲೂ ಈ ಭಕ್ತಿಯ ಪ್ರೇಮಸುಖ ಎಂದರೇನು ಎಂಬುದು ಪಂಡಿತರಿಗೂ, ಜ್ನಾನಿಗಳಿಗೂ ಕೂಡ ತಿಳಿದಿರದು, ತಿಳಿಯದು.

ಭಕ್ತಿ ಪ್ರೇಮ ಸುಖ ನೇಣವೇ ಆಣಿಕಾ | ಪಂಡಿತಾ ವಾಚಕಾ eನಿಯಾಸೀ ||

ಈ ಪ್ರೇಮದಿಂದ ಸಮಾಜವನ್ನು ಕಟ್ಟಲಾಗುವುದು, ಜೋಡಿಸಲಾಗುವುದು. ಪ್ರೇಮದಲ್ಲಿ ಎಲ್ಲ ಬಗೆಯ ಭೇದಗಳು, ತಾನು-ಪರರೆಂಬ ಭಾವಗಳು ಇಲ್ಲವಾಗುತ್ತವೆ. ಪ್ರೇಮದಿಂದ ಬಾಳು ಸುಖ, ಸಮೃದ್ಧಿಗಳನ್ನು ಹೊಂದುವುದು. ಇಂಥ ಈ ದಿವ್ಯವಾದ ದೈವೀ ಪ್ರೇಮವು ಪ್ರಭುವಿನ ಸ್ಮರಣೆಯಿಂದ ದೊರಕುವುದು. ಸಂತರ ಸಾನ್ನಿಧ್ಯದಲ್ಲಿ ದೊರಕುವುದು. ಪ್ರೇಮದಿಂದ ದುಃಖವು ಸುಖದಲ್ಲಿ ರೂಪಾಂತರವನ್ನು ಹೊಂದುವುದು.      ಮಾನವನ ಬಾಳು ಇಡಿಯಾಗಿ ಮಾರ್ಪಾಟು ಹೊಂದುವುದು.

ಉಪದೇಶ

ಉಪದೇಶ ತೋ ಭಲತ್ಯಾ ಹಾತೀ | ಝಾಲಾ ಕಿತೀ ಧರಾವಾ ||

ಆತಾ ತರೀ ಪುಢೇ ಹಾಚೀ ಉಪದೇಶ | ನಕಾ ಕರೂ ನಾಶ ಆಯುಷ್ಯಾಚಾ ||

ಮೋಲಾಚೇ ಆಯುಷ್ಯ ಜಾತೇ ಹಾತೋಹಾತ | ವಿಚಾರೀ ಪಾಹಾತ ಲವಲಾಹೀ ||

ಗಾತ ಜಾತೋ ತುಕಾ | ಹಾಚಿ ಉಪದೇಶ ಲೋಕಾ ||

ತುಕಾ ಮ್ಹಣೇ ಹಿತ ಹೋಯ ತೋ ವ್ಯಾಪಾರ | ಕರಾ ಕಾಯ ಫಾರ ಶಿಕವಾವೇ ||

ಆಪುಲಿಯಾ ಹಿತಾ ಜೋ ಅಸೇ ಜಾಗತಾ | ಧನ್ಯ ಮಾತಾ ಪಿತಾ ತಯಾಚಿಯೇ ||

ಕುಳೀ ಕನ್ಯಾ ಪುತ್ರ ಹೋತೀ ಜೇ ಸಾತ್ತ್ವಿಕ | ತಯಾಚಾ ಹರೀಖ ವಾಟೇ ದೇವಾ ||

ಗೀತಾ ಭಾಗವತ ಕರಿತೀ ಶ್ರವಣ | ಅಖಂಡ ಚಿಂತನ ವಿಠೋಬಾಚೇ ||

ಹಿತ ತೇ ಕರಾವೇ ದೇವಾಚೇ ಚಿಂತನ | ಕರೋನಿಯಾ ಮನ ಶುದ್ಧ ಭಾವೇ ||

ತುಕಾ ಮ್ಹಣೇ ಫಾರ | ಥೋಡಾ ತರೀ ಉಪಕಾರ ||

ಸಂತಸಂಗ

ಸಂಗ ನ ಕರಾವಾ ದುರ್ಜನಾಂಚಾ | ಕರೀ ಸಂತಾಂಚಾ ಸಾಯಾಸ ||

ಪತನ ಉದ್ಧಾರ ಸಂತಾಂಚಾ ಮಹಿಮಾ | ತ್ಯಜಾವೇ ಅಧಮಾ ಸಂತ ಸೇವೀ ||

ಜೋಡೋನಿಯಾ ಧನ ಉತ್ತಮ ವ್ಯವಹಾರೇ | ಉದಾಸ ವಿಚಾರೇ ವೇಚ ಕರೀ ||

ತುಕಾರಾಮರ ಕಲಿಸುವಿಕೆಯು ಸುವಿಚಾರ, ಸದಾಚಾರ ಹಾಗೂ ಸಮತೆಗಾಗಿ ಇದ್ದಿತು. ಅವರು ಪ್ರಾಣಿಮಾತ್ರರ ಕಲ್ಯಾಣಕ್ಕಾಗಿ ಯಾರ ದಾಕ್ಷಿಣ್ಯಕ್ಕೂ ಒಳಗಾದವರಲ್ಲ.

