ಕರ್ನಾಟಕ
 

ವಿಶ್ವಕೋಶ್

ಮುನ್ನುಡಿಯಿ
ಚರಿತ್ರೆ
ಕಥೆಗಳು
ಮಕ್ಕಳಿಗಾಗಿ
ಸಮೀಕ್ಷೆ
ಬಹಿಣಾಬಾಯಿ
 
ಮಹಾತ್ಮಾ
 ಗಾಂಧೀ
ಬ್ರೆಲ್
 
Feedback
Home
 

Font Problem

 

ಬಹಿಣಾಬಾಯಿ :

           ದೇಹೂ ಊರಿನಲ್ಲಿ ತುಕಾರಾಮರ ಮನೆಯ ಹತ್ತಿರದಲ್ಲಿದ್ದ ವಿಠ್ಠಲನ ದೇವಾಲಯದಲ್ಲಿ ಅವರು ದೇವರ ವಿಗ್ರಹದೆದುರು ಮಾಡುವ ತಮ್ಮ ಕಾವ್ಯದ ಭಜನೆಯನ್ನು ಆಲಿಸಲೆಂದು ಕಿರಿ ವಯಸ್ಸಿನ ಕವಯಿತ್ರಿಯಾದ ಬಹಿಣಾಬಾಯಿಯು ದೂರದ ಕೊಲ್ಲಾಪುರದಿಂದ ಬಂದಳು. ಬಹಿಣಾಬಾಯಿಯ ಈ ಸಂಗತಿ, ತುಕಾರಾಮರು ಕಣ್ಮರೆಯಾಗುವ ಕೆಲ ವರ್ಷಗಳ ಮೊದಲಿಗೆ ಸಂಬಂಧಪಟ್ಟುದಾದರೂ, ಅದರಿಂದ ನಮಗೆ ಸಮಕಾಲೀನ ಮಹಾರಾಷ್ಟ್ರದ ಮೇಲಿರುವ ತುಕಾರಾಮರ ಪವಾಡಸದೄಶವಾದ ವ್ಯಕ್ತಿತ್ವದ ಪ್ರಭಾವ ಕಂಡುಬರುತ್ತದೆ. ಈ ಮೊದಲೇ ನಮೂದಿಸಲಾದ ಜಲ-ದಿವ್ಯವು ಬಹಿಣಾಬಾಯಿಯ ದೇಹೂ-ಭೇಟಿಯ ಮುನ್ನವೇ ನಡೆದುದು. ತುಕಾರಾಮರು ತಮ್ಮ ಬಾಳಿನಲ್ಲಿ ಪಡೆದ ಪವಾಡಸದೄಶವಾದ ಮನ್ನಣೆಗೆ , ಹದಿಮೂರು ದಿನಗಳ ಕಾಲ ನದಿಯಲ್ಲಿ ಮುಳುಗಿಸಲಾದ ಅವರ ಹಸ್ತ-ಪ್ರತಿಗಳು ಒಂದು ಪವಾಡವೆಂಬಂತೆ ಮರಳಿ ದೊರೆತುದು ಖಂಡಿತ ಒಂದು ಮುಖ್ಯ ಸಂಗಾತಿಯೆನ್ನಿಸಿದೆ. ತಮ್ಮ ಭಜನೆಗಳನ್ನು ಹಾಡುವ ತುಕಾರಾಮರನ್ನು “ಪಾಂಡುರಂಗನ ಅವತಾರ”ರೆಂದು ಬಹಿಣಾಬಾಯಿಯು ಬಣ್ಣಿಸಿದ್ದಾಳೆ.

 

