ಮಹಾತ್ಮಾ ಗಾಂಧಿಯವರು ಪುಣೆಯ ಕೇಂದ್ರ ಸೆರೆಮನೆಯಲ್ಲಿದ್ದ ಕಾಲಕ್ಕೆ ದಿ.೧೫-೧೦-೧೯೩೦ರಿಂದ ೨೮-೧೦-೧೯೩೦ರ ಕಾಲಾವಧಿಯಲ್ಲಿ ಕೈಕೊಂಡ ಸಂತ ತುಕಾರಾಮರ
ಅಭಂಗಗಳ ಅಂಗ್ಲಾನುವಾದಗಳ ಕನ್ನಡಾನುವಾದ:-
೧. ಜೇ ಕಾ ರಂಜಲೇ ಗಾಂಜಲೇ |
ತ್ಯಾಸಿ ಮ್ಹಣೇ ಜೋ ಆಪುಲೇ
||೧||
ತೋ ಚಿ ಸಾಧು ಓಳಖಾವಾ
|
ದೇವ ತೇಥೇ
ಚಿ ಜಾಣಾವಾ ||ಧೄ||
ಮೄದು ಸಬಾಹ್ಯ ನವನೀತ |
ತೈಸೇ ಸಜ್ಜನಾಚೇ ಚಿತ್ತ
||೨||
ಜ್ಯಾಸಿ ಅಪಂಗಿತಾ ನಾಹೀ
|
ತ್ಯಾಸಿ ಧರೀ
ಜೋ ಹೄದಯೀ ||೩||
ದಯಾ ಕರಣೇ ಜೇ ಪುತ್ರಾಸೀ
|
ತೇ ಚಿ ದಾಸಾ ಆಣಿ ದಾಸೀ ||೪||
ತುಕಾ ಮ್ಹಣೇ ಸಾಂಗೂ ಕಿತೀ |
ತೋ ಚಿ ಭಗವಂತಾಚೀ ಮೂರ್ತೀ
||೫||
ಬವಣೆಯಲ್ಲಿರುವವರನ್ನು ತನ್ನವರೆಂದು ಬಗೆಯುವವನೇ ನಿಜವಾದ ಮನುಷ್ಯನೆಂದು ತಿಳಿ. ಅಂಥವನ ಹೄದಯದಲ್ಲಿ ದೇವರು ನೆಲೆಸುವನೆಂದು ಅರಿತುಕೋ. ಅವನ ಹೄದಯವು ಪೂರ್ತಿಯಾಗಿ ಸಜ್ಜನಿಕೆಯಿಂದ ತುಂಬಿ ತುಳುಕುತ್ತದೆ. ಅವನು ತ್ಯಕ್ತರನ್ನಷ್ಟೇ ತನ್ನವರೆಂದು ಬರಮಾಡಿಕೊಳ್ಳುತ್ತಾನೆ. ಅವನು ತನ್ನ ಮಕ್ಕಳಿಗೆ ತೋರುವ ಮಮತೆಯನ್ನೇ ತನ್ನ ಗಂಡಾಳು ಮತ್ತು ಹೆಣ್ಣಾಳುಗಳ ಮೇಲೂ ಮಳೆಗರೆಯುತ್ತಾನೆ. ತುಕಾರಾಮನು ಹೀಗೆನ್ನುವನು: ಅವನನ್ನು ಇನ್ನಷ್ಟು ಹೊಗಳುವ ಅಗತ್ಯವಾದರೂ ಏನಿದೆ? ಅವನೇ ಸಾಕ್ಷಾತ್ ದೈವೀ ಅವತಾರನು.
೧೫-೧೦-೧೯೩೦
೨. ಪಾಪಾಚೀ ವಾಸನಾ ನಕೋ ದಾವೂ ಡೋಳಾ |
ತ್ಯಾಹುನಿ ಅಂಧಳಾ ಬರಾಚ ಮೀ ||೧||
ನಿಂದೇಚೇ ಶ್ರವಣ ನಕೋ ಮಾಝೇ ಕಾನೀ |
ಬಧಿರ ಕರೋನೀ ಠೇವೀ ದೇವಾ ||ಧೄ||
ಅಪವಿತ್ರ ವಾಣೀ ನಕೋ ಮಾಝ್ಯಾ ಮುಖಾ |
ತ್ಯಾಜಹುನಿ ಮುಕಾ ಬರಾಚ ಮೀ ||೨||
ನಕೋ ಮಜ ಕಧೀ ಪರಸ್ತ್ರೀಸಂಗತಿ
|
ಜನಾತುನ ಮಾತೀ ಉಠತಾ ಭಲೀ ||೩||
ತುಕಾ ಮ್ಹಣೇ ಮಜ ಅವಘ್ಯಾಚಾ ಕಂಟಾಳಾ |
ತೂ ಏಕ ಗೋಪಾಳಾ ಆವಡಸೀ ||೪||
ಓ ದೇವನೆ, ಪಾಪದ ಬಯಕೆಗೆ ಸಾಕ್ಷಿಯಾಗಲು ಬಿಡಬೇಡ ನನ್ನನ್ನು, ಅದಕ್ಕಿಂತ ಕುರುಡಾಗಿಸು ನನ್ನನ್ನು; ಯಾರ ಬಗೆಗಿನ ಕೇಡನ್ನೂ ಕೇಳಲು ಬಿಡಬೇಡ ನನ್ನನ್ನು, ಅದಕ್ಕಿಂತ ಕಿವುಡಾಗಿಸು ನನ್ನನ್ನು; ನನ್ನ ತುಟಿಗಳಿಂದ ಪಾಪದ ಒಂದೂ ಶಬ್ದವನ್ನು ಹೊರಬರಲು ಬಿಡಬೇಡ, ಅದಕ್ಕಿಂತ ಮೂಕನಾಗಿಸು ನನ್ನನ್ನು; ಪರಸತಿಗಾಗಿ ಆಸೆ ಪಡಲು ಬಿಡಬೇಡ ನನ್ನನ್ನು, ಅದಕ್ಕಿಂತ
ಈ ಭೂಮಿಯಿಂದ ಕಣ್ಮರೆಯಾಗುವೆನು ನಾನು. ತುಕಾರಾಮನು ಹೀಗೆನ್ನುವನು: ಭೌತಿಕವಾದ ಈ ಪ್ರತಿಯೊಂದು ಸಂಗತಿಗೂ ಬೇಸತ್ತಿರುವೆನು, ನಿನ್ನನಷ್ಟೇ ಇಷ್ಟಪಡುವೆನು, ಅಯ್ಯ ಗೋಪಾಲನೇ.