ನಾಹೀ ಭಿಡಭಾಡ | ತುಕಾ ಮ್ಹಣೇ ಸಾನಾಥೋರ ||

ತೀಕ್ಷ್ಣ ಉತ್ತರೇ | ಹಾತೀ ಘೇಉನಿ ಬಾಣ ಫಿರೇ ||

ತುಕಾ ಮ್ಹಣೇ ಲಾಸು ಫಾಸು ದೇಉ ಡಾವ | ಸುಖಾಚಾ ಉಪಾಯ ಪುಢೇ ಆಹೇ ||

ಸಂತ  ತುಕಾರಾಮರ ಧುಪದದವರು (ಪಲ್ಲವಿಯವರು), ತಾಳದವರು,

ಅನುಯಾಯಿಗಳು ಮತ್ತು ಶಿಷ್ಯರು

ತುಕಾರಾಮರ ಮುಖ್ಯ ಧುಪದರು, ತಾಳದವರು ೧೪ ಜನರಿದ್ದರೆಂದು ಮಹೀಪತ         ಬಾಬಾರವರು ಹಲವೆಡೆ ಉಲ್ಲೇಖಿಸಿರುವರು. ತುಕಾರಾಮರ ಕೀರ್ತನೆಯ ಕಾಲಕ್ಕೆ ಈ ಮುಂದಿನ ಜನರು    ಧುಪದವನ್ನು (ಪಲ್ಲವಿ ಅನ್ನುವವರು) ಹೇಳುತ್ತಿದ್ದರು ಃ

        ೧.     ಮಹಾದಾಜೀಪಂತ ಕುಲಕರ್ಣಿ, ದೇಹೂಗಾವದ ಕುಲಕರ್ಣಿ - ಇವರ ಉಲ್ಲೇಖವು ಬಹಿಣಾಬಾಯಿಯ ಗಾಥೆಯಲ್ಲೂ ಬಂದಿದೆ - ದೇವಾಲಯದ ಕಟ್ಟಡದ ಕೆಲಸದ ಮೇಲ್ವಿಚಾರಣೆ ಇವರದಾಗಿತ್ತು.

        ೨.     ಗಂಗಾಧರಬಾಬಾ ಮವಾಳ - (ತಳೇಗಾವ), ಅಭಂಗ ಲೇಖಕರು, ಇವರು ತುಕೋಬಾರ ಸೇವೆಯನ್ನು ಆರಂಭಿಸಿದ ಉಲ್ಲೇಖ ಕಾಗದ ಪತ್ರಗಳಲ್ಲಿದೆ.

        ೩.      ಸಂತಾಜೀ ತೇಲೀ ಜಗನಾಡೇ - (ಚಾಕಣದವರು) - ತುಕೋಬಾರ ಅಭಂಗ ಲೇಖಕರು.

        ೪.     ತುಕಯಾ ಬಂಧು ಕಾನ್ಹೋಬಾ.

        ೫.     ಮಾಲಜೀ ಗಾಡೇ (ಯೇಲವಾಡೀ) - ತುಕಾರಾಮರ ಅಳಿಯ.

        ೬.     ಕೋಂಡೋಪಂತ ಲೋಹಕರೇ - ಲೋಹಗಾವ.

        ೭.     ಗವಾರ ಶೇಟ ವಾಣೀ - ಸುದುಂಬರೇ.

        ೮.     ಮಲ್ಹಾರಪಂತ ಕುಲಕರ್ಣಿ - ಚಿಖಲೀ.

        ೯.      ಆಬಾಜೀಪಂತ ಲೋಹಗಾವಕರ.

        ೧೦.   ರಾಮೇಶ್ವರಭಟ್ಟ ಬಹುಳಕರ

        ೧೧.   ಕೋಂಡಪಾಟೀಲ, ಲೋಹಗಾವ.

        ೧೨.   ನಾವಜೀ ಮಾಳೀ - ಲೋಹಗಾವ

        ೧೩.    ಶಿವಬಾ ಕಾಸಾರ - ಲೋಹಗಾವ.

        ೧೪.   ಸೋನಬಾ ಠಾಕೂರ - ಕೀರ್ತನೆಯಲ್ಲಿ ಮೃದಂಗವನ್ನು ನುಡಿಸುತ್ತಿದ್ದರು.