    ಬಹಿಣಾಬಾಯಿಯು (೧೬೨೯-೧೭೦೦) ಮರಾಠಿಯ ಸಂತ ಕವಿಗಳಲ್ಲಿ ಗಮನಾರ್ಹಳೆನ್ನಿಸಲು ಕಾರಣ ಅವಳೊಬ್ಬಳು ಸ್ತ್ರೀಯಾಗಿರುವುದಲ್ಲ. ಅವಳಿಗಿಂತಲೂ ಬಲು ಮೊದಲೇ ಮುಕ್ತಾಬಾಯಿ ಮತ್ತು ಜನಾಬಾಯಿಯರು ಆಗಿಹೋಗಿದ್ದರು. ಅವಳು ಅದ್ವಿತೀಯಳೆನ್ನಿಸಲು ಕಾರಣವೆಂದರೆ ಅವಳೊಬ್ಬಳು ವಿವಾಹಿತಳಾದ ಬ್ರಾಹ್ಮಣ ಸ್ತ್ರೀಯಾಗಿದ್ದೂ ಭಕ್ತಿ ಮತ್ತು ವಿಶೇಷವಾಗಿ ತುಕಾರಾಮರ ಕಾವ್ಯಕ್ಕೆ ಮಾರುಹೋದವಳು. ಅವಳು ಕೊಲ್ಲಾಪುರದಲ್ಲಿರುವಾಗಲೇ ಜಯರಾಮಸ್ವಾಮಿ ಎಂಬ ಕೀರ್ತನಕಾರರಿಂದ ತುಕಾರಾಮರನ್ನು ಕುರಿತು ಕೇಳಿದ್ದಳು. ಅವರನ್ನು ಕಾಣಬೇಕೆನ್ನುವ ಎಲ್ಲಿಲ್ಲದ ಹುಚ್ಚು ಅವಳಿಗೆ. ಅವರು ತನ್ನನ್ನು ಹರಸಿದರಲ್ಲದೆ ತನ್ನ ಗುರುಗಳಾದರೆಂದು ಕನಸು ಕಂಡಳು. ಇದರಿಂದಾಗಿ ಅವಳ ಗಂಡ ಹೊಟ್ಟೇಕಿಚ್ಚಿನಿಂದ ಕೆರಳಿ ಅವಳನ್ನು ಹೊಡೆಯಹತ್ತಿದನು. ಬ್ರಾಹ್ಮಳಳಾದ ಅವಳು ವೇದವಿದ್ಯೆಯನ್ನರಿಯದ ಒಬ್ಬ ಶೂದ್ರನನ್ನು ತನ್ನ ಗುರುವನ್ನಾಗಿ ಮಾಡಿಕೊಳ್ಳುವಳೆಂದು ಅವನು ಹೆದರಿ ಕಂಗಾಲಾದನು. ಆದರೆ ಇನ್ನೊಬ್ಬ ಬ್ರಾಹ್ಮಣನು ಮನವೊಲಿಸಲಾಗಿ ಅವನು ತುಕಾರಾಮರನ್ನು ಕಾಣಲೆಂದು ಬಹಿಣಾಬಾಯಿಯೊಡನೆ ದೇಹೂಕ್ಕೆ ಹೊರಟನು. ಅಲ್ಲಿ ಅವರಿಬ್ಬರೂ ತುಕಾರಾಮರನ್ನು ಕಂಡು ಅವರ ಕೀರ್ತನೆಗಳನ್ನು ಆಲಿಸಿದರು. ದೇಹೂ ಮತ್ತು ತುಕಾರಾಮರನ್ನು ಕುರಿತಾದ, ಬಹಿಣಾಬಾಯಿಯ ಸ್ಪಷ್ಟವಾದ ಕಥನವೆಂದರೆ ಒಂದು ಕಾವ್ಯಾತ್ಮಕ ದಿನಚರಿಯೇ ಸರಿ. ಅದು ಅಹ್ವಾನಿಸುವ ವಿವರಗಳಿಂದ ಕೂಡಿದ ದೄಶ್ಯಗಳನ್ನು ಪುನರ್ಮಿಸುತ್ತದೆ. ತುಕಾರಾಮರ ಸಮಕಾಲೀನ ಕಣ್ಣುಸಾಕ್ಷಿಯ ಇದೊಂದೇ ಕಥನವು ನಮಗೆ ದೊರಕುತ್ತದೆ. ಜಸ್ಟಿನ್ ಈ. ಆಬೊಟ್ ಅವರು ಬಹಿಣಾಬಾಯಿಯ ಆತ್ಮಚರಿತ್ರೆ ಮತ್ತು ಪದ್ಯಗಳನ್ನು ಇಂಗ್ಲಿಷ್ ಗದ್ಯದಲ್ಲಿ ಅನುವಾದಿಸಿದ್ದು ಅವು ಆನ್ನೆ ಫೆಲ್ಧಾಸ್ ಅವರ ಗ್ರಾಹ್ಯವಾದ ಮುನ್ನುಡಿಯೊಂದಿಗೆ ಇತ್ತೀಚೆಗಷ್ಟೆ ಪ್ರಕಟವಾಗಿವೆ.