೧೬-೧೦-೧೯೩೦
೩. ಪವಿತ್ರ ತೇ ಕುಳ ಪಾವನ ತೋ ದೇಶ
|
ಜೇಥೇ ಹರಿಚೇ ದಾಸ ಘೇತೀ ಜನ್ಮ ||೧||
ಕರ್ಮಧರ್ಮ ತ್ಯಾಚೇ ಜಾಲಾ ನಾರಾಯಣ |
ತ್ಯಾಚೇನೀ ಪಾವನ ತಿನ್ಹೀ ಲೋಕ ||ಧೄ||
ವರ್ಣ಼ಅಭಿಮಾನೇ ಕೋಣ ಜಾಲೇ ಪಾವನ
|
ಐಸೇ ದ್ಯಾ ಸಾಂಗುನ ಮಜಪಾಶೀ ||೨||
ಅಂತ್ಯಜಾದಿ ಯೋನಿ ತರಲ್ಯಾ ಹರಿಭಜನೇ |
ತಯಾಚೀ ಪುರಾಣೇ ಭಾಟ ಜಾಲೀ ||೩||
ವೈಶ್ಯ ತುಳಾಧಾರ ಗೋರಾ ತೋ ಕುಂಭಾರ |
ಧಾಗಾ ಹಾ ಚಾಂಭಾರ ರೋಹಿದಾಸ ||೪||
ಕಬೀರ ಮೋಮೀನ ಲತಿಬ ಮುಸಲಮಾನ |
ಸೇನಾ ನ್ಹಾವೀ ಜಾಣ ವಿಷ್ಣುದಾಸ ||೫||
ಕಾಣೋಪಾತ್ರ ಖೋದು ಪಿಂಜಾರೀ ತೋ ದಾದು |
ಭಜನೀ ಅಭೇದೂ ಹರಿಚೇ ಪಾಯೀ ||೬||
ಚೋಖಾಮೇಳಾ ಬಂಕಾ ಜಾತೀಚಾ ಮಾಹಾರ
|
ತ್ಯಾಸೀ ಸರ್ವೇಶ್ವರ ಐಕ್ಯ ಕರೀ ||೭||
ನಾಮಯಾಚೀ ಜನೀ ಕೋಣ ತಿಚಾ ಭಾವ |
ಜೇವೀ ಪಂಢರೀರಾವ ತಿಯೇಸವೇ ||೮||
ಮೈರಾಳಾ ಜನಕ ಕೋಣ ಕುಳ ತ್ಯಾಚೇ |
ಮಹಿಮಾನ ತಯಾಚೇ ಕಾಯ ಸಾಂಗೋ ||೯||
ಯಾತಾಯಾತೀಧರ್ಮ ನಾಹೀ ವಿಷ್ಣುದಾಸಾ
|
ನಿರ್ಣಯ ಹಾ ಐಸಾ ವೇದಶಾಸ್ತ್ರೀ ||೧೦||
ತುಕಾ ಮ್ಹಣೇ ತುಮ್ಹೀ ವಿಚಾರಾವೇ ಗ್ರಂಥ |
ತಾರಿಲೇ ಪತಿತ ನೇಣೋ ಕಿತೀ ||೧೧||
ದೇವರ ದಾಸರು ಜನ್ಮ ತಳೆಯುವಂತಹ ಕುಟುಂಬ ಮತ್ತು ದೇಶಗಳು ಪವಿತ್ರವಾದವುಗಳು. ಅವರ ಕರ್ಮ, ಧರ್ಮಗಳು ದೇವರೆನ್ನಿಸುತ್ತವೆ. ಅವರ ಮೂಲಕ ಮೂಲೋಕಗಳು ಪಾವನಗೊಳ್ಳುವವು. ತಮ್ಮ ಹುಟ್ಟಿನ ಹೆಮ್ಮೆಯಿಂದ ಯಾರು ಪಾವನರಾಗುವರು? ಹೇಳೆನಗೆ. ದೇವರ ಭಕ್ತಿಯ ಮೂಲಕ ಅಂತ್ಯಜರು ಕೂಡ ಮುಕ್ತಿಯನ್ನು ಪಡೆದಿದ್ದಾರೆಂದು ಪುರಾಣಗಳು ಭಟರಂತೆ ಪ್ರಮಾಣಗಳನ್ನು ನೀಡಿವೆ. ತಕ್ಕಡಿ ತೂಗುವ ವೈಶ್ಯ, ಗೋರಾ ಎಂಬ ಕುಂಬಾರ, ಚಮ್ಮಾರ ರೋಹಿದಾಸ, ಮೊಮಿನ್ನನಾದ ಕಬೀರ, ಮುಸಲ್ಮಾನನಾದ ಲತಿಫ್, ಕ್ಷೌರಿಕನಾದ ಸೇನಾ ಮತ್ತು ವಿಷ್ಣುದಾಸಳಾದ ಕಾನ್ಹೋಪಾತ್ರಾ, ದಾದೂ ಪಿಂಜಾರ, ಇವರೆಲ್ಲರೂ ಬಜನೆಯನ್ನು ಹಾಡುವವರ ಜೊತೆಗೆ ದೇವರ ಪಾದಗಳಲ್ಲಿ ಒಂದಾಗುತ್ತಾರೆ. ಹುಟ್ಟಿನಿಂದ ಹೊಲೆಯರಾದ ಚೋಖಾಮೇಳಾ ಮತ್ತು ಬಂಕಾ ಇವರು ದೇವರೊಡನೆ ಒಂದಾಗುತ್ತಾರೆ. ಅಬ್ಬ! ನಾಮದೇವನ ಕೆಲಸದ ಹೆಣ್ಣಾಳಾದ ಜನಿಯ ಭಕ್ತಿ ಅದೆಷ್ಟು ಶ್ರೇಷ್ಠವಾದುದೆನ್ನಲಿ! ಪಂಢರಿನಾಥ (ಪಾಂಡುರಂಗನು) ಅವಳೊಡನೆ ಉಣ್ಣುತ್ತಿದ್ದನು. ಮೈರಾಳ ಜನಕನ ಕುಲ ಯಾವುದೋ, ಯಾರು ಬಲ್ಲರು. ಆದರೆ ಅವನ ಹಿರಿಮೆಯನ್ನು ಏನೆಂದು ಹೇಳಲಿ? ದೇವರ ದಾಸರಿಗೆ ಜಾತಿಯಿಲ್ಲ, ವರ್ಣವಿಲ್ಲ, ಎಂದು ವೇದರ್ಷಿಗಳು ಹೇಳುತ್ತಾರೆ. ತುಕಾರಾಮನು ಹೀಗೆನ್ನುವನು
: ಪತಿತರ ಸಂಖ್ಯೆಯನ್ನು
ಎಣಿಸಲಾರೆ.