ತುಕಾರಾಮರ ಶಿಷ್ಯೆ ಬಹಿಣಾಬಾಯಿ. ಮಹಾರಾಜರು ಈಕೆಗೆ ಕನಸಿನಲ್ಲಿ ಉಪದೇಶ           ನೀಡಿದರು. ಆಕೆ ದರ್ಶನಕ್ಕಾಗಿ ದೇಹೂಕ್ಕೆ ಬಂದರು. ಈಕೆಗೆ ಕವಿತ್ವ ಸುರಿಸಿದುದು ದೇಹೂದಲ್ಲೇ.                ಬಹಿಣಾಬಾಯಿಯವರು ತುಕೋಬಾರ ಕಥೆ ಕೀರ್ತನೆಗಳನ್ನು ಪ್ರತ್ಯಕ್ಷದಲ್ಲಿ ಆಲಿಸಿದರು. ಮುಂಬಾಜಿಯಿಂದ ಈಕೆಗೆ ತುಂಬ ತೊಂದರೆಯಾಯಿತು. ಬಹಿಣಾಬಾಯಿಯವರ ಯೋಗ್ಯತೆ, ಅಕಾರಗಳು ಸುಮಾರು            ತುಕೋಬಾರಷ್ಟೇ  ಇದ್ದವು. ಬಹಿಣಾಬಾಯಿಯವರ ಅಭಂಗಗಳ ಗಾಥೆಯನ್ನು ಒಂದು ಸಲವಾದರೂ          ಓದಿಕೊಳ್ಳಲೇಬೇಕು.

ಪ್ರಯಾಣ

ಕಾರ್ತಿಕ ವದ್ಯ ಏಕಾದಶಿಯಂದು ಆಳಂದಿಯಲ್ಲಿ ಜ್ನಾನದೇವರೆದುರು ತುಕೋಬಾರ ಕೀರ್ತನೆ

ನಡೆದಿತ್ತು. ಯಾತ್ರೆ ಅಪಾರವಾಗಿ ನೆರೆದಿತ್ತು. ಕೀರ್ತನೆಯ ಅಭಂಗ ಇದಾಗಿತ್ತು -

ಭಕ್ತೀ ತೇ ನಮನ ವೈರಾಗ್ಯ ತೋ ತ್ಯಾಗ | eನಬಹ್ಮೀ ಭೋಗ ಬ್ರಹ್ಮ  ತನೂ ||||

ದೇಹವು ಎಂದಾದರೂ ಬ್ರಹ್ಮವಾದೀತೆ ? ಯಾರಾದರೂ ಹಾಗೆ ಮಾಡಿರುವರೆ? - ಎಂಬುದಾಗಿ        ಆತ್ಮಾನಾತ್ಮ ಕುರಿತಾಗಿ ವಿಚಾರ ಮಾಡುವಂತಹ ಜ್ನಾನಿ ಶ್ರೋತೃಗಳು ತುಕೋಬಾರನ್ನು ಪ್ರಶ್ನೆ ಕೇಳಿದರು.         ತುಕೋಬಾರು, ನಾನು ಮಾಡಿ ತೋರಿಸುವೆ ಎಂದರು.

ಘೋಟವೀನ ಲಾಳ ಬ್ರಹ್ಮeನ್ಯಾಹಾತೀ | ಮುಕ್ತಾ ಆತ್ಮಸ್ಥಿತೀ ಸಾಂಡವೀನ ||

ಬ್ರಹ್ಮೀಭೂತ ಕಾಯಾ ಹೋತಸೇ ಕೀರ್ತನೀ | ಭಾಗ್ಯ ತರೀ ಋಣೀ ದೇವಾ ಐಸಾ ||

ಲೋಹಗಾವದಲ್ಲಿ ತುಕಾರಾಮರ ಕಥೆ-ಕೀರ್ತನೆ ನಡೆದ ವೇಳೆಗೆ ಪರರ ದಾಳಿ ಬಂದು ಲೋಹಗಾವನ್ನು ಸುಲಿಯಿತು. ತುಕೋಬಾರು ದೇವನನ್ನು ಮೊರೆಹೊಕ್ಕರು.

ನ ದೇಖವೇ ಡೋಳಾ ಐಸಾ ಹಾ ಆಕಾಂತ | ಪರಪೀಡೇ ಚಿತ್ತ ದುಃಖೀ ಹೋತೇ |||ದೇವರು ಶೀಘ್ರವಾಗಿ ಪ್ರಸನ್ನನಾಗಲಿಲ್ಲ. ತುಕೋಬಾರು ದೇವರಿಗೆ ಹೀಗೆಂದರು ಃ