 

                                            ೧

 

    ಮುಂಬಾಜಿ ಗೋಸಾವಿ ತುಂಬ ದ್ವೇಷಿಸುವನು || “ ಇಲ್ಲಿಂದ ತೊಲಗಿ” ಎಂದೆನ್ನುವನು ||೧||

    ಕೇಳಿ ಮನಕೆ ಬಲು ನೋವಾಗುವುದು || ಭಜನೆಯಲೇಕೆ ಈ ವಿಘ್ಹ್ನ ಎನ್ನಿಸುವುದು||೨||

    ಯಾರಿಗೆ ಏನೆನ್ನದೆ ಯಾರಿಂದ ಏನನ್ನು ಕೇಳದೆಯೂ || ಈ ದ್ವೇಷವೇಕೆ ಎನ್ನಿಸುವುದು ||೩||

    ಮನದಲ್ಲಿ ಚಿಂತಿಸುತ ದೇವನನು ನೆನೆದೆ || ಈ ಮಾತಿಗೆ ನೀನೇ ಸಾಕ್ಷಿ ಪಂಡುರಂಗ ||೪||

    ನೀ ಬಲ್ಲೆ ಎನ್ನಂತರಂಗವನು || ಎನ್ನ ಚಿತ್ತದಿ ದ್ವೇಷಕೆಡೆಯಿಲ್ಲ ಎಂಬುದನು ||೫||

    ವಿಘ್ನವ ತಂದವ ನೀನು ಪರಿಹರಿಸಿದನು || ತುಕಾರಾಮನ ತಲೆಮೇಲಿರುವೆ ನೀನು ||೬||

    ಭಕ್ತನ ಅಂತರಂಗವ ಪರೀಕ್ಷಿಸುವೆ || ನಿಷ್ಠೆಯನು ಬಗೆ ಬಗೆಯಿಂದ ಗಮನಿಸುವೆ ||೭||

    ದೇವನೆ ಹಲವು ಸಂಚಿತ ಕರ್ಮಗಳು || ಅವಕೆ ತಕ್ಕಂತೆ ಸುಖದುಃಖ ಬಹಿಣೆಯೆನ್ನುವಳು ||೮||

 

                                             ೨

 