೪. ಜೇಥೇ ಜಾತೋ ತೇಥೇ ತೂ ಮಾಝಾ ಸಾಂಗಾತೀ
|
ಚಾಲವಿಸೀ ಹಾತೀ ಧರೂನಿಯಾ ||೧||
ಚಾಲೋ ವಾಟೇ ಆಮ್ಹೀ ತುಝಾ ಚಿ ಆಧಾರ
|
ಚಾಲವಿಸೀ ಭಾರ ಸವೇ ಮಾಝಾ ||ಧೄ||
ಬೋಲೋ ಜಾತಾ ಬರಳ ಕರಿಸೀ ತೇ ನೀಟ |
ನೇಲೀ ಲಾಜ ಧೀಟ ಕೇಲೋ ದೇವಾ ||೨||
ಅವಘೇ ಜನ ಮಜ ಜಾಲೇ ಲೋಕಪಾಳ |
ಸೋಇರೇ ಸಕಳ ಪ್ರಾಣಸಖೇ ||೩||
ತುಕಾ ಮ್ಹಣೇ ಆತಾ ಖೇಳತೋ ಕೌತುಕೇ |
ಜಾಲೇ ತುಝೇ ಸುಖ ಅಂತರ್ಬಾಹೀ ||೪||
ನಾನು ಎಲ್ಲೆಲ್ಲಿಗೆ ಹೋದರೂ ನೀನು ನನ್ನ ಜೊತೆಗಾರನು. ನೀನು ನನ್ನನ್ನು ಕೈ ಹಿಡಿದು ನಡೆಸುವೆ. ನಾನು ನಿನ್ನನ್ನು ಪೂರ್ತಿಯಾಗಿ ಅವಲಂಬಿಸಿಯೇ ಒಂಟಿಯಾಗಿ ಹೆಜ್ಜೆಯಿಕ್ಕುವೆನು. ಅಲ್ಲದೆ, ನೀನು ನನ್ನ ಹೊರೆಯನ್ನೂ ಹೊರುವೆ. ನಾನು ಮೂರ್ಖನಂತೆ ಮಾತಾಡಿದರೂ ನೀನು ಅದನ್ನು ಸರಿಪಡಿಸುವೆ. ದೇವನೇ, ನೀನು ನನ್ನ ನಾಚುಬುರುಕುತನವನ್ನು ದೂರಗೊಳಿಸಿ ನನ್ನಲ್ಲಿ ಆತ್ಮವಿಸ್ವಾಸವನ್ನು ಮೂಡಿಸಿರುವೆ. ಜನರೆಲ್ಲರೂ ನನ್ನನ್ನು ಕಾಪಾಡುವವರೂ, ನನ್ನ ಬಳಗದವರೂ, ನಿಕಟ ಸ್ನೇಹಿತರೂ ಆಗಿರುವರು. ತುಕಾರಾಮನು ಹೀಗೆನ್ನುವನು
: ನಾನೀಗ ಯಾವುದೇ ಬಗೆಯ ಚಿಂತೆಯಿಲ್ಲದೆ ಹಾಯಾಗಿ ನಡೆದುಕೊಳ್ಳಬಲ್ಲೆ. ನಾನು ಒಳಹೊರಗೆಲ್ಲ ದೈವಿಕ ಶಾಂತಿಯನ್ನು ಪಡೆದಿದ್ದೇನೆ.