ತುಜ ಭಕ್ತಾಚೀ ಆಣ ದೇವಾ | ಜರೀ ತುಕಾ ಯೇಥೇ ಠೇವಾ ||||

ಮೂರನೆಯ ಸಂಗತಿ - ತುಕೋಬಾರು ಜ್ನಾನದೇವರ ಅಪಾರವಾದ ಸೇವೆಯನ್ನು         ಕೈಕೊಂಡರು. ಈ ಋಣದಿಂದ ಬಿಡುಗಡೆ ಹೊಂದಲೆಂದು ಜ್ನಾನದೇವ ಮಹಾರಾಜರು ಜಿಜಾಯಿಯ       ಹೊಟ್ಟೆಯಲ್ಲಿ ಹುಟ್ಟಿ  ಬಂದರು. ತುಕೋಬಾರು ಇದನ್ನು ಗುರುತಿಸಿದರು. ದೇವರು ತಾವೇ ಬಂದು               ಸೇವೆಗೈಯ್ಯಲು ಯತ್ನಿಸುತ್ತಿರುವುದೇನೂ ಒಳ್ಳೆಯದಲ್ಲ. ಬದಲು ತಾವೇ ಅವನಲ್ಲಿಗೆ ಹೋಗಿ ಬರಬೇಕು. ಈ     ಬಗೆಗೆ  ಅವರು  ಎಲ್ಲರನ್ನೂ ಕೇಳಿದರು. ಎಲ್ಲರಿಗೂ, ನಾವು ವೈಕುಂಠಕ್ಕೆ ಹೋಗಲಿದ್ದೇವೆ. ನೀವೂ ನಮ್ಮ ಜೊತೆಗೆ ಬನ್ನಿ ಎಂದರು. ಯಾರೂ ಸಿದ್ಧರಾಗಲಿಲ್ಲ. ತುಕಾರಾಮರು ಎಲ್ಲರನ್ನೊಡಗೂಡಿ ಇಂದ್ರಾಯಣಿಯ ದಡಕ್ಕೆ         ಬಂದರು. ಅಲ್ಲಿ   ನಾಂದುರುಖೀ (ಆಲ ಮತ್ತು ಅರಳೆ ಕೂಡಿದ, ಪಾರಂಬಿಗಳುಳ್ಳ ಒಂದು ಜಾತಿಯ ಗಿಡ)    ಮರದಡಿ ಕೀರ್ತನೆಯನ್ನು ಆರಂಭಿಸಿದರು ೧೪ ಜನ ತಾಳದವರು ಕ್ಷೇಮಾಲಿಂಗನವನ್ನು ಮಾಡಿದರು.          ತುಕಾರಾಮರ ಮಗ ಮಹಾದೇವ ವಿಠೋಬಾ ಮುಂದೆ ಬಂದು ಮಹಾರಾಜರಿಗೆ ನಮಸ್ಕರಿಸಿದರು.           ತುಕಾರಾಮರು ಅವರ ತಲೆಯ ಮೇಲೆ ಕೈಯೂರಿದರು. ಜಿಜಾಬಾಯಿಯತ್ತ ಮೆಚ್ಚುಗೆಯಿಂದ ನೋಡಿದರು.     ಎಲ್ಲರಿಗೂ ಹೀಗೆಂದರು -

ಸಕಳಹೀ ಮಾಝೀ ಬೋಳವಣ  ಕರಾ | ಪರತೋನಿ ಘರಾ ಜಾವೇ ತುಮ್ಹೀ ||

ವಾಢವೇಳ ಝಾಲಾ ಉಭಾ ಪಾಂಡುರಂಗಾ | ವೈಕುಂಠಾ ಶ್ರೀರಂಗ ಬೋಲಾವತೋ ||||

ಆಮ್ಹೀ ಜಾತೋ ತುಮ್ಹೀ ಕೃಪಾ ಅಸೋ ದ್ಯಾವೀ | ಸಕಳಾ ಸಾಂಗಾವೀ ವಿನಂತೀ ಮಾಝೀ ||

ಅಂತಃಕಾಳೀ ವಿಠೋ ಆಮ್ಹಾಸೀ ಪಾವಲಾ | ಕುಡೀಸಹಿತ ಝಾಲಾ ಗುಪ್ತ ತುಕಾ ||||

ಭಗವತ್ ಕಥೆ ನಡೆದಾಗಲೇ ತುಕೋಬಾ ಅದೃಶ್ಯರಾದರು. ಇದೇ ಬಗೆಯ ಉಲ್ಲೇಖವು ರಾಜ್ಯಾಭಿಷೇಕ    ಶಕೆ ೨೦ರ ಸನದಿನಲ್ಲೂ ಇದೆ.

ಶಕೇ ಪಂಧರಾಶೇ ಏಕಾಹತ್ತರೀ | ವಿರೋ ನಾಮ ಸಂವತ್ಸರೀ |

ಫಾಲ್ಗುನ ವದ್ಯ ದ್ವಿತೀಯಾ ಸೋಮವಾರೀ | ಪ್ರಥಮ ಪ್ರಹರಿ ಪ್ರಯಾಣ ಕೇಲೇ ||||

 ತುಕೋಬಾ ಗೋಸಾವೀ ವೈಕುಂಠಾಸ ಗೇಲೇ. ಸ್ವದೇಹೀನಿಶೀ ಗೇಲೇ."

ಬಾಳೋಜೀ ತೇಲೀ ಜಗನಾಡೆ ಟಿಪ್ಪಣಿ ಹೊತ್ತಿಗೆ ಪುಟ ೨೧೬. ಸಂತಾಜಿಯ ಹೊತ್ತಿಗೆಯ ಪ್ರತಿ (ನಕಲು). ಪ್ರಯಾಣದ ಕಾಲಕ್ಕೆ ಸಂತಾಜಿ ಪ್ರತ್ಯಕ್ಷದಲ್ಲಿ ಹಾಜರಿದ್ದರು.