    ಕೊಲ್ಲಾಪುರದ ಆಕಳ ಕಥೆಯ ಹೇಳುವೆನು || ಅದು ಚೆನ್ನಾಗಿ ಹಾಲು ಕೊಡುತಿತ್ತು ||೧||

    ಮುಂಬಾಜಿ ಆಕಳನು ಕೊಟ್ಟಿಗೆಯಲಿ ಕಟ್ಟಿಟ್ಟನು || ಅದನು ದೊಣ್ಣೆಯಿಂದ ಹೊಡೆಯುತ್ತಿದ್ದನು ||೨||

    ತುಕೋಬ ಹುಡುಕಿಯೂ ಆಕಳು ಕಾಣದಾಗಿತ್ತು || ಅವನಿಗೆ ಬಲು ಕೆಡಕೆನಿಸಿತು ||೩||

    ನಡೆದುದನು ಕಂಡು ನಿನಗೂ ಆತಂಕವಾಗಿತ್ತು || ಮೂರಿರುಳು ಆಕಳನು ಗೂಟಕ್ಕೆ ಕಟ್ಟಲಾಗಿತ್ತು ||೪||

    ಹುಲ್ಲು ನೀರಿಲ್ಲದೆ ಹಲುಬುತಿತ್ತು || ಬಿಡಿಸಿಕೊಂಡು ಓಡಲು ಬಾರದಂತಾಗಿತ್ತು ||೫||

    ನಿದ್ರೆ ತಿಳಿದೆದ್ದ ತುಕೋಬನ ಬೆನ್ನು || ಊದಿಕೊಂಡಿತ್ತು ಬಾವು ಇಳಿಯದಾಗಿತ್ತು ||೬||

    ಅವನ ಮೈಮೇಲೆಲ್ಲ ಬಾಸುಂಡೆಗಳು || ಪರಿಪರಿಯಾಗಿ ನೆನೆಸಿಕೊಂಡನು ||೭||

    ಅವನನ್ನು ಕಂಡು ಜನ ಮರುಗಿದರು || ತಾ ಕಂಡ ಕನಸನು ಹೇಳಿದನವರಿಗೆ ||೮||

    ಆಕಳನು ಕಾಣದೆ ಕೊರಗುತಿದ್ದನು || “ಧಾವಿಸಿ ಬಾ ಮಾಧವನೆ, ಬಿಡಿಸದದನು ||೯||

    ಒಳಗೆಲ್ಲಿ ಕಟ್ಟಿರುವರೊ ಅರಿಯೆನು || ಧಾವಿಸು ನಾರಾಯಣ ಕಾಪಾಡದನು ||೧೦||

    ಆಗ ಮುಂಬಾಜಿಯ ಮನೆಗೆ ಬೆಂಕಿ ಹತ್ತಿತು || ಒಮ್ಮಿಂದೊಮ್ಮಲೆ ಮನೆ ಉರಿಯತೊಡಗಿತು ||೧೧||

    ಜನ ಓಡಿ ಬಂದು ಅದನು ನಂದಿಸಿದರು || ಆಕಳು ಹಂಬಾ ಎಂದು ಕೂಗುತಿತ್ತು ||೧೨||

    ಮೂರು ದಿನ ಅದನು ಹುಡುಕುತಿದ್ದರು || ಆ ಚಾಂಡಾಲ ಅದನ್ನು ಕಟ್ಟಿಹಾಕಿದ್ದನ್ನು ಕಂಡರು ||೧೩||

    ಅವರು ಆಕಳನು ಬಿಡಿಸಿ ಹೊರತಂದರು || ಅದರ ಬೆನ್ನಿನ ಏಟುಗಳನು ಕಂಡರು ||೧೪||

    ಅವಳು ಗಂಡನನು ಹೊರಕ್ಕೆ ಕರೆದಳು || “ಅಯ್ಯ ಬ್ರಾಹ್ಮಣ ಆಕಳನು ಕಾಪಾಡು ” ಎಂದಳು ||೧೫||

    ತುಕೋಬ ಓಡಿಬಂದು ಪ್ರದಕ್ಷಿಣೆ ಹಾಕಿದನು || “ನಿನ್ನ ಧನ್ಯ ಗುಣಗಳಿಗೆ ವಂದಿಸುವೆನು ||೧೬||

    ನನಗೊಂದು ಕನಸು ತೋರಿಸಿದೆ ನೀನು || ಏನೂ ಅರಿಯದೆ ನಿನ್ನನು ಮೊರೆಹೊಕ್ಕೆ ನಾನು ||೧೭||

    ನಿನ್ನ ನಮ್ಮ ಆತ್ಮ ಒಂದು ಎಂಬುದರ || ಖಚಿತ ಸಾಕ್ಷಿಯನು ನೀಡಿದೆ ನೀನು ” ||೧೮||

    ಎಂದು ತುಕೋಬ ನುಡಿದನು || ದುಃಖಿತಳಾದೆ ಕಂಡು ಅವನನು || ೧೯||

    ಅವನಂತೆಯೆ ನಾನೂ ದುಃಖಿತಳಾದೆನು || ಎಂಬುದಕೆ ಒಳ ವಿಟ್ಠಲನೆ ಸಾಕ್ಷಿ ||೨೦||

    ಜನರು ತುಕೋಬನ ಬೆನ್ನು ನೋಡಿದರು || ಆಕಳಿನ ಬೆನ್ನು ಕಂಡು ನೊಂದುಕೊಂಡರು ||೨೧||

    ನಡೆದುದನು ಹೇಳಿದೆನು ಎಂದಳು ಬಹೇಣಿ || ಹರಿ ಬಲ್ಲನು ಆಕಳಿನ ನಿರ್ವಾಣ ||೨೨||

 

                                               ೩

 

    ರಾಮೇಶ್ವರಭಟ್ಟರು ಈ ವೃತ್ತಾಂತವನು ಆಲಿಸಿದರು || ಕೂಡಲೆ ಅಲ್ಲಿಗೆ ಧಾವಿಸಿ ಬಂದರು ||೧||

    ತುಕೋಬನ ದರ್ಶನವ ಪಡೆದರು || ಆಕಳನು ಕಣ್ಣುತುಂಬ ವೀಕ್ಷಿಸಿದರು ||೨||

    ಎರಡೂ ಬೆನ್ನುಗಳು ಒಂದೇ ಬಗೆ ಎಂದರು || ಕಣ್ಣೀರಿಕ್ಕುತ ಹೀಗೆಂದು ನುಡಿದರು ||೩||

    ಯಾರು ತುಕೋಬನನು ಪೂರ್ತಿ ಬಣ್ಣಿಸಬಲ್ಲರು || ಈತ ಕಲಿಯುಗದ ಪ್ರಹ್ಲಾದನೆಂದರು ||೪||

    ಹೊಗಳಿಕೆಯನು ಸಾಕ್ಷಿಭಾವದಿ ಕಾಣುವನು || ಸ್ವಸುಖದಲಿ ರಮಮಾಣನಾಗುವನು ||೫||

    “ತುಕೋಬನೆಂದರೆ ಪಾಂಡುರಂಗನೇ ಸರಿ ” || ಎಂದು ಜನರೆನ್ನುವರು ಎಂದಳು ಬಹಿಣೆ ||೬||

 

                                             [] [] []