೨೨-೧೦-೧೯೩೦
೫. ನ ಕಳತಾ ಕಾಯ ಕರಾವಾ ಉಪಾಯ
|
ಜೇಣೇ ರಾಹೇ ಭಾವ ತುಝ್ಯಾ ಪಾಯೀ ||೧||
ಯೇಊನಿಯಾ ವಾಸ ಕರಿಸೀ ಹೄದಯೀ
|
ಐಸೇ ಘಡೇ ಕಈ ಕಾಸಯಾನೇ ||ಧೄ||
ಸಾಚ ಭಾವೇ ತುಝೇ ಚಿಂತನ ಮಾನಸೀ |
ರಾಹೇ ಹೇ ಕರಿಸೀ ಕೈ ಗಾ ದೇವಾ ||೨||
ಲಟಿಕೇ ಹೇ ಮಾಝೇ ಕರೂನಿಯಾ ದುರೀ |
ಸಾಚ ತೂ ಅಂತರೀ ಯೇಉನಿ ರಾಹೇ ||೩||
ತುಕಾ ಮ್ಹಣೇ ಮಜ ರಾಖಾವೇ ಪತಿತಾ |
ಆಪುಲಿಯಾ ಸತ್ತಾ ಪಾಂಡುರಂಗಾ ||೪||
ನಿನ್ನ ಪವಿತ್ರವಾದ ಪಾದಗಳಲ್ಲಿ ಭಕ್ತಿಯನ್ನು ಹೇಗಿರಿಸಬೇಕೆಂಬುದನ್ನು ಅರಿಯದವನು ಏನು ಮಾಡಬೇಕು? ನೀನು ಬಂದು ನನ್ನ ಹೄದಯದಲ್ಲಿ ನೆಲೆಸಬಹುದಾದ ಸಂಗತಿ ಯಾವಾಗ ನಡೆದೀತು? ಅಯ್ಯ ದೇವನೆ, ನಾನು ನಿಜವಾದ ಭಾವನೆಯಿಂದ ನಿನ್ನ ಧ್ಯಾನವನ್ನು ಮಾಡುವಂತೆ ನೀನು
ಸಂಕಲ್ಪವನ್ನು ಎಂದಿಗೆ ಕೈಕೊಳ್ಳಲಿರುವೆ? ನನ್ನ ಸಟೆಯನ್ನು ಕಿತ್ತೆಸೆದು, ಎಲೈ ದಿಟನೇ, ಬಂದು ನೆಲೆಸು ನನ್ನ ಹೄದಯದಲ್ಲಿ
ನೀನು. ತುಕಾರಾಮನು ಹೀಗೆನ್ನುವನು
: ಅಯ್ಯ ಪಾಂಡುರಂಗನೇ, ನಿನ್ನ ಸಾಮರ್ಥ್ಯದಿಂದ ನನ್ನಂತಹ ಪಾಪಿಯನ್ನು ತಪ್ಪದೆ ರಕ್ಷಿಸು.
೬. ಮುಕ್ತಿಪಾಂಗ ನಾಹೀ ವಿಷ್ಣುಚಿಯಾ ದಾಸಾ |
ಸಂಸಾರ ತೋ ಕೈಸಾ ನ ದೇಖತೀ ||೧||
ಬೈಸಲಾ ಗೋವಿಂದ ಜಡೋನಿಯಾ ಚಿತ್ತೀ |
ಆದಿ ತೇ ಚಿ ಅಂತೀ ಅವಸಾನ ||ಧೄ||
ಭೋಗ ನಾರಾಯಣಾ ದೇಊನಿ ನಿರಾಳೀ
|
ಓವಿಯಾ ಮಂಗಳೀ ತೋ ಚಿ ಗಾತೀ ||೨||
ಬಳ ಬುದ್ಧಿ ತ್ಯಾಂಚೀ ಉಪಕಾರಾಸಾಟೀ
|
ಅಮೄತ ತೇ ಪೋಟೀ ಸಾಂಟವಲೇ ||೩||
ದಯಾವೇತ ತರೀ ದೇವಾ ಚ ಸಾರಿಖೀ |
ಆಪುಲೀ ಪಾರಖೀ ನೋಳಖತೀ ||೪||
ತುಕಾ ಮ್ಹಣೇ ತ್ಯಾಂಚಾ ಜೀವ ತೋ ಚಿ ದೇವ |
ವೈಕುಂಠ ತೋ ಠಾವ ವಸತೀ ತೋ ||೫||
ವಿಷ್ಣುದಾಸರಿಗೆ ಮುಕ್ತಿಯ ಆಸೆಯೂ ಇರದು.ಅವರು ಜನ್ಮ-ಮರಣಗಳ ಚಕ್ರ ಹೇಗಿರುತ್ತದೆಂಬುದನ್ನು ಅರಿಯಲೂ ಬಯಸರು. ಗೋವಿಂದನು ಅವರ ಹೄದಯಗಳಲ್ಲಿ ಭದ್ರವಾಗಿ ನೆಲೆಯೂರಿ ಕುಳಿತುಕೊಳ್ಳುತ್ತಾನೆ. ಅವರಿಗೆ ಆದಿ ಮತ್ತು ಅಂತ್ಯಗಳು ಒಂದೇ ಆಗಿರುತ್ತವೆ. ಅವರು ಸುಖ-ದುಃಖಗಳನ್ನು ದೇವರಿಗೆ ಸಮರ್ಪಿಸಿಬಿಡುತ್ತಾರೆ. ಹೀಗಾಗಿ ಅವುಗಳಿಂದ ನಿರ್ಲಿಪ್ತರಾಗಿ ಉಳಿಯುತ್ತಾರೆ. ಪವಿತ್ರವಾದ ಹಾಡುಗಳು ಅವರನ್ನು ಕುರಿತೇ ಹಾಡುತ್ತವೆ. ಅವರ ಬುದ್ಧಿ ಮತ್ತು ಸಾಮರ್ಥ್ಯಗಳು ಪರೋಪಕಾರಕ್ಕಾಗಿಯೇ ಸಮರ್ಪಿತ. ಅವರ ಹೄದಯಗಳಲ್ಲಿ ಸಜ್ಜನಿಕೆ ತುಂಬಿರುತ್ತದೆ. ಅವರು ದೇವರಂತಹ ದಯೆಯಿಂದ ತುಂಬಿದವರು. ಅವರು ತಮ್ಮ ಮತ್ತು ಪರರೆಂಬ ಭೇದವನ್ನು ಅರಿತವರಲ್ಲ. ತುಕಾರಾಮನು ಹೀಗೆನ್ನುವನು
: ಅವರು ದೇವರಿದ್ದಂತೆಯೇ. ಅವರಿರುವಲ್ಲಿಯೇ ವೈಕುಂಠವಿದೆ.