ತುಕಾರಾಮರು ಕಾಣೆಯಾಗುತ್ತಲೇ (ಗುಪ್ತ) ಎಲ್ಲೆಡೆಯ ಜನರು ಶೋಕಸಾಗರದಲ್ಲಿ ಮುಳುಗಿದರು. ಮಹಾರಾಜರ ಮಕ್ಕಳು, ಸೋದರರು, ಅನುಯಾಯಿಗಳು ಅಲ್ಲಿಯೇ ಕುಳಿತುಬಿಟ್ಟರು. ಪಂಚಮಿಯಂದು ಮಹಾರಾಜರ ತಾಳಗಳು, ಪತ್ರ, ಕಥಾ ಆಕಾಶಮಾರ್ಗದಿಂದ ಬಂದವು. ರಾಮೇಶ್ವರ ಶಾಸ್ತ್ರಿಗಳು ತೀರ್ಮಾನ ಹೇಳಿದರು. ತುಕೋಬಾರು ಸದೇಹ ವೈಕುಂಠಕ್ಕೆ ತೆರಳಿದರು. ಎಲ್ಲರೂ ಸ್ನಾನ ಮಾಡಿ ಮುಗಿಸಿದರು.

ತುಕಾರಾಮರ ಗಂಡುಮಕ್ಕಳು, ಸೋದರರೆಲ್ಲ ದೇವರೊಂದಿಗೆ ಜಗಳವಾಡಿದರು. ದೇವರೇ, ನೀನು ನನ್ನ ಸೋದರನನ್ನು  ತಂದು ಕೊಡು. ವೈಕುಂಠಕ್ಕೆ ಕರೆದೊಯ್ಯಬೇಡ. ದೇವನು ಕಾನ್ಹೋಬನನ್ನು ಸಮಾಧಾನಪಡಿಸಿದನು.

ಸಂತ  ತುಕಾರಾಮರ ತರುವಾಯ

 ಸಂತ  ತುಕಾರಾಮರು ದೇಹದೊಂದಿಗೆ ವೈಕುಂಠಕ್ಕೆ ಹೋದ ವಾರ್ತೆಯನ್ನು ಆಲಿಸಿ ಶಿವಾಜಿ ರಾಜರಿಗೆ ಬೆರಗಾಯಿತು. ಆಗ ಅವರು ದೇಹೂದವರಾದ ಜಾನೋಜೀ ಭೋಸಲೆಯವರ ಬಳಿ ತುಕಾರಾಮರ ಕುಟುಂಬದವರ ಬಗೆಗೆ ವಿಚಾರಿಸಿದರು. ಅಲ್ಲದೆ ತುಕಾರಾಮರ ಹಿರಿಯ ಮಗ ಮಹಾದೇವಬುವಾ ಇವರನ್ನು ಭೆಟ್ಟಿಗೆ ಕರೆದುಕೊಂಡು ಬರಲು ಅಪ್ಪಣೆಯನ್ನು ಮಾಡಿದರು. ಜಾನೋಜೀ ಭೋಸಲೆಯವರು ಮಹಾದೇವ ಬಾಬಾರನ್ನು ಜೊತೆಗೆ ಕರೆದುಕೊಂಡು ಶಿವಾಜಿ ರಾಜರಲ್ಲಿಗೆ ಹೋದರು. ಶಿವಾಜಿ ರಾಜರು ಮಹಾದೇವ    ಬಾಬಾರಿಗೆ   ವರ್ಷಕ್ಕೆ ಒಂದು ಖಂಡಿ ಧಾನ್ಯ ಹಾಗೂ ಸೀರೆಗಾಗಿ ಒಂದು ಹೊನ್ನದ ಸನದನ್ನು ತಯಾರಿಸಿ ಕೊಟ್ಟರು. ಸಂಭಾಜಿ ರಾಜರು ಇದೇ ಉಂಬಳಿಯನ್ನು ಮುಂದುವರೆಸಿದರು.

