ಹಿಂದಿನ ತಲೆಮಾರಿನ ಕನ್ನಡದ ರಂಗರಸಿಕರು ಕೊಟ್ಟೂರಪ್ಪ ಎಂದು ಹೆಸರಾದ ಕೊಟ್ಟೂರು ಬಸವಯ್ಯನವರಂತಹ
(೧೮೮೮-೧೯೭೬) ಪ್ರಭಾವಶಾಲಿಯಾದ ವ್ಯಕ್ತಿಯನ್ನು ಅದೆಂದಿಗೂ ಮರೆಯಲಾರರು.ಅವರು ಆಂಜನೇಯ ಮತ್ತು
ನಾರದರ ಭಕ್ತಿ ಪಾತ್ರಗಳಲ್ಲಿ ಸರ್ವಶ್ರೇಷ್ಠರೆನ್ನಿಸಿದ್ದರು.
ಅವರು ತುಕಾರಾಮರ ಪಾತ್ರವನ್ನು ಬಲು ಸಾಮರ್ಥ್ಯದಿಂದ ಅಭಿನಯಿಸಿದ್ದರು. ಅದು ತುಂಬ
ಜನಪ್ರಿಯವಾಗಿತ್ತು.
ಕನ್ನಡದ ಹೆಸರಾದ ನಟ, ಗಾಯಕ ರಾಜಕುಮಾರರು ಒಬ್ಬ ಅಸಾಮಾನ್ಯ ವ್ಯಕ್ತಿಗಳೇ ಅಹುದು. ತುಂಬ
ಜನಪ್ರಿಯರು. ಸುಮಾರು ನಾಲ್ಕು ದಶಕಗಳಷ್ಟು ಕಾಲ ಅವರು ಚಲನಚಿತ್ರ ಪ್ರಿಯರಿಗೆ ಮೋಡಿ ಹಾಕಿದವರು.
ದಕ್ಷಿಣ ಭಾರತದಲ್ಲೇ ದಿಗ್ಗಜರೆನ್ನಿಸಿದ ಇವರು ಸುಂದರರಾವ ನಾಡಕರ್ಣಿ ನಿರ್ದೇಶನದ ‘ಸಂತ ತುಕಾರಮ’
ಚಲನ ಚಿತ್ರದಲ್ಲಿ ಸಂತ ತುಕಾರಾಮರ ಪಾತ್ರವನ್ನು ನಿರ್ವಹಿಸಿದ್ದರು. ಇದೀಗ ಕಾಲವಶರಾದ
ಚಲನಚಿತ್ರಕಾರ, ಡಿ. ವಿ. ರಾಜಾರಾಮರು ತಮ್ಮ ಕೆಮೆರಾ ತಂತ್ರಗಳಿಗಾಗಿ ಹೆಸರಾದವರು. ಅವರು ಕನ್ನಡ
ಚಲನಚಿತ್ರ ರಂಗವನ್ನು ಪ್ರವೇಶಿಸಿದುದೇ ‘ಸಂತ ತುಕಾರಾಮ’ದ ಮೂಲಕ. ಈ ಚಿತ್ರವು ಒಳ್ಳೆಯ ಗಳಿಕೆಯನ್ನು
ಸಂಪಾದಿಸಿತು.
ಡಾ| ರಾಜಕುಮಾರರ ಅಭಿನಯ ಶ್ರೇಷ್ಠ ಮಟ್ಟದ್ದಾಗಿತ್ತು. ಭಾರತೀಯ ಚಲನಚಿತ್ರದ ಇವರ ಅದ್ವಿತೀಯ
ಕೊಡುಗೆಗಾಗಿ ಇ.ಸ. ೧೯೯೬ ರಲ್ಲಿ ಇವರನ್ನು ‘ದಾದಾ ಸಾಹೇಬ ಫಾಳ್ಕೆ ಪ್ರಶಸ್ತಿ’ಯಿಂದ
ಸನ್ಮಾನಿಸಲಾಯಿತು.