೨೩-೧೦-೧೯೩೦
೭. ಕಾಯ ವಾಣೂ ಆತಾ ನ ಪುರೇ ಹೇ ವಾಣೀ |
ಮಸ್ತಕ ಚರಣೀ ಠೇವೀತಸೇ ||೧||
ಥೋರೀವ ಸಾಂಡಿಲೀ ಆಪುಲೀ ಪರಿಸೇ |
ನೇಣೇ ಸಿವೋ ಕೈಸೇ ಲೋಖಂಡಾಸೀ ||ಧೄ||
ಜಗಾಚ್ಯಾ ಕಲ್ಯಾಣಾ ಸಂತಾಂಚ್ಯಾ ವಿಭೂತಿ |
ದೇಹ ಕಷ್ಟವಿತೀ ಉಪಕಾರೇ ||೨||
ಭೂತಾಂಚೀ ದಯಾ ಹೇ ಭಾಂಡವಲ ಸಂತಾ |
ಆಪುಲೀ ಮಮತಾ ನಾಹೀ ದೇಹೀ ||೩||
ತುಕಾ ಮ್ಹಣೇ ಸುಖ ಪರಾವಿಯಾ ಸುಖೇ |
ಅಮೄತ ಹೇ ಮುಖೇ ಸ್ರವತಸೇ ||೪||
ಹೇಗಿನ್ನು ಬಣ್ಣಿಸಲಿ
(ಒಳ್ಳೆಯದರ ಹೊಗಳಿಕೆಯನು); ನನ್ನ ಮಾತು (ಇದಕ್ಕಾಗಿ) ಸಾಲದು. ಆದುದರಿಂದ ನನ ತಲೆಯನ್ನು ನಿನ್ನ ಪಾದಗಳ ಮೇಲೆ ಇರಿಸುವೆನು. ಅಯಸ್ಕಾಂತವು ತನ್ನ ದೊಡ್ಡಿಸ್ತಿಕೆಯನ್ನು ಬಿಟ್ಟುಬಿಡುತ್ತದೆ. ಅಲ್ಲದೆ ತಾನು ಕಬ್ಬಿಣವನ್ನು ಸ್ಪರ್ಶಿಸಲಾರೆ, ಎಂಬುದನ್ನು ಅರಿಯದು. ಹೀಗಿದ್ದರೂ ಒಳ್ಳೆಯ ಜನರ ಸಾಮರ್ಥ್ಯಗಳು ಜಗತ್ತಿನ ಕಲ್ಯಾಣಕ್ಕಾಗಿ ಇರುತ್ತವೆ. ಅವರು ಪರರ ಸೇವೆಗಾಗಿ ತಮ್ಮ ದೇಹಗಳನ್ನು ಸವೆಸುತ್ತಾರೆ. ಎಲ್ಲರ ಬಗೆಗಿನ ದಯೆಯು ಒಳ್ಳೆಯವರ ಬಂಡವಾಳ. ಅವರಿಗೆ ತಮ್ಮ ದೇಹಗಳ ಬಗೆಗೆ ಮಮತೆ ಇರದು. ತುಕಾರಾಮನು ಹೀಗನ್ನುವನು
: ಬೇರೆಯವರ ಸುಖವೇ ಅವರ ಸುಖ; ಅವರ ತುಟಿಗಳಿಂದ ಅಮೄತವು ಸುರಿಯುತ್ತದೆ.
೮. ನಾಹೀ ಸಂತಪಣ ಮಿಳತೇ ಹೇ ಹಾಟೀ
|
ಹಿಂಡತಾ ಕಪಾಟೀ ರಾನೀ ವನೀ ||೧||
ನಯೇ ಮೋಲ ದೇತಾ ಧನಾಚಿಯಾ ರಾಶೀ |
ನಾಹೀ ತೇ ಆಕಾಶೀ ಪಾತಾಳೀ ತೇ ||೨||
ತುಕಾ ಮ್ಹಣೇ ಮಿಳೇ ಜಿವಾಚಿಯೇ ಸಾಟೀ |
ನಾಹೀ ತರೀ ಗೋಷ್ಟೀ ಬೋಲೋ ನಯೇ ||೩||
ಸಂತತ್ವವನ್ನು ಅಂಗಡಿಗಳಲ್ಲಿ ಕೊಂಡುಕೊಳ್ಳಲಾಗದು, ಇದು ಅಲೆಮಾರಿತನದಿಂದಲೂ ದೊರಕುವಂಥದಲ್ಲ, ಕಪಾಟುಗಳಲ್ಲೂ, ಮರುಭೂಮಿಗಳಲ್ಲೂ, ಕಾಡುಗಳಲ್ಲೂ ದೊರಕುವಂಥದಲ್ಲ. ರಾಶಿಗಟ್ಟಳೆಯ ಸಿರಿವಂತಿಕೆಯಿಂದಲೂ ಇದನ್ನು ಪಡೆಯಲಾಗದು. ಇದು ಆಕಾಶದಲ್ಲೂ, ಪಾತಾಳಗಳಲ್ಲೂ ಇರುವಂಥದಲ್ಲ. ತುಕಾರಾಮನು ಹೀಗೆನ್ನುವನು
: ಇದು ಜೀವದ ಚೌಕಾಶಿ. ಇದಕ್ಕಾಗಿ ನೀವು ನಿಮ್ಮ ಜೀವವನ್ನು ಕೋಡಲಾರಿರಾದರೆ ಸುಮ್ಮನಿರಿ.