ತುಕಾರಾಮರ ವೈಕುಂಠಗಮನದ ತರುವಾಯ ನಾರಾಯಣರ ಜನ್ಮವಾಯಿತು. ನಾರಾಯಣರು ಜ್ನಾನದೇವರ ಅವತಾರರಾದ್ದರಿಂದ ಅಣ್ಣಂದಿರಾದ ಮಹಾದೇವಬುವಾ, ವಿಠೋಬಾರು ನಾರಾಯಣರಾಯರ ಅಪ್ಪಣೆಯಂತೆ ನಡೆದುಕೊಳ್ಳುತ್ತಿದ್ದರು. ತಾಯಿ ಬದುಕಿರುವವರೆಗೆ ಒಟ್ಟಿಗೆ ಇರುತ್ತಿದ್ದರು. ತಾಯಿಯ ಮರಣಾನಂತರ ವಿಠ್ಠಲಬುವಾ, ನಾರಾಯಣಬುವಾ ಇವರು ಅವಳ ಅಸ್ಥಿಯೊಂದಿಗೆ ಮಹಾಯಾತ್ರೆಗೆ ಹೊರಟರು. ಮಹಾದೇವಬುವಾರು ಶ್ರೀ ವಿಠ್ಠಲದೇವನ ಪೂಜೆ ಅರ್ಚನೆಗಳನ್ನು ದಿನಾಲು ನಡೆಯಿಸಿಕೊಂಡು ಹೋದರು. ಮಹಾದೇವಬಾಬಾ ಇವರು ತುಕಾರಾಮರ ಅಭಂಗಗಳನ್ನು ಬರೆದಿದ್ದಾರೆ. ನಾರಾಯಣಬಾಬಾರು ಮೊದಲಿಗೆ ಸರಂಜಾಮೀ ವೈಭವದಿಂದ ಇರತೊಡಗಿದರು. ಸಂತಾಜೀ ಪವಾರರು ಅವರ ಭೆಟ್ಟಿಗೆ ಬಂದರು. ಅವರು ನಾರಾಯಣಬಾಬಾರನ್ನು ಕ್ಕರಿಸಿದರು. ಬಾಬಾರು ಬ್ರಾಹ್ಮಣರಿಗೆ ತಮ್ಮ ಮನೆಯದೆಲ್ಲವನ್ನು ಕೊಟ್ಟುಬಿಟ್ಟರು. ತಪಸ್ಸನ್ನಾಚರಿಸಿದರು. ಕಾಡಿನಲ್ಲಿ ವಾಸವಾಗಿದ್ದರು. ವಿಠೋಬಾನ ಭವ್ಯವಾದ ಒಂದು ದೇಗುಲವನ್ನು ಕಟ್ಟಿಸಿದರು.

ತುಕಾರಾಮ ತೋ ಆಚ ಗೇಲೇ ಹೋತೇ ವೈಕುಂಠಾ |

ಬಹು ದಿವಸಾನೀ ಮಗ ವೈರಾಗ್ಯ ಝಾಲೇ ನೀಳಕಂಠಾ ||||

ತುಕಯಾಚಾ ನಂದನ ಮಾಗೇ ನಾರಾಯಣಬಾಬಾ |

ದರ್ಶನ ತ್ಯಾಚೇ ಘೇಉನಿ ಮ್ಹಣತೀ ಸುಸಂಗ ಲಾಭಾವಾ ||||

ನಿಳೋಬಾ ಗೋಸಾವೀ ಪಿಂಪಳನೇರಕರರು ಬಾಬಾ ಅವರ ದರ್ಶನಕ್ಕಾಗಿ ಬಂದರು. ಬಾಬಾರು ಅವರಿಗೆ ತುಕಾರಾಮರ ಸಂಪೂರ್ಣವಾದ ಚರಿತ್ರೆಯನ್ನು ಹೇಳಿದರು. ನಿಳೋಬಾರನ್ನು ತಮ್ಮ ಜೊತೆಗೆ ತೀರ್ಥಯಾತ್ರೆಗೆ ಕರೆದೊಯ್ದರು. ನಿಳೋಬಾರು ತುಕೋಬಾರ ಭೆಟ್ಟಿಗಾಗಿ ೪೨ ದಿನಗಳ (ನಿರ್ವಾಣ) ನಿರ್ಧಾರದಿಂದ ಕುಳಿತರು. ತುಕೋಬಾ ಭೆಟ್ಟಿಯಾದರು.