೨೪-೧೦-೧೯೩೦
೯. ಭಕ್ತ ಐಸೇ ಜಾಣಾ ಜೇ ದೇಹೀ ಉದಾಸ |
ಗೇಲೇ ಅಶಾಪಾಶ ನಿವಾರುನೀ ||೧||
ವಿಷಯ ತೋ ತ್ಯಾಂಚಾ ಜಾಲಾ ನಾರಾಯಣ
|
ನಾವಡೇ ಧನ ಜನ ಮಾತಾ ಪಿತಾ ||ಧೄ||
ನಿರ್ವಾಣೀ ಗೋವಿಂದ ಅಸೇ ಮಾಗೇಪುಢೇ |
ಕಾಹೀ ಚ ಸಾಕಡೇ ಪಡೋ ನೇದೀ ||೨||
ತುಕಾ ಮ್ಹಣೇ ಸತ್ಯ ಕರ್ಮಾ ಹ್ವಾವೇ ಸಾಹೇ |
ಘಾತಲಿಯಾ ಭಯೇ ನರ್ಕಾ ಜಾಣೇ ||೩||
ತನ್ನ ದೇಹದ ಬಗೆಗೆ ಉದಾಸೀನ ತಳೆವವನೇ ಭಕ್ತನು. ಅವನು ಬಯಕೆಗಳನ್ನ್ನೆಲ್ಲ ಕೊಂದವನು, ಅವನ ಬಾಳಿನ ಒಂದೇ ಗುರಿಯೆಂದರೆ ನಾರಾಯಣ (ನನ್ನು ಕಂಡುಕೊಳ್ಳುವುದು). ಸಂಪತ್ತು, ಒಡನಾಟ ಅಥವಾ ಹೆತ್ತವರು ಕೂಡ ಅವನನ್ನು ವಿಚಲಿತನನ್ನಾಗಿ ಮಾಡಲಾರರು. ಸಂಕಟ ಕಾಲಕ್ಕೆ ಅವನಿಗೆ ಹಿಂದುಮುಂದೆಲ್ಲ ದೇವನೊಬ್ಬನೇ ಇರುವನು. ಯಾವ ತೊಂದರೆಯೂ ಅವನ ಉದ್ದೇಶವನ್ನು ದಾಟುವಲ್ಲಿ ಅವನನ್ನು ತಡೆಯಲಾರದು. ತುಕಾರಾಮನು ಹೀಗೆನ್ನುವನು
: ಸತ್ಯವು ಇಂಥ ಮನುಷ್ಯರಿಗೆ ಅವರ ಕರ್ಮಗಳಲ್ಲೆಲ್ಲ ದಾರಿ ತೋರುವುದು.
೧೦.
ವೇದ ಅನಂತ ಬೋಲಿಲಾ
|
ಅರ್ಥ ಇತಕಾ ಚಿ ಶೋಧಿಲಾ ||೧||
ವಿಠೋಬಾಸೀ ಶರಣ ಜಾವೇ |
ನಿಜನಿಷ್ಟ ನಾಮ ಗಾವೇ ||ಧೄ||
ಸಕಳ ಶಾಸ್ತ್ರಾಂಚಾ ವಿಚಾರ |
ಅಂತೀ ಇತಕಾ ಚಿ ನಿರ್ಧಾರ ||೨||
ಅಠರಾಪುರಾಣೀ ಸಿದ್ಧಾಂತ |
ತುಕಾ ಮ್ಹಣೇ ಹಾ ಚಿ ಹೇತ ||೩||
ಅನಂತವಾದ ವೇದಗಳ ತಿರುಳು ಹೀಗಿದೆ
: ದೇವರನ್ನು ಮೊರೆಹೋಗು. ಹೄದಯದಿಂದ ಅವನ ಹೆಸರನ್ನು ಜಪಿಸು. ಎಲ್ಲ ಶಾಸ್ತ್ರಗಳ ಚಿಂತನೆಯ ಫಲವೂ ಇದೇ ಆಗಿದೆ. ತುಕಾರಾಮನು ಹೀಗೆನ್ನುವನು
: ಹದಿನೆಂಟು ಪುರಾಣಗಳ ಹೊರೆ ಕೂಡ ಇದೇ ಬಗೆಯದಾಗಿದೆ.
೨೫-೧೦-೧೯೩೦
೧೧. ಆಣೀಕ ದುಸರೇ ಮಜ ನಾಹೀ ಆತಾ |
ನೇಮಿಲೇ ಯಾ ಚಿತ್ತಾಪಾಸುನಿಯಾ ||೧||
ಪಾಂಡುರಂಗ ಮನೀ ಪಾಂಡುರಂಗ ಧ್ಯಾನೀ |
ಜಾಗ್ರತೀ ಸ್ವಪ್ನೀ ಪಾಂಡುರಂಗ ||ಧೄ||
ಪಡಿಲೇ ವಳಣ ಇಂದ್ರಿಯಾ ಸಕಳಾ |
ಭಾವ ತೋ ನಿರಾಳಾ ನಾಹೀ ದುಜಾ ||೨||
ತುಕಾ ಮ್ಹಣೇ ನೇತ್ರೀ ಕೇಲೇ ಓಳಖಣ |
ಸಾಜಿರೇ ತೇ ಧ್ಯಾನ ವಿಟೇವರೀ ||೩||
ಇನ್ನು ನನಗಾಗಿ ಬೇರೇನೂ ಇಲ್ಲವೆಂದು ನನ್ನೀ ಹೄದಯವು ಖಂಡಿತವಾಗಿ ತೀರ್ಮಾನಿಸಿದೆ; ನಾನು ಪಾಂಡುರಂಗನನ್ನು ಕುರಿತು ಧ್ಯಾನಿಸುತ್ತೇನೆ, ನಾನು ಪಾಂಡುರಂಗನನ್ನು ಕುರಿತು ಯೋಚಿಸುತ್ತೇನೆ, ನಾನು ಎಚ್ಚರವಿರಲಿ ಇಲ್ಲವೆ ಕನಸಿನಲ್ಲಿರಲಿ ಪಾಂಡುರಂಗನನ್ನೇ ಕಾಣುತ್ತೇನೆ. ನನ್ನಲ್ಲಿ ಇನ್ನಾವ ಆಸೆಯೂ ಉಳಿಯದಂತೆ ನನ್ನ ಅವಯವಗಳಿಗೆಲ್ಲ ಅಭ್ಯಾಸವಾಗಿಬಿಟ್ಟಿದೆ.
ತುಕಾರಾಮನು ಹೀಗೆನ್ನುವನು
: ಯಾವ ಸಂಗತಿಯಿಂದಲೂ ವಿಚಲಿತವಾಗದ, ಧ್ಯಾನಮಗ್ನವಾದ, ಇಟ್ಟಿಗೆಯ ಮೇಲೆ ನಿಂತುಕೊಂಡ ಆ ವಿಗ್ರಹವನ್ನು ನನ್ನ ಕಣ್ಣುಗಳು ಗುರುತಿಸಿವೆ.
೧೨.
ನ ಮಿಳೋ ಖಾವಯಾ
ನ ವಾಢೋ ಸಂತಾನ
|
ಪರಿ ಹಾ ನಾರಾಯಣ ಕೄಪಾ ಕರೋ ||೧||
ಐಸೀ ಮಾಝೀ ವಾಚಾ ಮಜ ಉಪದೇಶೀ
|
ಆಣೀಕ ಲೋಕಾಂಸೀ ಹೇ ಚಿ ಸಾಂಗೇ ||ಧೄ||
ವಿಟಂಬೋ ಶರೀರ ಹೋತ ಕಾ ವಿಪತ್ತಿ
|
ಪರಿ ರಾಹೋ ಚಿತ್ತೀ ನಾರಾಯಣ ||೨||
ತುಕಾ ಮ್ಹಣೇ ನಾಸಿವಂತ ಹೇ ಸಕಳ |
ಆಠವೇ ಗೋಪಾಳ ತೇ ಚಿ ಹಿತ ||೩||
ನನಗೆ ತಿನ್ನಲು ಏನಿಲ್ಲದಿದ್ದರೂ ಏನು, ಸಂತತಿ ಬೆಳೆಯದಿದ್ದರೂ ಏನು? ನಾರಾಯಣನ ದಯೆಯೊಂದು ನನ್ನ ಮೇಲಿದ್ದರೆ ಸಾಕು. ನನ್ನ ವಾಣಿಯು ನನಗೆ ಉಪದೇಶವನ್ನು ನೀಡುವಂತೆಯೇ ಇನ್ನಿತರರಿಗೂ ಹೀಗೆ ಹೇಳುತ್ತದೆ- ದೇಹ ಬವಣೆ ಪಡಲಿ, ಸಂಕಟಗಳು ಬಂದೆರಗಲಿ, ಆದರೆ ನಾರಾಯಣನು ನನ್ನ ಹೄದಯ ಸಿಂಹಾಸನವನ್ನೇರಿ ಕುಳಿತಿರುವನು, ಅಷ್ಟು ಸಾಕು ನನಗೆ. ತುಕಾರಾಮನು ಹೀಗೆನ್ನುವನು
: ಮೇಲಿನ ಸಂಗತಿಗಳೆಲ್ಲ ನಶ್ವರವಾದವುಗಳು; ಸತತವಾಗಿ ಗೋಪಾಲನನ್ನು ಸ್ಮರಿಸುವುದರಲ್ಲಿಯೇ ನನ್ನ ಹಿತ ಅಡಕವಾಗಿದೆ.
೨೬-೧೦-೧೯೩೦
೧೩. ಮಹಾರಾಸಿ ಸಿವೇ |
ಕೋಪೇ ಬ್ರಾಹ್ಮಣ ತೋ ನವ್ಹೇ ||೧||
ತಯಾ ಪ್ರಾಯಶ್ಚಿತ್ತ ಕಾಹೀ |
ದೇಹತ್ಯಾಗ ಕರಿತಾ ನಾಹೀ ||ಧೄ||
ನಾತಳೇ ಚಾಂಡಾಳ
|
ತ್ಯಾಚಾ ಅಂತರೀ ವಿಟಾಳ ||೨||
ಜ್ಯಾಚಾ ಸಂಗ ಚಿತ್ತೀ
|
ತುಕಾ ಮ್ಹಣೇ ತೋ ತ್ಯಾ ಯಾತೀ ||೩||
ಹೊಲೆಯನ ಸ್ಪರ್ಶದಿಂದ ಕೆರಳುವವನು ಬ್ರಾಹ್ಮಣನೇ ಅಲ್ಲ. ಅವನು ತನ್ನ ಜೀವವನ್ನು ತೆತ್ತರೂ ಅವನಿಗೆ ಪ್ರಾಯಶ್ಚಿತ್ತ ಎಂಬುದಿಲ್ಲ. ಚಾಂಡಾಲನನ್ನು ಸ್ಪರ್ಶಿಸದವನ ಮನದಲ್ಲಿ ಕಲ್ಮಶವಿದೆ. ತುಕಾರಾಮನು ಹೀಗೆನ್ನುವನು
: ಮನುಷ್ಯನು ಒಂದೇ ಸವನೆ ಯೋಚಿಸುವಂತೆಯೇ ತಾನಾಗುತ್ತಾನೆ.