ಯೇಉನಿಯಾ ಕೃಪಾವಂತೇ | ತುಕಯಾ ಸ್ವಾಮೀ ಸದ್ಗುರುನಾಥೇ ||||

ಹಾತ ಠೇವಿಲಾ ಮಸ್ತಕೀ | ದೇಉನೀ ಪ್ರಸಾದ ಕೇಲೇ ಸುಖೀ ||||

ನಿಳೋಬರಲ್ಲಿ ಕವಿತ್ವ ಸುರಿಸಿತು. ಅವರೂ ಕೂಡ ಹಲವಾರು ಅಭಂಗಗಳನ್ನು ರಚಿಸಿದರು ನಾರಾಯಣ ಬಾಬಾರನ್ನು ಒಬ್ಬ ಶ್ರೇಷ್ಠ ತಪಸ್ವಿ ಹರಿಭಕ್ತನೆಂದು ಸನದು ಪತ್ರದಲ್ಲಿ ಉಲ್ಲೇಖಿಸಿದುದು ಕಂಡುಬರುತ್ತದೆ. ಬಾಬಾರ ದರ್ಶನಕ್ಕಾಗಿ ದೂರದೂರದಿಂದ ಸಂಚಾರಿ ಸನ್ಯಾಸಿಗಳು, ಯಾತ್ರಿಕರು ಬರತೊಡಗಿದರು. ಬಿದಿಗೆಯ (ಬೀಜ) ಮಹೋತ್ಸವ ನಡೆಯತೊಡಗಿತು. ಬಾಬಾ ಬಂದವರಿಗೆಲ್ಲ ಅನ್ನದಾನವನ್ನು ಮಾಡಬೇಕಿತ್ತು. ಅದಕ್ಕಾಗಿ         ಇ.ಸ. ೧೬೯೧ ರಲ್ಲಿ ಛತ್ರಪತಿ, ರಾಜಾರಾಮ ಮಹಾರಾಜರು ನಾರಾಯಣಬಾಬಾರಿಗೆ ಯೇಲವಾಡೀ ಗ್ರಾಮವನ್ನು ಇನಾಮು ಕೊಟ್ಟರು. ಮುಂದೆ ದೇಹೂ, ಕಿನ್ಹಈ ಗ್ರಾಮಗಳನ್ನು ದೇವರ ಮಹೋತ್ಸವ, ಪೂಜೆ-ಅರ್ಚನೆ, ಅನ್ನಛತ್ರಗಳಿಗಾಗಿ ಛತ್ರಪತಿ ಇಮ್ಮಡಿ ಶಿವಾಜಿ ಹಾಗೂ ಶಾಹೂರಿಂದ ಬಾಬಾರಿಗೆ ನೀಡಲಾಯಿತು. ಶಾಹೂ ಮಹಾರಾಜರು ಹಾಗೂ ರಾಣಿ ಸಕರಾಬಾಯಿ ಇವರು ಬಾಬಾರನ್ನು ಗುರುವಿನ ಸ್ಥಾನದಲ್ಲಿ ಮನ್ನಿಸುತ್ತಿದ್ದರು. ನಾರಾಯಣರು ಆಷಾಢದ ವಾರಿಯೊಡನೆ ಶ್ರೀ ತುಕಾರಾಮರ ಪಲ್ಲಕ್ಕಿ ಉತ್ಸವವನ್ನು  ಆರಂಭಿಸಿದರು. ಬಾಬಾರು ದೇವಸ್ಥಾನಕ್ಕೆ ಕೀರ್ತಿಯನ್ನು ತಂದುಕೊಟ್ಟರು. ಸಂಪ್ರದಾಯವನ್ನು ಬೆಳೆಯಿಸಿದರು. ಔರಂಗಜೇಬನು ಮಹಾರಾಷ್ಟ್ರದಲ್ಲಿ ಬೀಡುಬಿಟ್ಟಾಗ ಬಾಬಾರವರು ಪಂಢರಪುರ ಹಾಗೂ ಶಿಂಗಣಾಪುರದ ಯಾತ್ರಿಕರಿಗಾಗಿರುವ ಉಪದ್ರವಗಳನ್ನು ತಡೆಹಿಡಿದರು. ಬಾಬಾರು ಶಕೆ ೧೬೪೫ ಶ್ರಾವಣ ಶುದ್ಧ ಚತುರ್ಥಿಯ ದಿನ ವೈಕುಂಠವಾಸಿಗಳಾದರು. ಮಹಾದೇವಬಾಬಾರ ಮಗ ಆಬಾಜೀಬಾಬಾ ಇವರು ನಾರಾಯಣರ ಅಸ್ಥಿಗಳನ್ನು ತೆಗೆದುಕೊಂಡು ಕಾಶಿಯತ್ರೆಗೆ ಹೋದರು.