೨೭-೧೦-೧೯೩೦
೧೪. ಪುಣ್ಯ ಪರ಼ಉಪಕಾರ ಪಾಪ ತೇ ಪರಪೀಡಾ |
ಆಣೀಕ ನಾಹೀ ಜೋಡಾ ದುಜಾ ಯಾಸೀ ||೧||
ಸತ್ಯ ತೋ ಚಿ ಧರ್ಮ ಅಸತ್ಯ ತೇ ಕರ್ಮ |
ಆಣೀಕ ಹೇ ವರ್ಮ ನಾಹೀ ದುಜೇ ||ಧೄ||
ಗತಿ ತೇ ಚಿ ಮುಖೀ ನಾಮಾಚೇ ಸ್ಮರಣ
|
ಅಧೋಗತಿ ಜಾಣ ವಿನ್ಮುಖತೇ ||೨||
ಸಂತಾಂಚಾ ಸಂಗ ತೋ ಚಿ ಸ್ವರ್ಗವಾಸ
|
ನರ್ಕ ತೋ ಉದಾಸ ಅನರ್ಗಳಾ ||೩||
ಇನ್ನೊಬ್ಬರಿಗೆ ಒಳ್ಳೆಯದನ್ನು ಮಾಡುವುದೇ ಶ್ರೇಯಸ್ಕರ, ಇನ್ನೊಬ್ಬರಿಗೆ ತೊಂದರೆ ನೀಡುವುದೇ ಪಾಪ. ಇನ್ನು ಬೇರಾವ ಜೊತೆಯನ್ನೂ ಇದರೊಡನೆ ಹೋಲಿಸಲಾಗದು. ಸತ್ಯವೇ ಧರ್ಮ
(ಅಥವಾ ಸ್ವಾತಂತ್ರ್ಯ); ಅಸತ್ಯವೇ ದಾಸ್ಯ, ಇದರಂತಹ ಗುಟ್ಟು ಇನ್ನೊಂದಿಲ್ಲ. ಒಬ್ಬನ ತುಟಿಯ ಮೇಲಿನ ದೇವರ ನಾಮವೇ ಅವನ ಮುಕ್ತಿ,
(ನಾಮದ ಬಗೆಗಿನ) ಅನಾದರವು ಅಧೋಗತಿ, ಎಂದು ತಿಳಿ. ಒಳ್ಳೆಯದರ ಜೊತೆಗಾರಿಕೆಯು ಸ್ವರ್ಗ, ಅಧ್ಯಯನದಿಂದ ತಳೆಯಲಾದ ಉದಾಸೀನತೆಯು ನರಕ. ತುಕಾರಮನು ಹೀಗೆನ್ನುವನು
: ಹೀಗಾಗಿ ಯಾವುದು ಒಳ್ಳೆಯದು ಮತ್ತು ಯವುದು ಘಾತಕವಾದುದು ಎಂಬುದು ಸ್ಪಷ್ಟ, ಜನರು ತಮಗೆ ಬೇಕಿದ್ದುದನ್ನು ಆಯ್ದುಕೊಳ್ಳಲಿ.
೧೫. ಶೇವಟಚೀ ವಿನವಣೀ |
ಸಂತಜನೀ ಪರಿಸಾವೀ ||೧||
ವಿಸರ ತೋ
ನ ಪಡಾವಾ |
ಮಾಝಾ ದೇವಾ ತುಮ್ಹಾಸೀ ||ಧೄ||
ಪುಧೇ ಫಾರ ಬೋಲೋ ಕಾಈ |
ಅವಘೇ ಪಾಯೀ ವಿದಿತ ||೨||
ತುಕಾ ಮ್ಹಣೇ ಪಡಿಲೋ ಪಾಯಾ |
ಕರಾ ಛಾಯಾ ಕೄಪೇಚೀ ||೩||
ಇದು ನನ್ನ ಕೊನೆಯ ಪ್ರಾರ್ಥನೆ, ಓ, ಸಂತಜನರೇ, ಕಿವಿಗೊಟ್ಟು ಇದನ್ನು ಆಲಿಸಿ
: ಅಯ್ಯ ದೇವನೆ, ನನ್ನನ್ನು ಮರೆಯಬೇಡ; ಇನ್ನು ಹೆಚ್ಚೇನು ಹೇಳಲಿ, ನಿನ್ನ ಪಾವನ ಪಾದಗಳು ಎಲ್ಲವನ್ನೂ ಬಲ್ಲವು. ತುಕಾರಾಮನು ಹೀಗೆನ್ನುವನು
: ನಾನು ನಿನ್ನ ಕಾಲಿಗೆ ಬೀಳುವೆನು, ನಿನ್ನ ದಯೆಯ ಛಾಯೆ ನನ್ನ ಮೇಲೆ ಬೀಳಲಿ.
೧೬. ಹೇ ಚಿ ದಾನ ದೇಗಾ ದೇವಾ
|
ತುಝಾ ವಿಸರ
ನ ಹ್ವಾವಾ ||೧||
ಗುಣ ಗಾಯೀನ ಆವಡೀ |
ಹೇ ಚಿ ಮಾಝೀ ಸರ್ವ ಜೋಡೀ ||ಧೄ||
ನ ಲಗೇ ಮುಕ್ತಿ ಆಣಿ ಸಂಪದಾ |
ಸಂತಸಂಗ ದೇಈ ಸದಾ ||೨||
ತುಕಾ ಮ್ಹಣೇ ಗರ್ಭವಾಸೀ
|
ಸುಖೇ ಘಾಲಾವೇ ಆಮ್ಹಾಸೀ ||೩||
ಅಯ್ಯ ದೇವನೆ, ನನಗೆ ಇದೊಂದೇ ದಾನವನ್ನು ನೀಡು. ನಾನೆಂದಿಗೂ ನಿನ್ನನ್ನು ಮರೆಯೆನು; ಇದನ್ನು ಅಮೌಲ್ಯವಾದುದೆಂದು ಬಗೆಯುವೆನು. ನಾನು ಮುಕ್ತಿ, ಸಿರಿಸಂಪತ್ತು ಇಲ್ಲವೆ ಏಳಿಗೆಯನ್ನು ಬಯಸೆನು; ನನಗೆ ಯಾವಾಗಲೂ ಸಂತರ ಒಡನಾಟವನ್ನು ದಯೆಪಾಲಿಸು. ತುಕಾರಾಮನು ಹೀಗೆನ್ನುವನು
: ಈ ಷರತ್ತಿನ ಮೇಲೆ ನೀನು ನನ್ನನ್ನು ಮತ್ತೆ ಮತ್ತೆ
ಈ ಭೂಮಿಗೆ ಕಳಿಸಬಹುದು.
೨೮-೧೦-೧೯೩೦
|