ಆಬಾಜೀಬಾಬಾರು ಗಂಗೋದಕದ ಕಾವಡಿಯೊಡನೆ ದೇಹೂವಿಗೆ ತಿರುಗಿ ಬಂದರು. ಈ ಮಧ್ಯೆ ವಿಠ್ಠಲಬಾಬಾರ ಮಗ ಉದ್ಧವಬಾಬಾರು ಶಾಹೂ ಮಹಾರಾಜರ ಬಳಿ ಇರುತ್ತಿದ್ದರು. ಅವರು ದೇಹೂವಿಗೆ ಬಂದರು. ಅವರು ದೇವಸ್ಥಾನ ಸಂಸ್ಥಾನದ ಆಡಳಿತೆಯನ್ನು ವಶಪಡಿಸಿಕೊಂಡರು. ಅವರು ದೇವಸ್ಥಾನಗಳನ್ನು ಆಬಾಜೀಬಾಬಾರ ಕೈಗೆ ಕೊಡಲೊಲ್ಲರಾದರು. ಆಬಾಜೀಬಾಬಾ ಕೂಡ ವೈರಾಗ್ಯ ಸಂಪನ್ನರಾದ ತಪಸ್ವಿ ಹರಿಭಕ್ತಿರತರಾಗಿದ್ದರು. ಆಬಾಜೀಬಾಬಾರ ತರುವಾಯ ಅವರ ಮಗ ಮಹಾದೇವಬಾಬಾ ಕೂಡ              ದೇವಸ್ಥಾನ  ಸಂಸ್ಥಾನಕ್ಕಾಗಿ  ಜಗಳಾಡಿದರು. ಜಗಳವು ಹಿರಿತನ  ಹಾಗೂ  ದೇವನಿಗಾಗಿ  ಇದ್ದಿತು ;                   ದೇವಸ್ಥಾನಕ್ಕಾಗಿ ಇರಲಿಲ್ಲ. ಸರಕಾರವು ಹೆಚ್ಚಿನ ಗಮನ ನೀಡಲಿಲ್ಲ. ಹೀಗಾಗಿ ಮಹಾದೇವಬಾಬಾರು         ದೇಹೂವನ್ನು ತೊರೆದು ದೇವನಿಗಾಗಿ, ಸಂಪ್ರದಾಯಕ್ಕಾಗಿಯೆಂದು ಪಂಢರಪುರಕ್ಕೆ ಬಂದು ನೆಲೆಸಿದರು. ಭಕ್ತರು ದೇವರ ಬಳಿಗೆ ಬರತೊಡಗಿದರು. ಅವರು ತುಕಾರಾಮರ ಅಭಂಗಗಳನ್ನು ಸಂಕಲಿಸಿ ಒಂದು      ಗಾಥೆಯನ್ನು ತಯಾರಿಸಿದರು. ಅವರು ದೇಹೂ ಊರಿನವರ ಫಡ ಪರಂಪರೆಯ ಭಜನೆ, ಕೀರ್ತನೆಯ         ತಂಡವನ್ನು ನಡೆಸಿದರು. ಅವರ ಮಗ ವಾಸುದೇವ ದೇಹೂಕರರು ಪಂಢರಪುರದಲ್ಲಿ ವಾರಕರಿ ಸಂಪ್ರದಾಯಕ್ಕಾಗಿ ತುಂಬ ದುಡಿದುಕೊಂಡರು. ಅವರ ಕಾಲದಲ್ಲಿಯೇ ಚಿಕ್ಕ ದೊಡ್ಡ ಹಲವು ಫಡಗಳು ಕೀರ್ತಿ ಹೊಂದಿದವು. ಹೀಗಾಗಿ ವಾರಕರಿ ಪರಂಪರೆಯು ಹೆಚ್ಚು ಹೆಚ್ಚಾಗಿ  ಹಬ್ಬತೊಡಗಿತು. ಸಂಪ್ರದಾಯವು        ಕರ್ನಾಟಕಕ್ಕೂ ಚಾಚಿತು. ಅವರ ಮಗ ವಾಸುದೇವಬಾಬಾರು ಫಡವನ್ನು ಕೀರ್ತಿಗೆ ತಂದರು. ತುಕೋಬಾರ ಮೊಮ್ಮಗ ಗೋಪಾಳಬುವಾ ಇವರೂ ಕೂಡ ಒಬ್ಬ ಸಾಕ್ಷಾತ್ಕಾರಿಗಳಾಗಿದ್ದರು.

ಸಂತ  ತುಕಾರಾಮರ ಚರಿತ್ರೆಯನ್ನು ಬರೆದುದು ಅವರ ಮಹಾನ್ ಕಾರ್ಯವೇ ಸರಿ. ದೇಹೂ ಸಂಸ್ಥಾನವು ಮನೆತನದ ಪಲ್ಲಕ್ಕಿ ಉತ್ಸವವನ್ನು ಆಷಾಢ, ಕಾರ್ತಿಕಗಳ ಪಂಢರಪುರದ ವಾರಿಯ ಕಾಲಕ್ಕೆ ಇಂದಿಗೂ ನಡೆಯಿಸಿಕೊಂಡು ಬಂದಿದೆ. ದೇಹೂ ಊರವರು ಊರೂರುಗಳಿಗೆ ಹೋಗಿ ಕಥೆ, ಕೀರ್ತನೆಗಳನ್ನು ಮಾಡುತ್ತ ಸಂಪ್ರದಾಯವನ್ನು ಬೆಳೆಸಿದರು. ಸಂಪ್ರದಾಯ ಹಾಗೂ ಕುಲದೇವತೆಯ ಅಮೌಲ್ಯವಾದ ಸೇವೆಯನ್ನು ಕೈಕೊಂಡರು. ಇಂದಿಗೂ ಎಲ್ಲ ಜನರು,

ಅಮೃತಾಚೀ ಫಳೇ ಅಮೃತಾಚೇ ವೇಲೀ | ತೇಚೀ ಪುಢೇ ಚಾಲೀ ಬೀಜಾಚಿಹಿ ||||

ಎನ್ನುವ ಮಹಾರಾಜರ ವಚನವನ್ನು ಸಾರ್ಥಕಗೊಳಿಸುತ್ತಿರುವರು.

ಹ.ಭ.ಪ. ಶ್ರೀಧರ ದೇಹೂಕರ

ಸಂತ   ತುಕೋಬಾರಾಯರ ಜನ್ಮಸ್ಥಾನ, ಶ್ರೀ ಕ್ಷೇತ್ರ ದೇಹೂ.